ಬೆಂಗಳೂರು: ಅವ್ರಿಬ್ರೂ.., ಕಳ್ಳರು ಖದೀಮರು ಸ್ಮಗ್ಲರ್ ಗಳನ್ನ ಬೆನ್ನತ್ತಿ ಹಿಡಿಬೇಕಿದ್ದ ಪೊಲೀಸ್ರು. ಆದ್ರೆ ಹಣದ ಅತಿಯಾಸೆಗೆ ಬಿದ್ದೋರು ಸೀಜ್ ಮಾಡಿದ ಸ್ಮಗ್ಲಿಂಗ್ ಗೂಡ್ಸನ್ನೆ ಸೇಲ್ ಮಾಡ್ಲಿಕ್ಕೆ ಮುಂದಾಗಿದ್ರು ಎನ್ನಲಾಗಿದೆ. ಸ್ಮಗ್ಲಿಂಗ್ ಮಾಲ್ ಅನ್ನೇ ಲೂಟ್ ಮಾಡ್ಲಿಕ್ಕೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ಸದ್ಯಕ್ಕೆ ಸಸ್ಪೆಂಡ್ ಆಗಿದ್ದು, ತನಿಖೆಗೆ ಕಮಿಷನರ್ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಮತೇಶ್ ಗೌಡ ಹಾಗೂ ಮೋಹನ ವೃತ್ತಿಯಲ್ಲಿ ಇಬ್ಬರು ಪೊಲೀಸ್ ಹೆಡ್ ಕಾನ್ಸ್ಟೇಬಲ್ಸ್ಗಳು. ಮಮತೇಶ್ ಸದ್ಯ ಮಹಾದೇವಪುರ ಠಾಣೆಯಲ್ಲಿ ಹಾಗೂ ಮೋಹನ ಗಿರಿನಗರ ಠಾಣೆಯಲ್ಲಿ ಹೆಡ್ ಕಾನ್ಸ್’ಟೇಬಲ್ಸ್ ಗಳಾಗಿದ್ರು. 2018 ರಿಂದ ಬೆಂಗಳೂರು ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಇಬ್ಬರನ್ನು ಇತ್ತೀಚೆಗೆ ಗಿರಿನಗರ ಹಾಗೂ ಮಹಾದೇವಪುರಕ್ಕೆ ಟ್ರಾನ್ಸ್ ಫರ್ ಮಾಡಲಾಗಿತ್ತು.
ಈ ಹಿಂದೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರಿಗೂ ರೆಡ್ ಸ್ಯಾಂಡಲ್ ಅಡ್ಡೆಗಳು ಹಾಗೂ ಸ್ಮಗ್ಲರ್ ಗಳ ಬಗ್ಗೆ ಚೆನ್ನಾಗಿಯೇ ಮಾಹಿತಿ ಇತ್ತು ಎನ್ನಲಾಗಿದೆ. ಅಲ್ಲದೇ ಸಿಸಿಬಿಯಿಂದ ರಕ್ತಚಂದನ ಅಡ್ಡೆಗಳ ಮೇಲೆ ನಡೆದಿದ್ದ ಹಲವು ದಾಳಿಗಳಲ್ಲಿ ಇಬ್ಬರು ಭಾಗವಹಿಸಿದ್ರು. ಹೀಗಾಗಿ ರಕ್ತಚಂದನ ಸ್ಮಗ್ಲಿಂಗ್ ಬಗ್ಗೆ ಮೊದಲೇ ತಿಳಿದಿದ್ದ ಮೋಹನ್ ಹಾಗೂ ಮಾಲತೇಶ್, ಕಳೆದ ಡಿಸೆಂಬರ್ 15 ರಂದು ಹೊಸಕೋಟೆಯ ಸಂತೇಸರ್ಕಲ್ ಬಳಿ ದಾಳಿ ಮಾಡಿದ್ದಾರೆ.

ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ತೆರಳಿದ್ದ ಮೋಹನ್ ಮಮತೇಶ್ ಚಿಂತಾಮಣಿಯಿಂದ ಬರ್ತಿದ್ದ ರಕ್ತಚಂದನ ತುಂಬಿದ್ದ ಟಾಟಾ ಏಸ್ ಗಾಡಿ ಸೀಜ್ ಮಾಡಿದ್ರು. ಟಾಟಾ ಏಸ್ ಚಾಲಕನಿಗೆ ಹಲ್ಲೆ ಮಾಡಿ ರಕ್ತಚಂದನದ ಲೋಡ್ ಸಮೇತ ಎಸ್ಕೇಪ್ ಆಗಿದ್ರು ಎಂದು ಹೇಳಲಾಗುತ್ತಿದೆ.
