ಕೊರೊನಾ ಎರಡನೇ ಅಲೆ ಅಪ್ಪಳಿಸದೇ ಹೋಗಿದ್ದರೇ ಇದಾಗಲೇ ಕಿಚ್ಚ ಸುದೀಪ್​ ಮೋಸ್ಟ್​ ಎಕ್ಸ್​​​ಪೆಕ್ಟೆಡ್​​ ಕೋಟಿಗೊಬ್ಬ-3 ಸಿನಿಮಾ ರಿಲೀಸ್​ ಆಗ್ತಿತ್ತು. ಏಪ್ರಿಲ್​ 29ರಂದು ಸಿನಿಮಾ ಬಿಡುಗಡೆ ಮಾಡೋದಾಗಿ ಚಿತ್ರತಂಡ ಅಧಿಕೃತ ಅನೌನ್ಸ್​ಮೆಂಟ್​ ಕೂಡ ಮಾಡಿತ್ತು. ಆದ್ರೆ ಕೊರೊನಾ ಹೊಡೆತದಿಂದ ಮತ್ತೆ ಚಿತ್ರರಂಗದ ಪ್ಲ್ಯಾನ್​ ತಲೆಕೆಳಗಾಗಿದೆ. ಇದೀಗ OTTಯಲ್ಲಿ ಕೋಟಿಗೊಬ್ಬ-3 ರಿಲೀಸ್​ ಆಗುತ್ತೆ ಅನ್ನೋ ವಿಚಾರ ಕೇಳಿ ಬರ್ತಿರುವಂತೆ, ನಿರ್ಮಾಪಕ ಸೂರಪ್ಪ ಬಾಬು ಕಿಚ್ಚನ ಕೋಟಿಗೊಬ್ಬ-3 ಥಿಯೇಟರ್​​ಗಳಲ್ಲಿ 100 ಕೋಟಿ ದೋಚೋದಾಗಿ ಹೇಳಿಕೊಂಡಿದ್ದಾರೆ.

ಹೌದು.. ರಿಲೀಸ್​ಗೂ ಮುನ್ನವೇ ಕಿಚ್ಚನ ಬಹು ನಿರೀಕ್ಷಿತ ಸಿನಿಮಾದ ಗಳಿಕೆಯ ಪ್ರೆಡಿಕ್ಷನ್​ ಕೇಳಿ ಬರ್ತಿದೆ. ರಿಲೀಸ್​ ಇನ್ನೂ ತಡವಾಗಬಹುದು ಅನ್ನೋ ಹಿನ್ನೆಲೆಯಲ್ಲಿ OTT ಪ್ಲಾಟ್​​ಫಾರ್ಮ್​ವೊಂದು 35 ಕೋಟಿ ರೂಪಾಯಿಗೆ ಕೋಟಿಗೊಬ್ಬ-3 ಸಿನಿಮಾ ಕೊಂಡುಕೊಳ್ಳುವ ಪ್ರಪೋಸಲ್​ ನೀಡಿದೆ ಎನ್ನಲಾಗ್ತಿದೆ. ಆದ್ರೆ OTT ಪ್ರಪೋಸಲ್​ನ ತಳ್ಳಿ ಹಾಕಿರೋ ಕೋಟಿಗೊಬ್ಬ-3 ಚಿತ್ರತಂಡ, ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡೋದಾಗಿ ಪಣ ತೊಟ್ಟಿದ್ದಾರೆ.

ಇದಕ್ಕೆ ಕಾರಣವೂ ಇದೆ. ಚಿತ್ರಮಂದಿರಗಳಲ್ಲಿ 100 ಕೋಟಿ ರೂಪಾಯಿ ದೋಚುವ ಚಿತ್ರವನ್ನ ಯಾಕೆ ಕಡಿಮೆ ಬೆಲೆಗೆ OTT ಗೆ ನೀಡಬೇಕು ಅನ್ನೋ ಪ್ರಶ್ನೆ ಎತ್ತಿದ್ದಾರೆ ಕೋಟಿಗೊಬ್ಬ-3 ನಿರ್ಮಾಕ ಸೂರಪ್ಪ ಬಾಬು. ಸೋ.. ರಿಲೀಸ್​ಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಕೋಟಿಗೊಬ್ಬ-3 ಸಿನಿಮಾ, ಇದೀಗ ನಿರ್ಮಾಪಕರ ಮಾತಿನಿಂದ ಇನ್ನಷ್ಟು ತೂಕ ಪಡೆದುಕೊಂಡಿದೆ. ಥಿಯೇಟರ್​ಗಳಲ್ಲಿ 100 ಕೋಟಿ ರೂಪಾಯಿ ಗಳಿಸಲಿದೆ ಅನ್ನೋ ಮಾತು ಕಿಚ್ಚನ ಅಭಿಮಾನಿ ಬಳಗಕ್ಕೂ ಖುಷಿ ನೀಡಿದೆ. ಅಂದ್ಹಾಗೇ ತಮಿಳಿನ ಶಿವ ಕಾರ್ತಿಕ್​ ಆ್ಯಕ್ಷನ್​ ಕಟ್​ ಹೇಳಿರುವ ಕೋಟಿಗೊಬ್ಬ-3ಗೆ, ಕಿಚ್ಚ ಸುದೀಪ್​ ಕಥೆ ಹೆಣೆದಿದ್ದಾರೆ. ಮಲಯಾಳಂ ನಟಿ ಮಡೋನಾ ಸೆಬಾಸ್ಟಿನ್​​ ಕನ್ನಡಕ್ಕೆ ಈ ಸಿನಿಮಾ ಮೂಲಕ ಡೆಬ್ಯೂ ಮಾಡ್ತಿದ್ದಾರೆ.

The post ಥಿಯೇಟರ್​​ನಲ್ಲಿ ₹100 ಕೋಟಿ ದೋಚುತ್ತೆ.. ನಾವ್ಯಾಕೆ OTTಗೆ ಹೋಗೋಣ? -ಕೋಟಿಗೊಬ್ಬ-3 ನಿರ್ಮಪಕ appeared first on News First Kannada.

Source: newsfirstlive.com

Source link