ಬೆಂಗಳೂರು: ದರ್ಶನ್​ ಹಾಗೂ ಪ್ರೇಮ್​ ಕಾಂಬಿನೇಷನ್ ಸಿನಿಮಾ ಮಾಡಿ ಅಂತ ಸಾಕಷ್ಟು ನಿರ್ಮಾಪಕರು ಕೇಳಿದ್ದಾರೆ. ಎಲ್ಲಾರಿಗೂ ಈ ವಿಚಾರ ಗೊತ್ತಿರೋದೆ. ಆದರೆ ದರ್ಶನ್​ ಅವರು ನಿರ್ದೇಶಕ ಬಗ್ಗೆ ಮಾತನಾಡಿದ್ದು ನನಗೆ ನೋವಾಗಿದೆ. ಆದ್ದರಿಂದಲೇ ಅವರಿಗೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ದರ್ಶನ್​ ಅಭಿಮಾನಿಗಳು ನನಗೆ ಕ್ಷಮೆ ಕೇಳೋದು ಬೇಡ ಎಂದು ನಿರ್ದೇಶಕ ಪ್ರೇಮ್​ ಹೇಳಿದ್ದಾರೆ.

ದರ್ಶನ್​ ಹೇಳಿಕೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೇಮ್​ ಅವರು, ದರ್ಶನ್​ ಅವರು ಕೂಡ ಬುದ್ಧಿ ಸಿನಿಮಾ ಮಾಡೋಣ ಅಂತಾ ಹೇಳಿದ್ರು. ಆದರೆ ಒಳ್ಳೆ ಸಂಭಾವನೆ ಕೊಡ್ತಾರೆ ಅಂತ ನಾನು ಉಮಾಪತಿ ಅವರ ಜೊತೆ ಸಿನಿಮಾ ಮಾಡೋಕೆ ರೆಡಿಯಾಗಿ, ನಾನು ಉಮಾಪತಿ ಅವರನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಿದ್ದೆ. ವಿಲನ್ ಸಿನಿಮಾ ಲೇಟ್​ ಆದ ಕಾರಣ ರಾಬರ್ಟ್ ಸಿನಿಮಾ ಆಯ್ತು. ರಾಬರ್ಟ್ ಹಿಟ್ ಆದಾಗ ನಮ್ಮ ರಕ್ಷಿತಾ ಮೇಡಂ ಅವರೇ ಮೊದಲು ವಿಶ್ ಮಾಡಿದ್ದರು.

ಈ ಘಟನೆ ನಮಗೆ ಮುಂದೆ ಸಮಸ್ಯೆ ಆಗಲ್ಲ. ಪ್ರೇಮ್ ಮಟನ್, ಚಿಕನ್ ತಿನ್ನೋದಿಲ್ಲ.. ಎಣ್ಣೆ ಹಾಕಲ್ಲ. ಅವನನ್ನು ಎಲ್ಲೂ ಕರಿಬೇಡಿ ಎಂದು ಅಂಬರೀಶಣ್ಣ ಹೇಳ್ತಿದ್ದರು. ಅದೇ ರೀತಿ ದರ್ಶನ್​ ಕೂಡ ಬುದ್ಧಿ ನೀವು ಏನು ಕುಡಿಯೋದಿಲ್ಲ, ತಿನ್ನೋದಿಲ್ಲ ಅಂತಿದ್ದರು. ಆದರೆ ನಿನ್ನೆ ಅವರು ಮಾತನಾಡುವ ಪ್ಲೋದಲ್ಲಿ ಹೇಳಿದ್ದಾರೆ ಅಂತಾ ಹಲವು ನನಗೆ ಹೇಳಿದ್ದಾರೆ. ಹಲವು ಅಭಿಮಾನಿಗಳು ಕೂಡ ನನಗೆ ಫೋನ್​ ಮಾಡಿ, ಸಂದೇಶ ಕಳುಹಿಸಿ ದರ್ಶನ್ ಪರವಾಗಿ ಕ್ಷಮೆ ಕೋರಿದ್ದಾರೆ.

ಇದನ್ನೂ ಓದಿ: ‘ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಾಂಗುನೂ ಅಲ್ಲಾ’.. ದರ್ಶನ್ ಹೇಳಿಕೆಗೆ ಪ್ರೇಮ್ ಟಾಂಗ್

ಇದನ್ನೂ ಓದಿ: “ಪ್ರೇಮ್ ದೊಡ್ಡ ಪುಡಾಂಗಾ..?” ದರ್ಶನ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ ರಕ್ಷಿತಾ

ಆದರೆ ಅಭಿಮಾನಿಗಳು ನನಗೆ ಕ್ಷಮೆ ಕೇಳೋದು ಬೇಡ. ಏಕೆಂದರೆ ಅಭಿಮಾನಿಗಳಿಂದಲೇ ನಿರ್ದೇಶಕ, ನಟ, ನಿರ್ಮಾಪಕರನ್ನು ಬೆಳೆಸಿದ್ದಾರೆ. ಅಭಿಮಾನಿಗಳಿದ್ದರೇ ಮಾತ್ರ ನಾವು.. ದರ್ಶನ್ ಅವರು ಯಾಕೆ? ಈ ರೀತಿ ಮಾತನಾಡಿದರೂ ಎಂಬುವುದು ಗೊತ್ತಿಲ್ಲ. ದಯವಿಟ್ಟು ನಿಮ್ಮ ಸ್ನೇಹ ಹೀಗೆ ಇರಲಿ..? ನಿಮ್ಮ ಅವರು ಸೇರಿ ಸಿನಿಮಾ ಮಾಡಿ ಅಂತಾ 500ಕ್ಕೂ ಹೆಚ್ಚು ಮಂದಿ ವಾಟ್ಸಾಪ್​ ಮಾಡಿದ್ದಾರೆ. ಲಕ್ಷಾಂತರ ಮಂದಿ ಸಂದೇಶ ಕಳುಹಿಸಿದ್ದಾರೆ. ಆದ್ದರಿಂದಲೇ ನಾನು ಮನವಿ ಮಾಡುತ್ತಿದ್ದೇನೆ. ಅಭಿಮಾನಿಗಳಿದ್ದರೇ ಮಾತ್ರ ನಾವು ಎಂದರು.

ಇದನ್ನೂ ಓದಿ: ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಅಂತ ಹೇಳಿದಕ್ಕೆ ನೋವಾಯ್ತು- ನಿರ್ದೇಶಕ ಪ್ರೇಮ್​

The post ದರ್ಶನ್​ ಅಭಿಮಾನಿಗಳು ನನಗೆ Sorry ಕೇಳೋದು ಬೇಡ ಅಂದಿದ್ಯಾಕೆ ಪ್ರೇಮ್​? appeared first on News First Kannada.

Source: newsfirstlive.com

Source link