ಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ.

ಜಿಲ್ಲೆಯ ಐದು ಮೀನುಗಾರಿಕಾ, ಕೃಷಿ ಶೆಡ್ಗಳಿಗೆ ಭಾಗಶಃ ಹಾನಿಯಾಗಿದೆ. ವಿದ್ಯುತ್ ತಂತಿ ತಗುಲಿ ಕಾಪು ತಾಲೂಕಿನ 51 ವರ್ಷದ ಕೃಷಿಕ ರಮೇಶ್ ಎಂಬ ವ್ಯಕ್ತಿ ಮತಪಟ್ಟಿದ್ದಾರೆ. ಅಪಾಯದ ಸ್ಥಳದಲ್ಲಿರುವ ಜನರನ್ನ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಬೈಂದೂರಿನ 4, ಕುಂದಾಪುರದ 7 ಕುಟುಂಬಗಳನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಬ್ರಹ್ಮಾವರದ ಕೊಡಿ, ಕಾಪು ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯವಿದ್ದರೆ ಪುನರ್ವಸತಿ ಕೇಂದ್ರಕ್ಕೆ ಇಲ್ಲಿನ ಜನರನ್ನ ಸ್ಥಳಾಂತರಿಸಲು ವ್ಯವಸ್ಥೆ ಮಾಡುವುದಾಗಿದೆ ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

 

The post ‘ತೌಕ್ತೆ’ ಆರ್ಭಟಕ್ಕೆ ನೆಲಕಚ್ಚಿದ 8 ಮನೆಗಳು, ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು appeared first on News First Kannada.

Source: newsfirstlive.com

Source link