ಗದಗ: ಜಿಲ್ಲೆಯ ಸಹಾಯಕ ಆಯುಕ್ತರು ಬಡಾವಣೆಯೊಂದರ ಜನರ ಮುಂದೆ ದೇವರ ಹೆಸರಲ್ಲಿ ಜಾತ್ರೆ ಮಾಡಬೇಡಿ ಎಂದು ಕೈಮುಗಿದು ಬೇಡಿಕೊಂಡ ಘಟನೆ ನಡೆಯಿತು.

ಜೂನ್ 1ನೇ ತಾರೀಕು ನಡೆಯುವ ಮಾರಿಯಮ್ಮ ದೇವಿ ಜಾತ್ರೆಯ ತಯಾರಿ ನಡೆಸಿದ್ದ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ಬಡಾವಣೆಯ ಜನರಿಗೆ ಸಹಾಯಕ ಆಯಕ್ತ ಎಸಿ ರಾಯಪ್ಪ ಜಾತ್ರೆ ಆಚರಿಸದಂತೆ ಮನವಿ ಮಾಡಿದ್ದಾರೆ.

ಸುಮಾರು 8 ಸಾವಿರ ಜನರು ಸೇರಿ ಜಾತ್ರೆ ನಡೆಸುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಎಸಿ ರಾಯಪ್ಪ ಕೋವಿಡ್ ಕರಾಳತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಒಂದು ವೇಳೆ ನಿಯಮ ಮೀರಿ ಜಾತ್ರೆ ನಡೆಸಿದ್ರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ್ರು. ನರಗುಂದ ಉಪವಿಭಾಗ ಡಿವೈಎಸ್ ಪಿ ಶಂಕರ ರಾಗಿ, ರೋಣ ತಹಶೀಲ್ದಾರ್ ಜೆಬಿ ಜಕ್ಕನಗೌಡರ್ ಸಭೆಯಲ್ಲಿ ಭಾಗಿಯಾಗಿದ್ದರು.

The post ‘ದಯವಿಟ್ಟು ಜಾತ್ರೆ ನಡೆಸಬೇಡಿ’ ಎಂದು ಜನರ ಮುಂದೆ ಕೈ ಮುಗಿದು ಬೇಡಿಕೊಂಡ ಅಧಿಕಾರಿ appeared first on News First Kannada.

Source: newsfirstlive.com

Source link