ಬೆಂಗಳೂರು: ಕೊರೊನಾ ಲಾಕ್​ಡೌನ್​​ನಿಂದಾಗಿ ರಾಜ್ಯದಲ್ಲಿರುವ ಮೃಗಾಲಯಗಳು ಸಂಕಷ್ಟದಲ್ಲಿವೆ. ದಯವಿಟ್ಟು ಝೂಗಳ ನೆರವಿಗೆ ಬನ್ನಿ ಎಂದು ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮನವಿ ಮಾಡಿಕೊಂಡಿದ್ದರು.

ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯಕ್ಕೆ ತೆರಳಿ ಗಿಡಗಳನ್ನ ನೆಟ್ಟಿದ್ದರು. ಬಳಿಕ ಝೂಗಳ ವಸ್ತುಸ್ಥಿತಿ ಬಗ್ಗೆ ದರ್ಶನ್ ಬಿಚ್ಚಿಟ್ಟಿದ್ದರು. ಪ್ರಾಣಿಗಳನ್ನ ಈ ಸಮಯದಲ್ಲಿ ದತ್ತು ಪಡೆಯುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಕೊರೊನಾದಿಂದ‌ ಕಷ್ಟದಲ್ಲಿರುವ ಝೂಗಳ ನೆರವಿಗೆ ಬರುವಂತೆ ನಟ ದರ್ಶನ್​ ಮನವಿ ಮಾಡಿದ್ದರು.

ದರ್ಶನ್ ಮನವಿಗೆ ಸ್ಪಂದಿಸಿದ ಸಾರ್ವಜನಿಕರು ಸಾಕಷ್ಟು ಹಣವನ್ನ ನೀಡಿದ್ದಾರೆ ಅಂತಾ Zoos of Karnataka ಕರ್ನಾಟಕ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಝೂ ಆಫ್ ಕರ್ನಾಟಕ.. ದರ್ಶನ್ ತೂಗುದೀಪ ಅವರ ಮನವಿಯ ಹಿನ್ನೆಲೆಯಲ್ಲಿ ಬಹಳಷ್ಟು ಸಾರ್ವಜನಿಕರು ₹50 ರಿಂದ ₹1,00,000 ವರಗೂ ದತ್ತು ಮತ್ತು ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ತಾಂತ್ರಿಕ ಸಮಸ್ಯೆಯಿಂದ OTP ತೊಂದರೆಯಾಗಿದೆ, ತುರ್ತಾಗಿ ಸರಿಪಡಿಸಲಾಗುವುದು, ಅಲ್ಲಿಯವರೆಗೆ https://et3.psmedia.in ಮೂಲಕ ದೇಣಿಗೆ ನೀಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ಮೃಗಾಲಯದಲ್ಲಿ ಗಿಡ ನೆಟ್ಟು, ಪ್ರಾಣಿಗಳನ್ನ ದತ್ತು ಪಡೆಯುವಂತೆ ಕೈ ಮುಗಿದ ದರ್ಶನ್

The post ದರ್ಶನ್ ಮನವಿಗೆ ತಲೆ ಬಾಗಿದ ಸಾರ್ವಜನಿಕರು; ಮೃಗಾಲಯಗಳಿಗೆ ಹರಿದುಬಂತು ದೇಣಿಗೆ appeared first on News First Kannada.

Source: newsfirstlive.com

Source link