ಮಂಗಳೂರು: ತೌಕ್ತೆ ಚಂಡಮಾರುತದ ಎಫೆಕ್ಟ್​ಗೆ ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿರೋ ಹಿಂದೂ ರುದ್ರಭೂಮಿ ಸಮುದ್ರದ ಪಾಲಾಗಿದೆ.

ದಡಕ್ಕೆ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ಪರಿಣಾಮ ಸ್ಮಶಾನ ಸಮುದ್ರ ಪಾಲಾಗಿದೆ. ನಿನ್ನೆ ಸಮುದ್ರದ ಅಲೆಗಳ ಅಬ್ಬರಕ್ಕೆ ಸ್ಮಶಾನದ ತಡೆಗೋಡೆ ಕುಸಿದಿತ್ತು, ಸದ್ಯ, ಮೊಬೈಲ್ ಕ್ಯಾಮೆರಾದಲ್ಲಿ ಸ್ಮಶಾನ ಕುಸಿತದ ವಿಡಿಯೋ ಸೆರೆಯಾಗಿದೆ. ಇದಷ್ಟೇ ಅಲ್ಲದೆ ಭಾರೀ ಅಲೆಗಳ ಹೊಡೆತದಿಂದಾಗಿ ಕರಾವಳಿ ತೀರದಲ್ಲಿ ನೆಲೆಸಿರುವ ನೂರಾರು ಮೀನುಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಮನೆಗಳು ಹಾನಿಗೊಳಗಾಗುವ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

The post ತೌಕ್ತೆ ಚಂಡಮಾರುತದ ಅಬ್ಬರ: ಸಮುದ್ರದ ಪಾಲಾಯ್ತು ಹಿಂದೂ ರುದ್ರಭೂಮಿ appeared first on News First Kannada.

Source: newsfirstlive.com

Source link