ಚಾಮರಾಜನಗರ: ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್​ಡೌನ್ ಜಾರಿಯಾಗಿದೆ. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಸಣ್ಣ ಪುಟ್ಟ ಕಾರಣಗಳಿಗೆ ಹೊರಗಡೆ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದ್ರೂ ಜನರು ರಸ್ತೆಗಿಳಿದಿದ್ದು, ಕೆಲವರು ಮದುವೆ ಬುಕಿಂಗ್ ಅಂತ, ಇನ್ನೂ ಕೆಲವರು ನೀರು ತರಬೇಕು, ಆಸ್ಪತ್ರೆಗೆ ಹೋಗಬೇಕು ಅಂತ ಸುಳ್ಳು ಹೇಳುತ್ತಿರೋದು ಕಂಡುಬರ್ತಿದೆ. ಇದ್ರಿಂದ ನಿಜವಾಗಲೂ ತುರ್ತು ಪರಿಸ್ಥಿತಿಯಲ್ಲಿರೋರು ಓಡಾಡಲು ತೊಂದರೆಯಾಗ್ತಿದೆ.

ಚಾಮರಾಜನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನ ಪೊಲೀಸರು ಸೀಜ್ ಮಾಡ್ತಿದ್ದಾರೆ. ಸುಖಾಸುಮ್ಮನೆ ಓಡಾಡ್ತಿದ್ದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸ್ತಿದ್ದಾರೆ. ಈ ವೇಳೆ ವಾಹನ ಸವಾರನೊಬ್ಬ..ನಿಮ್ಮ ದಮ್ಮಯ್ಯ ಬಿಟ್ಟುಬಿಡಿ ಎಂದು ಪೊಲೀಸರ ಕಾಲಿಗೆ ಬಿದ್ದ.

ಅತ್ತ ಪೊಲೀಸರು ಅನಾವಶ್ಯಕವಾಗಿ ಓಡಾಡುತ್ತಿದ್ದವರಿಗೆ ಕೈ ಮುಗಿದು ದಯವಿಟ್ಟು ಹೊರಗಡೆ ಓಡಾಡಬೇಡಿ ಅಂತ ಕೇಳಿಕೊಂಡರು. ನಿಮ್ಗೆ ಕೈಮುಗಿತೀವಿ, ಮನೆಯಿಂದ ಹೊರಗೆ ಬಂದು ಹಿಂಗೆ ಓಡಾಡಬೇಡಿ ಎಂದು ಮನವಿ ಮಾಡಿದ್ರು.

The post ದಮ್ಮಯ್ಯ ಬಿಟ್ಟುಬಿಡಿ ಅಂತ ಸವಾರರು.. ಕೈ ಮುಗಿತೀವಿ ಹೊರಗೆ ಓಡಾಡ್ಬೇಡಿ ಅಂತಿರೋ ಪೊಲೀಸರು appeared first on News First Kannada.

Source: newsfirstlive.com

Source link