ಬೆಂಗಳೂರು: ತೌಕ್ತೆ ಚಂಡಮಾರುತದಿಂದ ರಾಜ್ಯದಲ್ಲಿ ಆದ ನಷ್ಟದ ಬಗ್ಗೆ ರಾಜ್ಯದ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ವರದಿಯ ಪ್ರಕಾರ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಆರು ಜನರು ಬಲಿಯಾಗಿದ್ದು 547 ಜನರ ಸ್ಥಳಾಂತರ ಮಾಡಲಾಗಿದೆ.

ರಾಜ್ಯದಲ್ಲಿ ಚಂಡಮಾರುತದಿಂದಾದ ಹಾನಿ ವಿವರ..

 1. ಹಾನಿಯಾದ ತಾಲೂಕುಗಳು- 22
 2. ಒಟ್ಟು ಮನೆಗಳಿಗೆ ಹಾನಿ- 333
 3. ಗುಡಿಸಲು-57
 4. ಹಳ್ಳಿಗಳು- 121
 5. ಜನರ ಜೀವ ಹಾನಿ- 6 ಮಂದಿ ಸಾವು
 6. ಕೃಷಿ ಬೆಳೆ ನಷ್ಟ- 30 ಹೆಕ್ಟೇರ್
 7. ತೋಟಗಾರಿಕಾ ಬೆಳೆ ನಷ್ಟ- 2.87 ಹೆಕ್ಟೇರ್
 8. ಬೋಟ್‌ಗಳಿಗೆ ಹಾನಿ- 104
 9. ರಸ್ತೆ ಹಾನಿ- 57 ಕಿ.ಮೀ
 10. ವಿದ್ಯತ್ ಕಂಬಗಳ ಹಾನಿ- 644
 11. ಟ್ರಾನ್ಸ್ ಫಾರ್ಮ್ ಹಾನಿ- 147
 12. ಒಟ್ಟು ಜನರ ಸ್ಥಳಾಂತರ- 547
 13. ತಾತ್ಕಾಲಿಕ ನೆರೆಪರಿಹಾರ ಕೇಂದ್ರ-13
 14. ನೆರೆಪರಿಹಾರ ಕೇಂದ್ರದಲ್ಲಿರುವವರ ಸಂಖ್ಯೆ – 290

ಸದ್ಯ ಅರಬ್ಬೀಸಮುದ್ರದ ತೌಕ್ತೆ ಚಂಡಮಾರುತ ಗುಜರಾತ್ ಕಡೆಗೆ ಮುಖ ಮಾಡಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ.

The post ತೌಕ್ತೆ ಅಬ್ಬರಕ್ಕೆ 6 ಮಂದಿ ಬಲಿ.. 33 ಮನೆಗಳು ಧ್ವಂಸ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ appeared first on News First Kannada.

Source: newsfirstlive.com

Source link