ಕೊಪ್ಪಳ: ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ. ದಕ್ಷಿಣ ಭಾರತದ ಕುಂಭಮೇಳ ಅಂತಾ ಪ್ರಸಿದ್ಧಿ ಪಡೆದ ಗವಿಮಠದ ಜಾತ್ರೆ ನಡೆಸುವ ಸಕಲ ಸಿದ್ಧತೆಯನ್ನು ಆಡಳಿತ ಮಂಡಳಿ ಕೈಗೊಂಡಿತ್ತು. ಆದರೆ ದೇಶದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಆತಂಕ ಹೆಚ್ಚಾದ ಕಾರಣ ಮಠದ ಆಡಳಿತ ಮಂಡಳಿ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ಮಠದ ಆಡಳಿತ ಮಂಡಳಿ ಶತಮಾನಗಳಿಂದ ಲಕ್ಷಾಂತರ ಭಕ್ತರು ಸಾಕ್ಷಿಯಾಗುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ರದ್ದು ಮಾಡೋ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ. ಆದರೆ ಸಂಪ್ರದಾಯ ಮುರಿಯದಂತೆ ಸರಳವಾಗಿ ಜಾತ್ರೆ ಮಾಡಲಾಗುತ್ತದೆ. ಆ ವೇಳೆ ಕೇವಲ ಶ್ರೀಮಠದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ನಡೆಯಲಿದೆ. ಉಳಿದಂತೆ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳು ಹಾಗೂ ಮಹಾರಥೋತ್ಸವ ರದ್ದು ಮಾಡಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.