ಬೆಂಗಳೂರು: ನಟ ದರ್ಶನ್​​ ಹಾರ್ಟ್​ ಮಗೂ ಥರ ಎಂದು ನಿರ್ದೇಶಕ ಪ್ರೇಮ್​​ ಹೇಳಿದ್ದಾರೆ. ತನ್ನನ್ನ ಯಾವ ಪುಡಾಂಗು ಎಂದ ದರ್ಶನ್​​​​ ಹೇಳಿಕೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಪ್ರೇಮ್​​, ಅವರ ಹೇಳಿಕೆಯಿಂದ ನನಗೆ ನೋವಾಗಿರೋದು ನಿಜ. ದರ್ಶನ್​ ಎಷ್ಟೇ ರೂಡ್​ ಆಗಿದ್ದರೂ ಅವರಿಗೆ ಇನ್ನೊಂದು ಮುಖ ಇದೆ. ಅದುವೇ ಮಗುವಿನ ಮುಖ, ದರ್ಶನ್​​ ಹಾರ್ಟ್​​ ಬಹಳ ಮೃದು ಎಂದರು.

ದರ್ಶನ್​​ ನನ್ನ ಸ್ನೇಹಿತ. ಅವರು ಎಷ್ಟು ಒರಟೋ, ಅಷ್ಟೇ ಮೃದು. ಒಟ್ಟಿಗೆ ಊಟ ಮಾಡಿದ್ದೀವಿ, ಜೊತೆಯಲ್ಲೇ ಓಡಾಡಿದ್ದೇವೆ. ತುಂಬಾ ಹತ್ತಿರದಿಂದಲೇ ನಾನು ದರ್ಶನ್​ ಅವರನ್ನು ನೋಡಿದ್ದೇನೆ. ಯಾವುದೋ ಒಂದು ವಿಚಾರದಲ್ಲಿ ನನ್ನ ಹೆಸರು ಪ್ರಸ್ತಾಪಿಸಿದ್ದರೂ ಎನ್ನುವುದು ಬಿಟ್ಟರೆ ನನಗೆ ದರ್ಶನ್​ ಒಳ್ಳೆಯ ಸ್ನೇಹಿತ ಎಂದು ಹೇಳಿದರು ಪ್ರೇಮ್​.

ಇದನ್ನೂ ಓದಿ: ದರ್ಶನ್​ ಅಭಿಮಾನಿಗಳು ನನಗೆ Sorry ಕೇಳೋದು ಬೇಡ ಅಂದಿದ್ಯಾಕೆ ಪ್ರೇಮ್​?

ನನಗೂ ಮತ್ತು ಈಗ ನಡೆಯುತ್ತಿರುವ ದರ್ಶನ್​ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ನನಗೆ ಅವರೊಂದಿಗೆ ಸಿನಿಮಾ ಸಂಬಂಧ ಮಾತ್ರ ಇರೋದು. ಸಿಕ್ಕಾಗ ಸಿನಿಮಾ ಬಗ್ಗೆ ಮಾತಾಡುತ್ತೇವೆ, ಒಟ್ಟಿಗೆ ಸಮಯ ಕಳೆಯುತ್ತೇವೆ ಎಂದು ತಿಳಿಸಿದರು.

The post ದರ್ಶನ್​​ ಹಾರ್ಟ್​ ಮಗು ಥರ; ನಿರ್ದೇಶಕ ಪ್ರೇಮ್​​ appeared first on News First Kannada.

Source: newsfirstlive.com

Source link