ಅಂತು ಇಂತು 2ನೇ ಕೊರೊನಾ ಮಾರಿ ತಣ್ಣಗಾಗಿ ಸಣ್ಣಗಾಗುತ್ತಿದೆ. ಸಿನಿಮಾ ರಂಗದ ಜೀವಾಳ ಫಿಲ್ಮ್ ಥಿಯೇಟರ್ ಯಾವಾಗ ಓಪನ್ ಆಗುತ್ತೆ ಎಂದು ಚಿತ್ರರಂಗದ ಮಂದಿ ಆಕಾಶ ನೋಡ್ತಿದ್ದಾರೆ. ಈ ರೈಟ್ ಟೈಮ್​​ನಲ್ಲಿ ಚಿತ್ರಮಂದಿಗಳು ಓಪನ್ ಆದ್ರೆ ನಮ್ಮದೆ ಮೊದಲ ರಂಜನೆಯ ಪೂಜೆ ಎಂದು ಸಾರಿದೆ ‘ಸಲಗ’ ಸಿನಿ ಬಳಗ.

ಎಲ್ಲಾ ಚಿತ್ರರಂಗದಂತೆ ಕನ್ನಡ ಬೆಳ್ಳಿತೆರೆ ಶಾಂತವಾಗಿದೆ. ಬೆಳಕಿಲ್ಲದೆ ಮರುಗಿದೆ, ಪ್ರೇಕ್ಷಕ ಪ್ರಭುಗಳಿಲ್ಲದೆ ಕೊರಗಿದೆ. ಇನೇನು ಎರಡನೇ ಲಾಕ್​​ಡೌನ್ ಮುಗಿತಾ ಬಂತು ನಿಧಾನವಾಗಿ ಅನ್​​​ಲಾಕ್ ಪ್ರಕ್ರಿಯೆಯಿಂದ ಎಲ್ಲವೂ ಸಡಿಲವಾಗುತ್ತಿದೆ. ಆದ್ರೆ ಚಿತ್ರರಂಗಕ್ಕೆ ಮಾತ್ರ ಸರ್ಕಾರ ಬೀಗ ಜಡಿದಿದೆ. ಒಂದ್ವೇಳೆ ಚಿತ್ರಮಂದಿಗಳು ತೆರೆದು ಹಂಡ್ರೆಡ್ ಪರಸೆಂಟ್ ಜನ ಬಂದು ಕುರಲು ಅವಕಾಶ ಕೊಟ್ರೆ ಕನ್ನಡದಲ್ಲಿ ಮೊದಲ ಬಿಗ್ ಮನೋರಂಜನೆ ಯಾರದ್ದು ಎಂದು ಕೇಳಿದಾಗ ಸಿಗೋ ಉತ್ತರ ಸಲಗ.ಬೆಳ್ಳಿ ಪರದೆಗೆ ‘ಸಲಗ’ನದ್ದೇ ಮೊದಲ ರಂಜನೆಯ ಪೂಜೆ

ಕನ್ನಡಿಗರನ್ನ ರಂಜಿಸಲು ‘ಸಲಗ’ ಇಡ್ತಿದ್ದಾನೆ ಮೊದಲ ಹೆಜ್ಜೆ

ಎರಡನೇ ಲಾಕ್​ಡೌನ್ ಸಡಿಲವಾಗುತ್ತಿದೆ. ಈ ತಿಂಗಳ ಮಧ್ಯ ಅಥವಾ ಕಡೆಯ ಹಂತದಲ್ಲಿ ಥಿಯೇಟರ್​​ ಓಪನಿಂಗ್​​​ಗೆ ಅವಕಾಶ ಸಿಗೋ ಸಾಧ್ಯತೆ ಇವೆ. ಜನ ಥಿಯೇಟರ್​​​ ಕಡೆ ತಿರುಗಿ ನೋಡಬೇಕು, ಮತ್ತೆ ರಂಜನೆಯ ಜಾತ್ರೆಗಳು ಅಭಿಮಾನ ಯಾತ್ರೆಗಳು ಚಿತ್ರಮಂದಿಗಳ ಮುಂದೆ ಆಗಬೇಕು ಅಂದ್ರೆ ಕ್ರೇಜ್ ಹುಟ್ಟಿಸುವ ಸಿನಿಮಾಗಳು ಬೆಳ್ಳಿ ಅಂಗಳದಲ್ಲಿ ಅರಳಬೇಕು.

ಪೋಸ್ಟರ್ಸ್, ಮೇಕಿಂಗ್, ಟೀಸರ್​ಗಳಿಂದ ಗಮನ ಸೆಳೆದಿರುವ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದ ಮೇಲೆ ಅಪಾರ ನಿರೀಕ್ಷೆಗಳಿವೆ. ಮತ್ತೆ ಥಿಯೇಟರ್​ಗಳ ಒಳಗೆ ರಂಜನೆಯ ರುಚಿಯನ್ನ ಹತ್ತಿಸೋ ಸಿನಿಮಾಗಳು ಬಂದ್ರಷ್ಟೆ ಹಳೆ ಅಭಿಮಾನದ ಹಬ್ಬ ಮರುಕಳಿಸೋದು. ಈ ಕಾರಣಕ್ಕೆ ಸಲಗ ತಂಡ ಬೆಳ್ಳಿ ಪರದೆಗೆ ನಮ್ಮದೆ ಮೊದಲ ರಂಜನೆಯ ಪೂಜೆ , ಕನ್ನಡಿಗರನ್ನ ರಂಜಿಸಲು ನಮ್ಮದೆ ಮೊದಲ ಹೆಜ್ಜೆ ಎಂದು ಸಾರಿದೆ. ಸಿನಿಮಂದಿರಗಳು ಓಪನ್ ಆಗಿ 100 ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಗುತ್ತಿದ್ದಂಗೆ ಸಲಗ ಬಳಗ ಥಿಯೇಟರ್​ಗಳ ಮುಂದೆ ನಿಲ್ಲಲಿದೆ.

ಸಿನಿಮಾ ರಿಲೀಸ್ ಬಗ್ಗೆ ಸಲಗ ಸಿನಿಮಾದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನ್ಯೂಸ್​ಫಸ್ಟ್​ ತಂಡಕ್ಕೆ ಮಾಹಿತಿ ನೀಡಿದ್ದು 100 ಪರ್ಸೆಂಟ್​ ಸೀಟು ಭರ್ತಿಗೆ ಅವಕಾಶ ಸಿಕ್ಕ ಕೊಡ್ಲೇ ನಮ್ಮದೆ ಮೊದಲ ಹೆಜ್ಜೆ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೆ ಸಿನಿರಂಗದಲ್ಲಿ ರಂಜನೆ ರಂಗಾವಲ್ಲಿ ಮೂಡಬೇಕಿದೆ , ಜನ ಮನ ರಂಜನೆಯ ರಸಪಾಕವನ್ನ ಸವಿಯಬೇಕಿದೆ.

The post ಥಿಯೇಟರ್​ಗಳು ಕಂಪ್ಲೀಟ್ ಓಪನ್ ಆದ್ಮೇಲೆ ಬಿಡುಗಡೆಯಾಗೋ ಮೊದಲ ಕನ್ನಡ ಸಿನಿಮಾ ಇದೇ appeared first on News First Kannada.

Source: newsfirstlive.com

Source link