ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ದರ್ಶನ್ ಆಪ್ತ ಹರ್ಷ ಮೆಲಂಟಾ ನ್ಯೂಸ್‌ಫಸ್ಟ್‌ಗೆ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು.. ದರ್ಶನ್ ಅವರನ್ನ ಯಾರೋ ಟಾರ್ಗೆಟ್​ ಮಾಡ್ತಿರೋದು ನಿಜ. ಅವರು ರಾಜಕೀಯದವರಾ? ಸಿನಿಮಾದವರಾ ಅನ್ನೋದು ಗೊತ್ತಿಲ್ಲ. ಇನ್ನು ಸಂದೇಶ್​ ನಾಗರಾಜ್ ಪುತ್ರ ಮಾತನಾಡಿದ್ದು ಎನ್ನಲಾಗಿರುವ ಆಡಿಯೋ ವೈರಲ್​ಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು.. ಆ ಆಡಿಯೋ ಸಂದೇಶನದ್ದಲ್ಲ, ಅದು ನಕಲಿ ಆಡಿಯೋ ಎಂದಿದ್ದಾರೆ.

ಬೈದಿದ್ದಾರೆ ಅಷ್ಟೇ
ದರ್ಶನ್​ ನಮ್ಮ ಫ್ಯಾಮಿಲಿಯನ್ನ ಊಟಕ್ಕೆ ಕರೆದಿದ್ರು. ನಾವು ಊಟಕ್ಕೆ ಹೋಗಿದ್ವಿ. ಆಗ ಊಟ ಬರೋದು  ಲೇಟಾಯ್ತು ಎಂದು ದರ್ಶನ್​ ಹೋಟೆಲ್ ಸಿಬ್ಬಂದಿಗೆ ಬೈದಿದ್ದಾರೆಯೇ ಹೊರತು, ಹೊಡೆದಿಲ್ಲ ಎಂದರು.

ದರ್ಶನ್​ ಹೆಸರಲ್ಲಿ 25 ಕೋಟಿ ಶ್ಯೂರಿಟಿ ವಂಚನೆಗೆ ಯತ್ನ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂದಿರುವ ಹರ್ಷ, ಚೆಂಡು ಉಮಾಪತಿ ಅಂಗಳದಲ್ಲಿದೆ. ನೀವೇನು ಮಾತನಾಡಬೇಡಿ, ಉಮಾಪತಿ ಅವರು ಇದನ್ನ ಸಾಬೀತು ಮಾಡಬೇಕು ಅಂತ ದರ್ಶನ್ ಹೇಳಿದ್ದಾರೆ ಎಂದರು.

ಅರುಣ್ ಕುಮಾರಿ ಪತಿ ನಮ್ಮ ಹೋಟೆಲ್​ನಲ್ಲಿ ಕೆಲಸ ಮಾಡೋದು ನಿಜ. ಆದರೆ ಅರುಣಾಕುಮಾರಿಗೂ ನಮಗೂ ಯಾವ ಸಂಪರ್ಕವೂ ಇಲ್ಲ. ಪೊಲೀಸರು ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದು, ನೆನ್ನೆ ನನ್ನನ್ನು ಕೂಡ ಕರೆದಿದ್ರು. ನಾನು ಹೋಗಿ ಹೇಳಿಕೆ ಕೊಟ್ಟು ಬಂದಿದ್ದೇನೆ. ಈಗಲೂ ಕೂಡ ದರ್ಶನ್ ಮತ್ತು ನಮ್ಮ ನಡುವೆ ಸ್ನೇಹ ಚೆನ್ನಾಗಿದ್ದು ನಿನ್ನೆ ಕೂಡ ಅವರು ನನ್ನ ಜೊತೆ ಮಾತನಾಡಿದ್ದಾರೆ ಎಂದರು.

The post ‘ದರ್ಶನ್​ ಟಾರ್ಗೆಟ್ ಆಗಿದ್ದಾರೆ; ಸಿನಿಮಾದವ್ರಾ? ಯಾಜಕೀಯದವ್ರಾ ಗೊತ್ತಿಲ್ಲ -ಮೆಲಂಟಾ ಹೊಸ ಬಾಂಬ್ appeared first on News First Kannada.

Source: newsfirstlive.com

Source link