ಅಹಮದಾಬಾದ್: ತೌಕ್ತೆ ಚಂಡಮಾರುತದಿಂದ ಸಾಕಷ್ಟು ಹಾನಿ ಉಂಟಾಗಿರೋ ಹಿನ್ನೆಲೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುಜರಾತ್ ಮತ್ತು ದಿಯುಗೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 9.30ಕ್ಕೆ ದೆಹಲಿಯಿಂದ ಹೊರಟು ಗುಜರಾತ್​​ನ ಭಾವನಗರದಲ್ಲಿ ಇಳಿಯಲಿದ್ದು, ಅಲ್ಲಿಂದ ಉನಾ, ದಿಯು, ಜಫರಾಬಾದ್ ಮತ್ತು ಮಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಮೋದಿ ಅಹಮದಾಬಾದ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ನಿನ್ನೆ ರಾತ್ರಿ 8.30ಕ್ಕೆ ತೌಕ್ತೆ ಗುಜರಾತ್​​ನಲ್ಲಿ ಲ್ಯಾಂಡ್​​ಫಾಲ್ ಆಗಿದ್ದು, 155-165 ವೇಗದಲ್ಲಿ ಗಾಳಿ ಬೀಸುತ್ತಿತ್ತು. ಚಂಡಮಾರುತದ ಅಬ್ಬರದಿಂದ ಗುಜರಾತ್​ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಸೈಕ್ಲೋನ್​​​ ಹೊಡೆತಕ್ಕೆ 16,000 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ, 40,000 ಕ್ಕೂ ಹೆಚ್ಚು ಮರಗಳು ಮತ್ತು 1,000ಕ್ಕೂ ಹೆಚ್ಚು ವಿದ್ಯುತ್​ ಕಂಬಗಳು ಧರೆಗುರುಳಿವೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

The post ತೌಕ್ತೆ ಸೈಕ್ಲೋನ್ ಹಾನಿ: ಇಂದು ಗುಜರಾತ್-ದಿಯು​​​ಗೆ ಪ್ರಧಾನಿ ಭೇಟಿ appeared first on News First Kannada.

Source: newsfirstlive.com

Source link