ನವದೆಹಲಿ: ಏರುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆ ಥೈಲ್ಯಾಂಡ್ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಬರೋಬ್ಬರಿ 640 ಡಾಲರ್ ಅಂದ್ರೆ ಸುಮಾರು 48,000 ಫೈನ್ ವಿಧಿಸಲಾಗುವುದು ಎಂದು ಹೇಳಿದೆ. ಥೈಲ್ಯಾಂಡ್​ನ ಒಟ್ಟು 49 ಪ್ರಾಂತ್ಯಗಳಲ್ಲಿ ಈ ನಿಯಮ ಜಾರಿಯಲ್ಲಿರಲಿದೆ.

ಇನ್ನು ಥೈಲ್ಯಾಂಡ್​ನ ರಾಜಧಾನಿ ಬ್ಯಾಂಕಾಂಕ್​ನಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ಸಿನೆಮಾ, ಪಾರ್ಕ್, ಜೂ, ಬಾರ್​ಗಳು ಪೂಲ್​​ಗಳು ಮ್ತತು ಮಸಾಜ್​ ಪಾರ್ಲರ್​ಗಳು ಸೇರಿದಂತೆ 30 ವಿವಿಧ ಸೇವೆಗಳನ್ನು ಮುಚ್ಚಲಾಗಿದೆ.

ಥೈಲ್ಯಾಂಡ್​ನಲ್ಲಿ ಸೋಮವಾರ 2048 ಹೊಸ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಥೈಲ್ಯಾಂಡ್​ನಲ್ಲಿ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಈವರೆಗೆ 57,508 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 148 ಮಂದಿ ಸಾವನ್ನಪ್ಪಿದ್ದಾರೆ.

The post ಥೈಲ್ಯಾಂಡ್​ನಲ್ಲಿ ಟಫ್ ರೂಲ್ಸ್: ಮಾಸ್ಕ್ ಧರಿಸದವರಿಗೆ ₹48,000 ರೂಪಾಯಿ ದಂಡ appeared first on News First Kannada.

Source: News First Kannada
Read More