ಐದು ದಿನಗಳ ಹಿಂದಷ್ಟೆ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ಮೃಗಾಲಯದಲ್ಲಿರುವ ಪ್ರಾಣಿಗಳ ಸಂರಕ್ಷಣೆಗಾಗಿ ಹೊಸ ಉಪಾಯವನ್ನ ಸೂಚಿಸಿದ್ದರು. ಎಲ್ಲರೂ ತಮ್ಮ ಕೈಲಾದಷ್ಟು ಧನ ಸಹಾಯ, ಆಹಾರ ಸಹಾಯ ಮಾಡಿ, ಸಾಧ್ಯವಾದವರು ಸ್ವಲ್ಪ ಸಮಯದ ಮಟ್ಟಿಗೆ ಪ್ರಾಣಿಗಳನ್ನ ದತ್ತು ತೆಗೆದುಕೊಳ್ಳಿ ಅಂತ ಕರೆ ನೀಡಿದ್ದರು. ಅದರಂತೆ ಇದೀಗ ಮೃಗಾಲಯದ ಪ್ರಾಣಿಗಳ ಸಂರಕ್ಷಣೆಗಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.

ಹೌದು.. ಈ ಬಗ್ಗೆ Zoo’s ಆಫ್​ ಕರ್ನಾಟಕದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಲಾಗಿದೆ. ಕೇವಲ ಐದೇ ದಿನಗಳಲ್ಲಿ ಈ ಬೆಳವಣಿಗೆ ಆದ ಬಗ್ಗೆ ಖುಷಿ ವ್ಯಕ್ತಪಡಿಸಿರುವ Zoo’s ಆಫ್​ ಕರ್ನಾಟಕ, ನಟ ದರ್ಶನ್​ ಹಾಗೂ ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ. ‘ಶ್ರೀ ದರ್ಶನ್ ತೂಗುದೀಪರ ಕರೆಗೆ ಓಗೊಟ್ಟು ಒಂದು ಕೋಟಿ ಸಮೀಪ ತಲುಪಿದ ಪ್ರಾಣಿ ಪ್ರಿಯರ ದತ್ತು ಮತ್ತು ದೇಣಿಗೆ ಮೊತ್ತ. ಎಲ್ಲಾ ದಾನಿಗಳಿಗೂ ಹಾಗೂ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಅವರಿಗೂ ಅನಂತ ಧನ್ಯವಾದಗಳು’ ಅಂತ ಟ್ವೀಟ್​ ಮಾಡಿದ್ದಾರೆ.

ನಟ ದರ್ಶನ್​ ಕೂಗಿಗೆ ಕೇವಲ ನಾಲ್ಕೇ ದಿನಗಳಲ್ಲಿ 70 ಲಕ್ಷಕ್ಕೂ ಅಧಿಕ ದೇಣಿಗೆ ಬಂದಿದ್ದಲ್ಲದೇ, ಅನೇಕರು ಮೃಗಾಲಯದ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಕರ್ನಾಟಕದಲ್ಲಿರುವ 9 ಝೂಗಳಲ್ಲಿ 5000ಕ್ಕೂ ಹೆಚ್ಚು ಪ್ರಾಣಿಗಳು ಸಂಕಷ್ಟದಲ್ಲಿದ್ದವು. ಕೊರೊನಾ ಸಂದರ್ಭ ಪ್ರವಾಸಿಗರಿಲ್ಲದೇ ಆಹಾರಕ್ಕೂ ಕಷ್ಟ ಪಡುತ್ತಿರುವ ಮೃಗಾಲಯದ ಪ್ರಾಣಿಗಳು ಸದ್ಯ ಕೊಂಚ ಆರಾಮಾಗಿರಬಹುದು ಅನಿಸುತ್ತಿದೆ.

The post ದರ್ಶನ್​ ಪ್ರಾಣಿ ಸಂರಕ್ಷಣೆ ಕೂಗಿಗೆ ಓಗೊಟ್ಟ ಜನತೆ; ಝೂಗಳಿಗೆ ಹರಿದು ಬಂತು ₹1 ಕೋಟಿ ದೇಣಿಗೆ  appeared first on News First Kannada.

Source: newsfirstlive.com

Source link