ಥೂ.. ಥೂ.. ಅಂತೀರಾ ನಾನೇನ್​ ಮಾಡಿದ್ದೀನಿ -ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ


ಬೆಳಗಾವಿ: ಡಿಸೆಂಬರ್ 10ಕ್ಕೆ ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್​ ಪ್ರಚಾರ ಕಾರ್ಯವನ್ನು ಬಿರುಸಿನಿಂದ ನಡೆಸುತ್ತಿದೆ. ಅದರಲ್ಲೂ ಸಹೋದರ ಚನ್ನರಾಜ್​ ಹಟ್ಟಿಹೊಳಿರನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲದಲ್ಲಿ ಮಾತನಾಡಿರೋ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿರೋಧಿ ಪಕ್ಷದ ನಾಯಕರ ಹೇಳಿಕೆಗೆ ಟಾಂಗ್​ ಕೊಟ್ಟಿದ್ದಾರೆ.

ಸಭೆಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಚುನಾವಣೆಯಲ್ಲಿ ಪಕ್ಷ ಆಶೀರ್ವಾದ ಮಾಡಿದ ಹಿನ್ನೆಲೆ ಸ್ಪರ್ಧೆ ಮಾಡಿದ್ದೇವೆ. ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಆದರೇ ಮೂರನೇ ಅವರದು ಏನ್ ಕೆಲಸ. ಹೋದ ಸಲ ನಮ್ಮ ಪಕ್ಷದಲ್ಲಿ ಇದ್ದು ನಮಗೆ ಅನ್ಯಾಯ ಮಾಡಿದ್ರು. ಈಗ ಬಿಜೆಪಿಯಲ್ಲಿ ಇದ್ದು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸೋದು ಅವರ ಗುರಿ. ನಾನೇನು ಮಾಡಿದ್ದೇನೆ ನನ್ನ ಪಕ್ಷದಲ್ಲಿ ನಾನು ಬೆಳೆಯಬಾರದ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡದೆ ಕಿಡಿಕಾರಿದರು.

ಸತೀಶ್​ ಜಾರಕಿಹೊಳಿನೇ ಮಾಸ್ಟರ್​​ ಮೈಂಡ್​..

ಥೂ.. ಥೂ.. ಏನಲು ನಾನು ಮಾಡಿದ್ದೇನೆ. ಒಬ್ಬ ಲಿಂಗಾಯತ ಸಮಾಜದ ಹೆಣ್ಣು ಮಗಳಿಗೆ ಹೀಗೆ ಎಂದಿದ್ದಾರೆ. ಇದರಿಂದ ಇಡೀ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ. ಬೆಳಗಾವಿ ಜಿಲ್ಲಾ ರಾಜಕಾರಣ ಯಾವ‌ ದಿಕ್ಕಿನತ್ತ ಸಾಗುತ್ತಿದೆ. ಸತೀಶ್ ಜಾರಕಿಹೊಳಿ ಮುಖಂಡತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಕುಟುಂಬದ ಮಾಸ್ಟರ್ ಮೈಂಡ್, ಇಡೀ ಕುಟುಂಬದ ಕಿರೀಟ. ಚುನಾವಣೆಯಲ್ಲಿ ಸ್ವಾಭೀಮಾನ ಮಾರಾಟ ಮಾಡಿಕೊಳ್ಳಬೇಡಿ. ಗ್ರಾಮ ಪಂಚಾಯತಿ ಸದಸ್ಯರಿಗೆ ಬೆದರಿಕೆ ಸಹ ಹಾಕುತ್ತಿದ್ದಾರೆ. ಮುಂದೆ ಮಂತ್ರಿಯಾದ ಮೇಲೆ ನೋಡಿಕೊಳ್ಳುತ್ತೇವೆ ಎಂದು ಕುಡುಚಿಯಲ್ಲಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದರು. ಅಲ್ಲದೇ ರಾಣಿ ಚೆನ್ನಮ್ಮ, ನಟ ಪುನಿತ್ ರಾಜಕುಮಾರ್ ಬದುಕಲಿಲ್ಲ. ಇನ್ನೂ ನಾವು ನೀವು ಯಾವ ಲೆಕ್ಕ ಎಂದರು.

The post ಥೂ.. ಥೂ.. ಅಂತೀರಾ ನಾನೇನ್​ ಮಾಡಿದ್ದೀನಿ -ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ appeared first on News First Kannada.

News First Live Kannada


Leave a Reply

Your email address will not be published. Required fields are marked *