ಬೆಂಗಳೂರು: ದರ್ಶನ್ ಮೇಲೆ ಹಲ್ಲೆ ಆರೋಪಗಳನ್ನು ಹೊರಿಸಿರುವ ನಿರ್ದೇಶಕ ಇಂದ್ರಜಿತ್ ಇಂದು ಸುದ್ದಿಗೋಷ್ಠಿ ನಡೆಸಿದರು.. ದರ್ಶನ್ ಹಿಂಬಾಲಕರು, ಅವರ ರೌಡಿಗಳು ಬೆದರಿಕೆ ಹಾಕಿದ್ದಾರೆ.. ಹೀಗಾಗಿ ಸೈಬರ್​ ಕ್ರೈಂಗೆ ದೂರು ನೀಡಲು ಹೋಗ್ತಾ ಇದ್ದೇನೆ.. ನನಗೆ ನಿರಂತರವಾಗಿ 20-30 ನಂಬರ್​ಗಳಿಂದ ಕಳೆದ 24 ಗಂಟೆಗಳಲ್ಲಿ ಕಾಲ್​ಗಳು ಬರ್ತಾ ಇವೆ. ವಾಟ್ಸ್​ಆ್ಯಪ್ ಮೂಲಕ ಅಶ್ಲೀಲ ಚಿತ್ರ, ಅಶ್ಲೀಲ ಪದಗಳನ್ನ ಬಳಸಿ ಕಾಲ್ ಮಾಡ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಕಾನೂನಿನ ಮೂಲಕವೇ ಉತ್ತರ ಕೊಡ್ತೀನಿ’ ತೆರೆಮರೆಯಲ್ಲಿ ಕೈಜೋಡಿಸಿದ್ರಾ ಇಂದ್ರಜಿತ್, ಉಮಾಪತಿ?

ನನಗೆ ಕಾಲ್ ಮಾಡ್ತಿರೋರಿಗೆ ಪಾಠ ಕಲಿಸ್ತೀನಿ.. ಕಾಲ್ ಮಾಡ್ತಾರೆ.. ಪಿಕ್ ಮಾಡಿದ್ರೆ ಮಾತಾಡಲ್ಲ.. ಇವರ ಸಂಸ್ಕಾರ ಅಭಿರುಚಿ ಯಾವ ತರ ಇದೆ ಅಂತ ನೀವೇ ನೋಡಿ ಎಂದು ಮಾಧ್ಯಮಗಳಿಗೆ ತಮಗೆ ಬರುತ್ತಿರುವ ಫೋನ್ ಕರೆಗಳು.. ಅಶ್ಲೀಲ ಸಂದೇಶಗಳನ್ನ ಇಂದ್ರಜಿತ್ ಲಂಕೇಶ್ ತೋರಿಸಿದ್ರು..

ಇದನ್ನೂ ಓದಿ: ಗಂಡಸಾಗಿದ್ರೆ ಇಂದು ಸಂಜೆಯೊಳಗೆ ನನ್ನ ವಾಯ್ಸ್​ ನೋಟ್ ಬಿಡಲಿ; ಇಂದ್ರಜಿತ್ ಲಂಕೇಶ್ ದರ್ಶನ್ ಸವಾಲು

ಇಂಥ ಬೆದರಿಕೆ ಕರೆಗಳು ನನಗೇನು ಹೊಸದಲ್ಲ 40ಕ್ಕೂ ಹೆಚ್ಚು ವರ್ಷಗಳಿಂದ ನಾನು ಇಂಥವನ್ನೆಲ್ಲ ನೋಡಿದ್ದೇನೆ.. ನಮ್ಮ ತಂದೆಯವರು ಪತ್ರಿಕೆ ನಡೆಸುವಾಗಿನಿಂದಲೂ ನಾನು ಇಂಥವನ್ನೆಲ್ಲ ನೋಡಿದ್ದೇನೆ ಎಂದಿದ್ದಾರೆ.

The post ‘ದರ್ಶನ್ ಬೆಂಬಲಿಗರು, ಅವರ ರೌಡಿಗಳಿಂದ ಬೆದರಿಕೆ ಕರೆ ಬರ್ತಿವೆ’.. ಇಂದ್ರಜಿತ್ ಮತ್ತೆ ಗಂಭೀರ ಆರೋಪ appeared first on News First Kannada.

Source: newsfirstlive.com

Source link