ಅರಬ್ಬೀ ಸಮುದ್ರದಲ್ಲಿ ಭಾರೀ ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಈಗಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ವಾಪಸ್ಸಾಗುವಂತೆ ಇಂಡಿಯನ್ ಕೋಸ್ಟ್ ಗಾರ್ಡ್ಸ್ ಪಡೆ​ ಸೂಚನೆ ನೀಡಿದೆ.

ಹಡಗಿನ ಮೂಲಕ ಸಮುದ್ರ ಕರಾವಳಿಯ ಉದ್ದಕ್ಕೂ ಕೋಸ್ಟ್ ಗಾರ್ಡ್ಸ್​ ಪಡೆಯ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ. ತೌಕ್ತೆ ಹೆಸರಿನ ಚಂಡಮಾರುತ ಮೇ 16ರ ವೇಳೆಗೆ ಕೇರಳ, ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮೇ 14ರಿಂದ 16ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

The post ತೌಕ್ತೆ ಚಂಡಮಾರುತ ಭೀತಿ: ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ appeared first on News First Kannada.

Source: newsfirstlive.com

Source link