ಥಿಯೇಟರ್​ ಮುಂದೆ ‘ಶೋಕಿವಾಲ’ ನಟಿ ಸಂಜನಾ ಆನಂದ್​ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ | Shokiwala actress Sanjana Anand dance in front of theatre in Bengaluru


ನಟಿ ಸಂಜನಾ ಆನಂದ್​ ಅವರು ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಡೊಳ್ಳಿನ ಸದ್ದಿಗೆ ಅವರು ನಟ ಗಿರಿ ಜೊತೆ ಕುಣಿದಿದ್ದಾರೆ.

[embed]https://www.youtube.com/watch?v=cOtX2PZSCG0[/embed]

ನಟಿ ಸಂಜನಾ ಆನಂದ್​ (Sanjana Anand) ಅವರು ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ‘ಸಲಗ’ ಸಿನಿಮಾ ಮೂಲಕ ಅವರು ಭರ್ಜರಿ ಗೆಲುವು ಕಂಡರು. ಈ ವಾರ (ಏ.29) ಸಂಜನಾ ಆನಂದ್​ ಮತ್ತು ಅಜಯ್​ ರಾವ್ (Krishna Ajay Rao)​ ಜೋಡಿಯಾಗಿ ನಟಿಸಿರುವ ‘ಶೋಕಿವಾಲ’ ಸಿನಿಮಾ ರಿಲೀಸ್​ ಆಗಿದೆ. ಪ್ರತಿ ಶುಕ್ರವಾರ ಹೊಸ ಚಿತ್ರ ಬಿಡುಗಡೆ ಆಗುವಾಗ ಥಿಯೇಟರ್​ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ಅಭಿಮಾನಿಗಳು ಕುಣಿದು ಕುಪ್ಪಳಿಸುವುದು ಸಹಜ. ಆದರೆ ಇಂದು ಸ್ವತಃ ಸಂಜನಾ ಆನಂದ್​ ಅವರು ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಡೊಳ್ಳಿನ ಸದ್ದಿಗೆ ಅವರು ನಟ ಗಿರಿ ಜೊತೆ ಕುಣಿದಿದ್ದಾರೆ. ‘ಶೋಕಿವಾಲ’ (Shokiwala Movie) ಸಿನಿಮಾಗೆ ಜಾಕಿ (ತಿಮ್ಮೇಗೌಡ) ನಿರ್ದೇಶನ ಮಾಡಿದ್ದಾರೆ. ಟಿ.ಆರ್​. ಚಂದ್ರಶೇಖರ್​ ನಿರ್ಮಾಣ ಮಾಡಿದ್ದಾರೆ.


TV9 Kannada


Leave a Reply

Your email address will not be published.