ತೌಕ್ತೆ ಬಳಿಕ ಶಾಂತವಾಗದ ಕಡಲು: ಅಲೆಗಳ ಹೊಡೆತಕ್ಕೆ ಕಿನಾರೆಗೆ ಬಂದು ಬಿದ್ದ ಬೋಟ್​

ತೌಕ್ತೆ ಬಳಿಕ ಶಾಂತವಾಗದ ಕಡಲು: ಅಲೆಗಳ ಹೊಡೆತಕ್ಕೆ ಕಿನಾರೆಗೆ ಬಂದು ಬಿದ್ದ ಬೋಟ್​

ಮಂಗಳೂರು: ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಎಫೆಕ್ಟ್ ಇನ್ಮೂ ಕಡಿಮೆಯಾಗಿಲ್ಲ. ಕಡಲು ಶಾಂತವಾಗದೇ ಪಕ್ಷುಬ್ದತೆ ಮುಂದುವರೆದಿದೆ.

ಮಂಗಳೂರು ಹೊರವಲಯದ ಉಳ್ಳಾಲ ಸಮೀಪ ಮೀನುಗಾರಿಕೆಗೆ ತೆರಳಿ ವಾಪಸಾಗಿದ್ದ ಬೋಟ್​ವೊಂದು ಅಲೆಗಳ ಹೊಡೆತದಿಂದ ಹಾನಿಗೀಡಾಗಿದೆ. ಬೋಟ್​​ನ ಆ್ಯಂಕರ್ ತುಂಡಾಗಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಅನಾಸ್ ಹೆಸರಿನ ಬೋಟ್ ಕಿನಾರೆಗೆ ಬಂದು ಬಿದ್ದಿದೆ.

ಈ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೋಟ್​​ಗೆ ಹಾನಿಯಾಗಿರೋದ್ರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

The post ತೌಕ್ತೆ ಬಳಿಕ ಶಾಂತವಾಗದ ಕಡಲು: ಅಲೆಗಳ ಹೊಡೆತಕ್ಕೆ ಕಿನಾರೆಗೆ ಬಂದು ಬಿದ್ದ ಬೋಟ್​ appeared first on News First Kannada.

Source: newsfirstlive.com

Source link