ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹುಲುಗಾರು ಗ್ರಾಮದ ಬಳಿ 14 ಅಡಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಹುಲುಗಾರು ಉಮೇಶ್ ಭಟ್ ಎಂಬುವವರ ತೋಟದಲ್ಲಿ ಕಳೆ ಕೀಳುವಾಗ ಪ್ರತ್ಯಕ್ಷವಾದ ಹೆಬ್ಬಾವು ಕಂಡು ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ.

ತನ್ನ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಬೀಡು ಬಿಟ್ಟಿರುವ ವಿಚಾರ ತಿಳಿದ ಕೂಡಲೇ ಹುಲುಗಾರು ಉಮೇಶ್ ಭಟ್ ಉರಗ ತಜ್ಞರಿಗೆ ಕಾಲ್​ ಮಾಡಿದ್ದಾರೆ. ಬಳಿಕ ಉಮೇಶ್ ಭಟ್ಟರ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಹರೀಂದ್ರ ಎಂಬುವರು ಹೆಬ್ಬಾವನ್ನು ರಕ್ಷಿಸಿ ಅರಣ್ಯ ಇಲಾಖೆ ಬಿಟ್ಟಿದ್ದಾರೆ.

ಇನ್ನು, ಮೊದಲಿಗೆ ಹೆಬ್ಬಾವು ಕಂಡು ಸ್ಥಳೀಯರು ಗಾಬರಿಗೊಂಡಿದ್ದರು. ಬಳಿಕ ಉರಗ ತಜ್ಞರು ಬಂದು ಹೆಬ್ಬಾವು ಹಿಡಿದ ಕೂಡಲೇ ಅದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈಗ ಈ ಫೋಟೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

The post ತೋಟದಲ್ಲಿ ದಿಢೀರ್​​​ ಪ್ರತ್ಯಕ್ಷವಾಯ್ತು ಭಾರೀ ಗಾತ್ರದ ಹೆಬ್ಬಾವು -ಬೆಚ್ಚಿಬಿದ್ದ ಸ್ಥಳೀಯರು appeared first on News First Kannada.

Source: newsfirstlive.com

Source link