ಮಂಗಳೂರು: ತೌಕ್ತೆ ಚಂಡಮಾರುತದಿಂದಾಗಿ ಅಪಾಯಕ್ಕೆ ಸಿಲುಕಿದ್ದ 9 ಮಂದಿಯನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಕಾಪು ಬೀಚ್‌ನಿಂದ 25 ನಾಟಿಕಲ್ ಮೈಲಿ ದೂರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೋರಮಂಡಲ್ ಹೆಸರಿನ ಟಗ್​ನಲ್ಲಿ ಅಪಾಯಕ್ಕೆ ಸಿಲುಕಿದ್ದ 9 ಜನರ ಪೈಕಿಯಲ್ಲಿ ಐವರನ್ನ ಇಂಡಿಯನ್ ಕೋಸ್ಟ್​ ಗಾರ್ಡ್​ ರಕ್ಷಣೆ ಮಾಡಿದೆ.

ಕೋಸ್ಟ್ ಗಾರ್ಡ್ ಶಿಪ್ ಐಸಿಜಿ ವರಹ ನೇತೃತ್ವದಲ್ಲಿ ರಕ್ಷಣೆ ಮಾಡಿ ಕೋಸ್ಟ್​ ಗಾರ್ಡ್​ ನೌಕೆ ಮೂಲಕ ಐವರನ್ನು ಮಂಗಳೂರಿಗೆ ಕರೆ ತರಲಾಗಿದೆ. ಇದೀಗ ನವ ಮಂಗಳೂರು ಬಂದರಿಗೆ ಕೋಸ್ಟ್ ಗಾರ್ಡ್ ನೌಕೆ ಆಗಮಿಸಿದೆ.

ಇನ್ನು ಇವರ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಎನ್​ಎಂಪಿಟಿ ಬಂದರ್​ಗೆ ಭೇಟಿ ನೀಡಿ, ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಅಲ್ಲದೇ ರಕ್ಷಿಸಲಾದ ಐವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಇನ್ನು ರಕ್ಷಣೆಗೆ ಒಳಗಾದ ಐವರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದೆ.

The post ತೌಕ್ತೆಯಿಂದ ಅಪಾಯಕ್ಕೆ ಸಿಲುಕಿದ್ದ 9 ಮಂದಿ ರಕ್ಷಣಾಕಾರ್ಯ ಸಕ್ಸಸ್ appeared first on News First Kannada.

Source: newsfirstlive.com

Source link