ಬೆಂಗಳೂರು: ನಟ ದರ್ಶನ್ ಸಂದೇಶ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್​ ನಿವಾಸಕ್ಕೆ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆಯನ್ನ ನೀಡಿದ್ದಾರೆ. ಬೆಂಗಳೂರಿನ ಕೋರಮಂಗಲದ ಇಂದ್ರಜಿತ್ ಅವರ ನಿವಾಸದ ಬಳಿ ಪೊಲೀಸ್​ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

ಏಟು ತಿಂದವನ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು -ಇಂದ್ರಜಿತ್ ಲಂಕೇಶ್

ನಿನ್ನೆ ಇಂದ್ರಜಿತ್ ಲಂಕೇಶ್​.. ದರ್ಶನ್ ಮೇಲೆ ಗಂಭೀರವಾದ ಆರೋಪವನ್ನ ಮಾಡಿದ್ದರು. ಮೈಸೂರಿನ ಸಂದೇಶ್ ಪ್ರಿನ್ಸ್​ ಹೋಟೆಲ್​​ನಲ್ಲಿರುವ ಬಾರ್​ ಸಪ್ಲೈಯರ್ ಮೇಲೆ ದರ್ಶನ್ ಅಂಡ್ ಟೀಂ ಹಲ್ಲೆ ಮಾಡಿದೆ. ಬಳಿಕ ರಾಜೀ ಸಂಧಾನ ಮಾಡಿ ಕಳುಹಿಸಿದ್ದಾರೆ. ಈ ಬಗ್ಗೆ ಮೈಸೂರು ಪೊಲೀಸರು ಕೈಗೆ ಬಳೆ ತೊಟ್ಟು ಕೂತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೂ ದೂರು ನೀಡಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಇದನ್ನೂ ಓದಿ: ‘ಯಾರಾದ್ರೂ ಮಾತಾಡಿದ್ರೆ ನಾನು ಹೊಡೀದೇ ಇರ್ತೀನಾ.?’ ಹೀಗಂತ ದರ್ಶನ್ ಅವರೇ ಹೇಳಿದ್ದಾರೆ- ಇಂದ್ರಜಿತ್

ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ

The post ದರ್ಶನ್ ವಿರುದ್ಧ ಗಂಭೀರ ಆರೋಪ; ಇಂದ್ರಜಿತ್ ಲಂಕೇಶ್ ಮನೆಗೆ ಬಿಗಿ ಭದ್ರತೆ appeared first on News First Kannada.

Source: newsfirstlive.com

Source link