ಕೊಪ್ಪಳ: ‘ಸೀಟ್ ಬೆಲ್ಟ್​ ಹಾಕಿ ವಾಹನಗಳನ್ನ ಓಡಿಸಲೇಬೇಕು’ ಅನ್ನೋದು ಟ್ರಾಫಿಕ್ ರೂಲ್ಸ್. ಇದನ್ನ ಬ್ರೇಕ್ ಮಾಡಿದ ಕಾರಿನ ಮಾಲೀಕರೊಬ್ಬರಿಗೆ ಕೊಪ್ಪಳ ಪೊಲೀಸರು ದಂಡ ಹಾಕಿ, ಪೇಚಿಗೆ ಸಿಲುಕಿದ ಪ್ರಸಂಗ ನಡೀತು.

ಹೌದು.. ಸೀಟ್ ಬೆಲ್ಟ್ ಹಾಕದೆ ಕಾರ್ ಓಡಿಸಿದ್ಕೆ ದಂಡ ಹಾಕಿದ ಪೊಲೀಸ್ರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಈ ವ್ಯಕ್ತಿಯೊಬ್ರು , ಕೇವಲ ನನ್ನ ಕಾರಿಗೆ ಮಾತ್ರ ದಂಡ ವಿಧಿಸೋದಲ್ಲ. ಎಲ್ಲರಿಗೂ ಒಂದೇ ಕಾನೂನು ಮಾಡಿ ಎಂದು ಅಲ್ಲೇ ಪಟ್ಟು ಹಿಡಿದು ಕೂತು ಬಿಟ್ರು.

ಎಂಥ ಕಿರಿಕಿರಿ ಮರ್ರೆ ಎಂದ ಪೊಲೀಸ್
ಅಲ್ಲದೇ ತನ್ನ ಕಣ್ಣ ಮುಂದೆಯೇ ನಾಲ್ಕೈದು ಕಾರುಗಳು ಹೋದಾಗ ದಂಡ ವಿಧಿಸದೇ ಇದ್ದನ್ನ ಕಂಡು ಫುಲ್ ಗರಂ ಆಗಿಬಿಟ್ರು! ಅಷ್ಟಕ್ಕೂ ಸುಮ್ಮನಾಗ ಈ ವ್ಯಕ್ತಿ, ದಂಡ ವಿಧಿಸಲೇಬೇಕು ಎಂದು ಹಠ ಮಾಡಿ.. ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ನಿಂತಿದ್ರು. ಕೆಲ‌ ನಿಮಿಷಗಳ ಕಾಲ ಪೊಲೀಸರ ಮೇಲೆ ನಿಗಾ ವಹಿಸಿದ್ದ ಕಾರು ಮಾಲೀಕ, ಸುಖಾಸುಮ್ಮನೆ 500 ರೂಪಾಯಿ ದಂಡ ಹಾಕಿದ್ದಾರೆ ಎಂದು ಮತ್ತೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ರು.

ಕಾರು ಮಾಲೀಕನ ವರ್ತನೆಯಿಂದಾಗಿ ಪೇಚಿಗೆ ಸಿಲುಕಿದ ಪೊಲೀಸ್ರು.. ಇತರೆ ಕಾರಿನ ಮಾಲೀಕರಿಗೂ ದಂಡ ವಿಧಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ರು. ಎಂತಹ ಸಂಕಷ್ಟಕ್ಕೆ ಪೊಲೀಸ್ರನ್ನ ಸಿಲುಕಿಸಿದ ಅಂದ್ರೆ.. ಇತರೆ ಕಾರು ಮಾಲೀಕರು ಯಾಱರಿಗೋ ದೂರವಾಣಿ ಕರೆ ಮಾಡಿ ಒತ್ತಡ ಹೇರಿಸಿದ್ದರೂ ಪೊಲೀಸ್ರನ್ನ ಬಿಡಲಿಲ್ಲ. ದಂಡ ಹಾಕಲೇಬೇಕು ಎಂದು ಆಗ್ರಹಿಸಿದ್ರು. ಹೀಗಾಗಿ ಪೊಲೀಸರು ಆ ಸಮಯದಲ್ಲಿ ಎಲ್ರಿಗೂ ದಂಡ ವಿಧಿಸಲೇಬೇಕಾಯ್ತು..

ನಿಟ್ಟುಸಿರು ಬಿಟ್ಟ ಪೊಲೀಸ್
ಇನ್ನು ಕೆಲವ್ರು.. ಪೊಲೀಸ್ರ ಜೇಬಲ್ಲಿ 100, 200 ರೂಪಾಯಿ ಇಟ್ಟು ಎಸ್ಕೇಪ್ ಆಗಲು ಪ್ರಯತ್ನಿಸಿದ್ರು. ಆದ್ರೆ ಅದಕ್ಕೆ ಅವಕಾಶ ಕೊಡದ ಪೊಲೀಸ್ರು ಅಂಥವ್ರನ್ನ ತರಾಟೆ ತೆಗೆದುಕೊಂಡ್ರು. ಅಲ್ಲದೇ ಪಟ್ಟು ಹಿಡಿದ ವ್ಯಕ್ತಿಯನ್ನು ತೋರಿಸಿ ದಂಡ ಹಾಕಿಯೇ ಬಿಟ್ರು. ಕೆಲ ಕಾಲಗಳ ಕಾಲ ಅಲ್ಲಿಯೇ ಇದ್ದ ವ್ಯಕ್ತಿ, ನಂತರ ಅಲ್ಲಿಂದ ಎಸ್ಕೇಪ್ ಆದ್ರು. ನಂತ್ರ ಪೊಲೀಸ್ರು ನಿಟ್ಟುಸಿರು ಬಿಟ್ರು!

The post ದಂಡ ಹಾಕಿದ್ದೇ ತಪ್ಪಾಯ್ತಾ? ಪೊಲೀಸ್ರನ್ನ ಪೇಚಿಗೆ ಸಿಲುಕಿಸಿದ ಕಿಲಾಡಿ appeared first on News First Kannada.

Source: newsfirstlive.com

Source link