ಕನ್ನಡದ ಕಾಮಿಡಿ ರಿಯಾಲಿಟಿ ಶೋ ಮೂಲಕ ಮನೆ ಮಾತಾದವರು ಅವಿನಾಶ್​ ಅಲಿಯಾಸ್​ ಜ್ಯೂನಿಯರ್​ ದರ್ಶನ್​. ಸದ್ಯ ತಮ್ಮನ್ನ ನಟನೆಯಲ್ಲೇ ತೊಡಗಿಸಿಕೊಂಡಿರುವ ಅವಿನಾಶ್​, ಎಲ್ಲೇ ಹೋದ್ರೂ ದರ್ಶನ್​ ತದ್ರೂಪಿ ಅಂತಾನೇ ಗುರುತಿಸಲ್ಪಡ್ತಾರೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ರನ್ನ ಒಂದೇ ಬಾರಿ ಭೇಟಿಯಾಗಿರುವ ಅವಿನಾಶ್​, ದರ್ಶನ್​ ಜೊತೆಗೆ ನಟಿಸುವ ಅವಕಾಶ ಕೊಟ್ಟರೇ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ತೀನಿ ಅಂತಾರೆ. ನಟನೆ ಕೊಟ್ಟಿಲ್ಲ ಅಂದ್ರೂ ಓಕೆ, ಅವರ ಹಿಂದೆ ಸುಮ್ನೆ ನಿಲ್ಲುವ ಅವಕಾಶ ಕೊಟ್ರೂ ನನಗೆ ಅದೇ ಸಾಕು ಅನ್ನೋದು ಅವಿನಾಶ್​​ ಆಸೆ.

ದರ್ಶನ್​ ಸರ್​ ಹಿಂದೆ ಸುಮ್ನೆ ಕೈ ಕಟ್ಟಿ ನಿಲ್ಲೋ ಪಾತ್ರ ಕೊಟ್ರೂ ಮಾಡ್ತೀನಿ. ಅವರ ಜೊತೆ ಇರೋದೇ ಒಂದು ಖುಷಿ, ಆಸೆ. ಇನ್ನು ಅವರ ಜೊತೆ ಸಣ್ಣ ಪಾತ್ರ ಮಾಡೋಕೆ ಕೊಟ್ರೂ ಬೇಡ ಅಂತೀನಾ? ಅವರ ಜೊತೆ ಕೆಲಸ ಮಾಡೋಕೆ ತುಂಬಾ ಆಸೆ ಇದೆ. ಸರ್​ನ ನೋಡ್ಬೇಕು ಅಂತಾನೇ ಕೋಟ್ಯಾಂತರ ಜನ ಅವರ ಮನೆ ಮುಂದೆ ಕಾಯುತ್ತಿರುತ್ತಾರೆ. ಅವರು ಎಲ್ಲಾದ್ರೂ ಹೋದ್ರೆ ಅವರ ಕಾರ್​ ಹಿಂದೆ ಹೋಗ್ತಾರೆ. ನನಗೆ ಅವರ ಜೊತೆಗೆ ಕೆಲಸ ಮಾಡಿಲ್ಲ ಅಂದ್ರೂ ಪರವಾಗಿಲ್ಲ. ಅವರ ಜೊತೆ ಇರು ಅಂದ್ರೂ ನನಗೆ ಅದು ಸಾಕು.

ಅವಿನಾಶ್​, ಜ್ಯೂನಿಯರ್​ ದರ್ಶನ್​- ನಟ

ನ್ಯೂಸ್​ ಫಸ್ಟ್​​ ಜೊತೆ ಮಾತನಾಡುತ್ತಾ ಅವಿನಾಸ್​ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಅಂದ್ಹಾಗೇ ಅವಿನಾಶ್​ ಮಾತನಾಡುವ ಶೈಲಿ, ನಗುವ ಪರಿ ಎಲ್ಲವೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ರನ್ನೇ ನೆನಪಿಸುತ್ತೆ. ಮೂಲತಃ ಚಿಕ್ಕಮಗಳೂರಿನವರಾದ ಅವಿನಾಶ್​, ಟಿಕ್​ಟಾಕ್​ನಲ್ಲಿ ದರ್ಶನ್​ ವಿಡಿಯೋಗಳಿಗೆ ಆ್ಯಕ್ಟ್​​ ಮಾಡುವ ಮೂಲಕ ಚಾನೆಲ್​ ಕಣ್ಣಿಗೆ ಬಿದ್ದವರು. ವೃತ್ತಿಯಲಗಲಿ ಆಟೋ ಡ್ರೈವರ್​ ಆಗಿ, ಇದೀಗ ತಾವೇ ಒಂದು ಸಿನಿಮಾಗೆ ಸೋಲೋ ಹೀರೋ ಆಗಿದ್ದಾರೆ. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಆಘಿದ್ದು ಈಗಾಗಲೇ ಶೂಟಿಂಗ್​ ಕೂಡ ಶುರುವಾಗಿದೆ. ರಿಯಾಲಿಟಿ ಶೋ ಮೂಲಕ ರಂಜಿಸಿದ ಅವಿನಾಶ್​​, ಸಿನಿಮಾದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

 

The post ದರ್ಶನ್​ ಸರ್​ ಹಿಂದೆ ಸುಮ್ನೆ ಕೈ ಕಟ್ಟಿ ನಿಲ್ಲೋ ಪಾತ್ರ ಕೊಟ್ರೂ ಮಾಡ್ತೀನಿ- ಜ್ಯೂನಿಯರ್​ ದರ್ಶನ್ appeared first on News First Kannada.

Source: newsfirstlive.com

Source link