ದಕ್ಷಿಣ ಭಾರತಕ್ಕೆ ಬಂದು ಚಿರಂಜೀವಿಗೆ ಹೊಸ ಐಡಿಯಾ ಕೊಟ್ಟ ಸಲ್ಮಾನ್​ ಖಾನ್​ | Salman Khan Gave New Idea To GodFather Movie Hero Chiranjeevi


ದಕ್ಷಿಣ ಭಾರತಕ್ಕೆ ಬಂದು ಚಿರಂಜೀವಿಗೆ ಹೊಸ ಐಡಿಯಾ ಕೊಟ್ಟ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​-ಚಿರಂಜೀವಿ

ಮೆಗಾಸ್ಟಾರ್​ ಚಿರಂಜೀವಿ (Chiranjeevi) 153ನೇ ಸಿನಿಮಾ ‘ಗಾಡ್​​ಫಾದರ್​’  (Godfather)ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಲಯಾಳಂನ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್’ ರಿಮೇಕ್​ ಇದಾಗಿದೆ. ಈ ಸಿನಿಮಾದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಚಿತ್ರದಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ನಟನೆಯ ‘ಲೂಸಿಫರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಪೃಥ್ವಿರಾಜ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್​ಲಾಲ್​​ಗೆ ಸಹಾಯ ಮಾಡುವ ಡಾನ್​ ಪಾತ್ರ ಇದಾಗಿತ್ತು. ಅವರು ತೆರೆಮೇಲೆ ಕಾಣಿಸೋದು ಕಡಿಮೆಯಾದರೂ ಇಡೀ ಚಿತ್ರದಲ್ಲಿ ತುಂಬಾನೇ ಮುಖ್ಯ ಎನಿಸಿಕೊಳ್ಳುತ್ತದೆ ಆ ಪಾತ್ರ. ತೆಲುಗಿನಲ್ಲಿ ಸಲ್ಲು ಈ ಪಾತ್ರದಲ್ಲಿ ನಟಿಸಲಿದ್ದಾರೆ. ಈಗ ಚಿರಂಜೀವಿಗೆ ಸ್ಪೆಷಲ್​ ಐಡಿಯಾ ಒಂದನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಸಲ್ಮಾನ್​ ಖಾನ್​ ಹಾಗೂ ಚಿರುಗೋಸ್ಕರ ವಿಶೇಷ ಸಾಂಗ್​ ಮಾಡೋಕೆ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಮೂಲ ಸಿನಿಮಾ ‘ಲೂಸಿಫರ್​’ನಲ್ಲಿ ಈ ರೀತಿಯ ಸಾಂಗ್ ಇಲ್ಲ. ಆದರೆ, ಸಲ್ಲು ಬಾಲಿವುಡ್​ ಅಂಗಳದಿಂದ ದಕ್ಷಿಣಕ್ಕೆ ಬರುವ ಕಾರಣಕ್ಕೆ ಚಿತ್ರತಂಡ ಈ ಆಲೋಚನೆ ಮಾಡಿದೆ. ತಮನ್​ ಈ ಸಿನಿಮಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿದೇಶಿ ಗಾಯಕರನ್ನು ತರುವ ಆಲೋಚನೆಯಲ್ಲಿದ್ದಾರೆ. ಆದರೆ, ಈ ಆಲೋಚನೆಯನ್ನು ಸಲ್ಮಾನ್​ ಖಾನ್​ ತಿರಸ್ಕರಿಸಿದ್ದಾರೆ. ಅಲ್ಲದೆ, ಚಿತ್ರತಂಡಕ್ಕೆ ಹೊಸ ಐಡಿಯಾ ನೀಡಿದ್ದಾರೆ. ಬಾಲಿವುಡ್​ನ ಸಾಕಷ್ಟು ಸಿಂಗರ್​ಗಳು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ದಕ್ಷಿಣಕ್ಕೆ ಬಂದಿಲ್ಲ. ವಿದೇಶಿ ಸಿಂಗರ್​ಗಳಿಗೆ ಹೆಚ್ಚಿನ ಹಣ ನೀಡಿ ಅವರನ್ನು ಕರೆ ತರುವ ಬದಲು, ಬಾಲಿವುಡ್​ ಮಂದಿಯನ್ನೇ ಕರೆತರುವಂತೆ ಸೂಚನೆ ನೀಡಿದ್ದಾರೆ. ಈ ಆಯ್ಕೆ ಚಿತ್ರತಂಡದವರಿಗೂ ಇಷ್ಟವಾಗಿದೆ.

ಸಲ್ಮಾನ್​ ಖಾನ್​ ಹಾಗೂ ಚಿರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇಂಡಸ್ಟ್ರಿ ಬೇರೆ ಆದರೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣಕ್ಕೆ ಸಿನಿಮಾ ನಿರ್ಮಾತೃರು ಸಲ್ಲು ಅವರನ್ನು ಕರೆತಂದಿದ್ದಾರೆ. ಮೋಹನ್​ ರಾಜ್​ ಅವರು ಚಿರು 153ನೇ ಚಿತ್ರ ‘ಗಾಡ್​ಫಾದರ್​’ಗೆ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: 6 ದಿನ ನಡೆಯುವ ಕತ್ರಿನಾ ಮದುವೆಗೆ ಮಾಜಿ ಬಾಯ್​ಫ್ರೆಂಡ್​ಗಳಿಗೆ ಇದೆಯಾ ಆಹ್ವಾನ? ರಣಬೀರ್​, ಸಲ್ಲು ಕೂಡ ಬರ್ತಾರಾ?

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್

TV9 Kannada


Leave a Reply

Your email address will not be published. Required fields are marked *