ಉಡುಪಿ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ಲೋಸ್​ ಡೌನ್​ ನಿಯಮಗಳನ್ನು ಜಾರಿ ಮಾಡಿದ್ದರೂ ಜನರು ನಾನಾ ಕಾರಣ ಹೇಳಿಕೊಂಡು ರಸ್ತೆಗಿಳಿಯುತ್ತಿದ್ದಾರೆ. ನಗರದಲ್ಲಿ ಅನಗತ್ಯವಾಗಿ ವಾಹನ ಓಡಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟ್ರಾಫಿಕ್​ ಪೊಲೀಸ್ ಒಬ್ಬರು ಕೈಮುಗಿದು ರಸ್ತೆಗೆ ಇಳಿಯದಂತೆ ಮನವಿ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಯಲ್ಲಿ ಬ್ಯಾರಿಗೇಟ್ ಹಾಕಿ ವಾಹನಗಳನ್ನು ತಡೆಯುತ್ತಿರುವ ಟ್ರಾಫಿಕ್ ಪೊಲೀಸ್ ಎಸ್​​ಐ ಎಸ್.ಐ.ಖಾದರ್ ಅವರು ಕೈ ಮುಗಿದು ಜನರಿಗೆ ಬುದ್ಧಿವಾದ ಹೇಳುತ್ತಿದ್ದು, ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಜನರಲ್ಲಿ ವಿನಂತಿ ಮಾಡುತ್ತಿದ್ದಾರೆ. ಆದರೂ ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ವಾಹನ ಸವಾರರು ರಸ್ತೆಗಿಳಿಯುತ್ತಿದ್ದಾರೆ.

The post ‘ದಯವಿಟ್ಟು ಅನಗತ್ಯ ಓಡಾಡಬೇಡಿ’ ಕೈ ಮುಗಿದು ಜನರ ಬಳಿ ಟ್ರಾಫಿಕ್​ ಪೊಲೀಸ್​ ಮನವಿ appeared first on News First Kannada.

Source: newsfirstlive.com

Source link