ಟಾಲಿವುಡ್ ಸ್ಟಾರ್ ಬಾಲಯ್ಯರ ‘ಅಖಂಡ’ ಸಿನಿಮಾ ನೋಡುತ್ತಿರುವಾಗಲೇ ಅಭಿಮಾನಿಯೊಬ್ಬರು ಬ್ರೈನ್ ಸ್ಟ್ರೋಕ್ನಿಂದ ಸಾವನ್ನಪ್ಪಿದ್ದಾರೆ. ರಾಮಕೃಷ್ಣ ಮೃತ ಬಾಲಯ್ಯರ ಅಭಿಮಾನಿ. ಇವರು ಜನಪ್ರಿಯ ಚಿತ್ರ ವಿತರಕ ಕೂಡ ಆಗಿದ್ದರು.
ಬಾಲಯ್ಯರ ಅಭಿಮಾನಿ ರಾಮಕೃಷ್ಣ ಎಂಬ ವ್ಯಕ್ತಿ ಪೂರ್ವ ಗೋದಾವರಿ ಜಿಲ್ಲೆಯ ರಾಜಾಜಿನಗರದ ಶ್ಯಾಮಲಾ ಥಿಯೇಟರ್ನಲ್ಲಿ ‘ಅಖಂಡ’ ಸಿನಿಮಾವನ್ನು ನೋಡುತ್ತಿರುವಾಗಲೇ ಬ್ರೈನ್ ಸ್ಟ್ರೋಕ್ ಆಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದ್ದು ಬಿದ್ದಿದ್ದಾರೆ. ತಕ್ಷಣ ಥಿಯೇಟರ್ ಆಡಳಿತ ಮಂಡಳಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಸ್ಪತ್ರೆ ತಲುಪುವ ಮುನ್ನವೇ ರಾಮಕೃಷ್ಣ ಕೊನೆಯುಸಿರೆಳೆದಿದ್ದಾರೆ.
ಮೃತ ರಾಮಕೃಷ್ಣ, ಚಿತ್ರಮಂದಿರಗಳ ಮಾಲೀಕರಾಗಿದ್ದು ಪೂರ್ವ ಗೋದಾವರಿ ಜಿಲ್ಲೆಯ ಸಿನಿಮಾ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಕೂಡ ಆಗಿದ್ದರು. ‘ಅಖಂಡ’ ಚಿತ್ರತಂಡ ಇವರ ನಿಧನಕ್ಕೆ ಸಂತಾಪ ಸೂಚಿಸಿದೆ. ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾ ಸದ್ಯ ಬಹುತೇಕ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.