ಪ್ರಕರಣ ನಡೆದು ಐದು ದಿನಗಳ ನಂತರ ಡಿಸೆಂಬರ್ 20 ರಂದು ಸ್ಥಳಿಯರು ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ರು. ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ನಾಲ್ವರು ಪೊಲೀಸರಂತೆ ಟಾಟಾ ಏಸ್ ಚಾಲಕನಿಗೆ ಹಲ್ಲೆ ಮಾಡಿ, ಕೈಗೆ ಕಪ್ಸ್ ಹಾಕಿ ಟಾಟಾ ಏಸ್ ವಾಹನದ ಸಮೇತ ಎಸ್ಕೇಪ್ ಆದ್ರು ಎಂದಿದ್ರು. ಆದ್ರೆ ಅಸಲಿಗೆ ಹೊಸಕೋಟೆ ಪೊಲೀಸರು ಯಾವುದೇ ದಾಳಿ ಮಾಡಿರಲಿಲ್ಲ. ಈ ವೇಳೆ ಸ್ಥಳೀಯರು ಕೊಟ್ಟ ಮಾಹಿತಿ ಆಧಾರದ ಮೇಲೆ ಸ್ವಿಫ್ಟ್ ಕಾರು ಹಾಗೂ ಟಾಟಾ ಏಸ್ ವಾಹನದ ಸಂಖ್ಯೆ ಹಾಗೂ ಸ್ಥಳಿಯ ಸಿಸಿಟಿವಿ ಆಧರಿಸಿ ಹೊಸಕೋಟೆ ಪೊಲೀಸರು ಫೀಲ್ಡಿಗಿಳಿದಿದ್ರು.
ಪ್ರಕರಣದಲ್ಲಿ ಯಾವಾಗ ಹೊಸಕೋಟೆ ಪೊಲೀಸರು ಎಫ್.ಐ.ಆರ್ ಹಾಕಿ ಹುಡುಕಾಟ ನಡೆಸ್ತಿದ್ದಾರೆ ಅನ್ನೊದು ಗೊತ್ತಾಗ್ತಿದ್ದಂತೆ ಹೆಡ್ ಕಾನ್ಸ್ಟೇಬಲ್ ಮೋಹನ್ ಹಾಗೂ ಮಮತೇಶ್ ನಾಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಇಬ್ಬರು ಹೆಡ್ ಕಾನ್ಸ್ಟೇಬಲ್ಸ್ ಗಳ ಪಾತ್ರ ಕನ್ಫರ್ಮ್ ಆಗ್ತಿದ್ದಂತೆ, ಬೆಂಗಳೂರು ಗ್ರಾಮಾಂತರ ಎಸ್.ಪಿ ವಂಶಿಕೃಷ್ಣ ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಅವರಿಗೆ ವರದಿ ನೀಡಿದ್ದಾರೆ.
ಸದ್ಯ ಎಸ್ಕೇಪ್ ಆಗಿರೋ ಇಬ್ಬರು ಹೆಡ್ ಕಾನ್ಸ್ಟೇಬಲ್ ಮೋಹನ್ ಹಾಗೂ ಮಮತೇಶ್ ಬೆಂಗಳೂರು ಸಿಟಿ ಕಾನ್ಸ್ಟೇಬಲ್ ಆಗಿರೋದ್ರಿಂದ, ಕೇಂದ್ರವಲಯ ಐಜಿಪಿ ಚಂದ್ರಶೇಖರ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಗೆ ವರದಿ ನೀಡಿದ್ದಾರೆ. ಇಬ್ಬರು ಹೆಡ್ ಕಾನ್ಸ್ಟೇಬಲ್ಗಳನ್ನು ಸದ್ಯ ಅಮಾನತುಗೊಳಿಸಿ ಕಮಿಷನರ್ ಕಮಲ್ ಪಂತ್ ತನಿಖೆಗೆ ಆದೇಶಿಸಿದ್ದಾರೆ.