ಮೈಸೂರು: ಇಲ್ಲಿನ ಟಿ. ನರಸೀಪುರ ರಸ್ತೆಯಲ್ಲಿರುವ ನಟ ಚಾಲೆಂಜಿಂಗ್ ದರ್ಶನ್ ತೂಗುದೀಪ​ ಫಾರ್ಮ್​​​ ಹೌಸ್​​ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ದರ್ಶನ್​​​ ಅವರನ್ನು ನೋಡಲು ತಮ್ಮ ಅಭಿಮಾನಿಗಳು ಫಾರ್ಮ್​​ ಹೌಸ್​​​ಗೆ ಆಗಮಿಸಿದ್ದಾರೆ. ಇದನ್ನು ಕಂಡ ದರ್ಶನ್​​ ಆಪ್ತರು ಎಲ್ಲಾ ಅಭಿಮಾನಿಗಳನ್ನು ಅಲ್ಲಿಂದ ವಾಪಸ್ಸು ಕಳಿಸಿದ್ದಾರೆ.

ಕೊಳ್ಳೇಗಾಲ ಮೂಲದ ಅಭಿಮಾನಿ ಸೂರ್ಯ ಎಂಬಾತ ಫಾರ್ಮ್​ ಹೌಸ್​ ಕಾಂಪೌಂಡ್​​​ ನೆಗೆದು ದರ್ಶನ್​​ ನೋಡಲು ಮುಂದಾಗಿದ್ದ. ಈ ವೇಳೆ ದರ್ಶನ್​​ ಆಪ್ತರು ಆತನನ್ನು ಸಮಾಧಾನ ಮಾಡಿ ಫಾರ್ಮ್​​ ಹೌಸಿನಿಂದ ಹೊರಗೆ ಕಳಿಸಿದರು.

ಇನ್ನು, ದರ್ಶನ್​​ ಫ್ಯಾನ್​​ ಸೂರ್ಯ ಫಾರ್ಮ್​ ಹೌಸ್​ ಮುಂದೆಯೇ ಪಲ್ಟಿ ಹೊಡೆದು ಡ್ಯಾನ್ಸ್​ ಮಾಡುತ್ತಿದ್ದ. ಡಿ ಬಾಸ್​ಗೆ ಜೈ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

The post ದರ್ಶನ್​​ ಫಾರ್ಮ್​​ಹೌಸ್​ ಮುಂದೆ ಅಭಿಮಾನಿಗಳ ದಂಡು; ಪಲ್ಟಿ ಹೊಡೆದು, ಡ್ಯಾನ್ಸ್ ಮಾಡಿದ ಫ್ಯಾನ್ appeared first on News First Kannada.

Source: newsfirstlive.com

Source link