ಹಾವೇರಿ: ತ್ರಿಪುರಾದಲ್ಲಿ ನಡೆಯುತ್ತಿರುವ ಕೋಮುಗಲಭೆ ವಿರೋಧಿಸಿ ಪ್ರತಿಭಟನೆ ವೇಳೆ ಅನ್ಯ ಕೋಮಿನ ಯುವಕರು ಆರ್ಎಸ್ಎಸ್ ಪ್ರಮುಖರ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರವಾದ ಜಿಲ್ಲೆಯ ಸವಣೂರಿನಲ್ಲಿ ಈ ಘಟನೆ ನಡೆದಿದ್ದು ಪ್ರತಿಭಟನೆ ವೇಳೆ ಯುವಕರು ಆರ್ಎಸ್ಎಸ್ ಪ್ರಮುಖರ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಹಿಂದೂಸ್ತಾನ ಮೆ ರಹೆನಾ ಹೋತೋ, ಖಾಜಾ ಖಾಜಾ ಕಹನಾ ಹೋಗಾ. ಆರ್ಎಸ್ಎಸ್ ಮುರ್ದಾಬಾದ್ ಎಂಬ ಆಕ್ಷೇಪಾರ್ಹ ಘೋಷಣೆಗಳನ್ನು ಯುವಕರು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಂದು ನಗರದ ಹಲವು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಮತ್ತೊಂದು ಕೋಮಿನ ಯುವಕರ ವರ್ತನೆ ಕಂಡು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಪೋಲಿಸ್ ಠಾಣೆಯ ಮುಂದೆ ಧರಣಿ ಕುಳಿತಿವೆ. ಈ ವೇಳೆ ದೇಶ ದ್ರೋಹಿ ಹೇಳಿಕೆಗಳನ್ನ ಕೂಗಿದವರನ್ನು ಮತ್ತು ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ಗೆ ತೆರೆ ಬೆನ್ನಲ್ಲೇ ಪಾಕ್ಗೆ ಅನ್ಯಾಯ ಆಗಿದೆ ಎಂದು ಕ್ಯಾತೆ ತೆಗೆದ ರಾವಲ್ಪಿಂಡಿ ಎಕ್ಸ್ಪ್ರೆಸ್