ಬೆಂಗಳೂರು: ನಮಗೊಂದು ಬೆಡ್​ ಬೇಕು, ದಯವಿಟ್ಟು ಬೆಡ್​ ಕೊಡಿಸಿ ಅಂತ ಕೊರೊನಾ ಸೋಂಕಿತನ ಕುಟುಂಬಸ್ಥರೊಬ್ಬರು ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮನೆ ಮುಂದೆ ಬಂದು ಮನವಿ ಮಾಡಿದ್ದಾರೆ.

ಪ್ರಭಾಕರ್ ಅನ್ನೋ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ನಾರ್ಮಲ್ ಬೆಡ್ ಬೇಕು ಅಂತ ಆರೇಳು ಆಸ್ಪತ್ರೆಗೆ ಸುತ್ತಿದ್ರೂ ಬೆಡ್ ಸಿಕ್ಕಿಲ್ಲವಂತೆ. ಹೀಗಾಗಿ ಕೆ.ಜಿ ಹಳ್ಳಿಯಿಂದ ಕುಟುಂಬಸ್ಥರು ಸಿಎಂ ಮನೆ ಬಳಿ ಬಂದು  ಆಕ್ರೋಶ ಹೊರಹಾಕಿದ್ರು.

ನಿನ್ನೆ ಸಿಎಂ, ಯಾರೂ ನಮ್ಮ ಮನೆ ಹತ್ರ ಬರಬೇಡಿ ಅಂತ ಹೇಳಿದ್ದರು. ಹೀಗಾಗಿ ಅಲ್ಲಿದ್ದ ಪೊಲೀಸ್ರು ರೋಗಿ ಹಾಗೂ ಕುಟುಂಬಸ್ಥರನ್ನ ನಿಲ್ಲಲು ಬಿಡದೆ, ಅವರು ಬಂದಿದ್ದ ಆಟೋದಲ್ಲೇ ಬಿಬಿಎಂಪಿ ವಾರ್ ರೂಮ್ ಬಳಿ ಹೋಗುವಂತೆ ಸೂಚನೆ ಕೊಟ್ಟರು. ಜೊತೆಗೆ ಅವರ ಆಟೋ ಹಿಂದೆಯೇ ತಾವೂ ಹೊರಟರು.

The post ದಯವಿಟ್ಟು ಬೆಡ್​ ಕೊಡಿಸಿ: ಸಿಎಂ ಮನೆ ಮುಂದೆ ಕೊರೊನಾ ರೋಗಿ ಕುಟುಂಬಸ್ಥರ ಮನವಿ appeared first on News First Kannada.

Source: newsfirstlive.com

Source link