ಉಡುಪಿ: ತೌಕ್ತೆ ಚಂಡಮಾರುತದಿಂದ ಉಡುಪಿಯ ಮರವಂತೆಯಲ್ಲಿ ಭಾರೀ ಕಡಲ್ಕೊರೆತ ಸಂಭವಿಸಿದೆ. ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರದ ಪಾಲಾಗಿವೆ.

ಸಮುದ್ರದಿಂದ ಸುಮಾರು 30 ಮೀಟರ್​ಗಳಷ್ಟು ಮುಂದಕ್ಕೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ಕಡಲಿನ ರೌದ್ರಾವತಾರ ಕಂಡು ಸಮುದ್ರ ತೀರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲೆಗಳ ತೀವ್ರತೆ ಮುಂದುವರೆದರೆ ತೀರದಲ್ಲಿರುವ ಮನೆಗಳಿಗೂ ಸಹ ಹಾನಿಯಾಗುವ ಸಾಧ್ಯತೆಗಳಿವೆ.

The post ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಮರವಂತೆ ಕಿನಾರೆ ಕಡಲ್ಕೊರೆತ; ಆತಂಕದಲ್ಲಿ ಜನ appeared first on News First Kannada.

Source: newsfirstlive.com

Source link