‘ಥ್ರಿಬಲ್​ ಆರ್’​ ಟ್ರೈಲರ್​ ರಿಲೀಸ್​ ಡೇಟ್​ ಫಿಕ್ಸ್​ -ಯಾವಾಗ?


ಟಾಲಿವುಡ್​ ನಿರ್ದೇಶಕ ರಾಜಮೌಳಿ ‘RRR’ ಚಿತ್ರದ ಹೊಸ ಟ್ರೈಲರ್ ರಿಲೀಸ್​ ದಿನಾಂಕವನ್ನು ಆನೌನ್ಸ್​ ಮಾಡಿದ್ದಾರೆ. ರಾಮ್​ ಚರಣ್​, ಜೂನಿಯರ್​ ಎನ್‌ಟಿಆರ್, ಅಲಿಯಾ ಭಟ್​ ಅಭಿನಯದ ಮುಖ್ಯಭೂಮಿಕೆಯಲ್ಲಿ  ‘RRR’ ಚಿತ್ರದ ಟ್ರೈಲರ್ ಇದೇ ಡಿಸೆಂಬರ್​ 3 ರಂದು ರಿಲೀಸ್​ ಆಗಲಿದೆ ಅಂತ ಈ ಹಿಂದೆ ಚಿತ್ರತಂಡ ಹೇಳಿತ್ತು ಆದ್ರೆ ಕಾರಣಾಂತರಗಳಿಂದ ಡಿಸೆಂಬರ್​ 3 ರಂದು ಚಿತ್ರದ ಟ್ರೈಲರ್ ರಿಲೀಸ್​ ದಿನಾಂಕವನ್ನು ಮೂಂದೂಡಲಾಗಿದೆ ಎಂದು ಚಿತ್ರತಂಡ ಟ್ವಿಟ್​ ಮಾಡಿದೆ.

ಅದರಂತೇ RRR ಚಿತ್ರದ ನಿರ್ದೇಶಕ ರಾಜಮೌಳಿ ಡಿಸೆಂಬರ್​ 9 ನೇ ತಾರೀಖು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ತಮ್ಮ ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ‘RRR’  ಸಿನಿಮಾ ಮುಂದಿನ ವರ್ಷ ಜನವರಿ 7 ನೇ ತಾರೀಖು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್​ ಆಗಲಿದೆ.

The post ‘ಥ್ರಿಬಲ್​ ಆರ್’​ ಟ್ರೈಲರ್​ ರಿಲೀಸ್​ ಡೇಟ್​ ಫಿಕ್ಸ್​ -ಯಾವಾಗ? appeared first on News First Kannada.

News First Live Kannada


Leave a Reply

Your email address will not be published. Required fields are marked *