ಬೆಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸುದ್ದಿಗೋಷ್ಠಿ ಕರೆದು ಮಾತನಾಡಿದರು. ನಾನು ಸಮಾಜದ ಹಿತದೃಷ್ಟಿಯಿಂದ ಮಾತಾಡ್ತಿದ್ದೇನೆ.. ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ. ನಾನು ನನ್ನ ತಂದೆ ಎಲ್ಲರೂ ಸಮಾಜದ ಕಾಳಜಿ ಇದ್ದವರು.. ಬಡವರಿಗೆ ಸಾಮಾನ್ಯರಿಗೆ ಅನ್ಯಾಯವಾಗಿದೆ.. ಅವರಿಗೆ ನ್ಯಾಯ ಕೊಡಿಸಲಷ್ಟೇ ಮಾತಾಡಿದೆ. ಇಲ್ಲಿ ನೋವಾಗಿರೋದು ಸಾಮಾನ್ಯರಿಗೆ.. ಸೆಲಿಬ್ರಿಟಿ ಅಂತ ನಾನು ತೇಜೋವಧೆ ಮಾಡಲು ಮಾತಾಡ್ತಾ ಇಲ್ಲ. ನಾನು ಬಡವರೆಲ್ಲರೂ ದಲಿತರೇ ಅನ್ನೋ ಅರ್ಥದಲ್ಲಿ ಹೇಳಿದ್ದೆ ಅಷ್ಟೇ.. ಸಮಾಜದಲ್ಲಿ ಶೋಷಿತರು ಬಡವರು ಎಲ್ಲರೂ ದಲಿತರೇ ಎಂದಿದ್ದಾರೆ.

ಹೆಚ್ಚು ವಿಷಯಗಳು ಹೊರಬರುವ ಮುನ್ನ ಕ್ಷಮೆ ಕೇಳಿ..
ಇನ್ನೂ ಹೆಚ್ಚು ವಿಷಯಗಳು ಹೊರಗೆ ಬರುವ ಮುನ್ನ ನೋವು ಪಟ್ಟವರಿಗೆ ನೀವು ಕ್ಷಮೆ ಕೇಳಿ.. ನ್ಯಾಯ ಒದಗಿಸಿಕೊಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ.. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಹೆಸ್ರು ಮೆನ್ಷನ್ ಮಾಡ್ಬೇಡಿ.. ಅವರಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಸಂದರ್ಶನದ ಹೊರತಾಗಿ ಅವರನ್ನ ನಾನು ಭೇಟಿಯಾಗಿಲ್ಲ. ನನಗೆ ಆ ವ್ಯಕ್ತಿಗೆ ನ್ಯಾಯ ಕೊಡಿಸುವುದಷ್ಟೇ ನನ್ನ ಹೋರಾಟ. ಇದನ್ನ ಮುಂದುವರೆಸಬೇಡಿ.. ಮತ್ತಷ್ಟು ಡೀಫೇಮ್ ಆಗುತ್ತೆ.

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

ಮೇರು ನಟ ಹೇಗಿರಬೇಕು ಅನ್ನೋದಕ್ಕೆ ಡಾ. ರಾಜ್​ಕುಮಾರ್ ಉದಾಹರಣೆ..

ಮೇರು ನಟ ಹೇಗಿರಬೇಕು ಅನ್ನೋದಕ್ಕೆ ಡಾ. ರಾಜ್​ಕುಮಾರ್ ಉದಾಹರಣೆ. ಅವರನ್ನ ನೋಡಿ ಕಲೀಬೇಕು. ಪ್ರತಿಯೊಂದು ಹೆಜ್ಜೆ ಕೂಡ ಮುಖ್ಯ ಆಗಿರುತ್ತೆ. ಸಪ್ಲೈಯರ್ಸ್​ಗೆ ನಾಳೆ ಕೆಲ್ಸ ಸಿಗಲ್ಲ ಅಂತ ಭಯ ಇರುತ್ತೆ ಹೀಗಾಗಿ ಅವರು ಮುಂದೆ ಬರುತ್ತಿಲ್ಲ. ಕ್ಷಮೆ ಕೇಳಿ ಒಳ್ಳೆಯದು ಮಾಡಿ.. ಕ್ಷಮೆ ಕೇಳೋದ್ರಿಂದ ನೀವು ಏನನ್ನೂ ಕಳೆದುಕೊಳ್ಳೋದಿಲ್ಲ. ಹಲ್ಲೆಗೊಳಗಾದವರು ಬಡವರು.. ಅವರಿಗೆ ಮುಂದೆ ಬಂದು ಫೇಸ್ ಮಾಡೋಕೆ ಧೈರ್ಯ ಇಲ್ಲ. ಹಾಗಾಗಿ ಅವರು ಮುಂದೆ ಬರೋದಿಲ್ಲ.

ಸ್ಟಾರ್ ನಟನ ತಾಯಿಯೊಬ್ಬರು ನನಗೆ ಕಾಲ್ ಮಾಡಿದ್ರು..

ನಾನು ಲಾಯರ್ ಶ್ಯಾಮ್ ಸುಂದರ್ ಅವರನ್ನೂ ಕರೆದುಕೊಂಡಿದ್ದೇನೆ. ನಿನ್ನೆಯಿಂದ ಸಾಕಷ್ಟು ಜನ ಕಾಲ್ ಮಾಡ್ತಿದ್ದಾರೆ. ನಮಗೂ ಈ ರೀತಿ ತುಂಬಾ ಬಾರಿ ಆಗಿದೆ ಎಂದಿದ್ದಾರೆ. ಮುಂದೆ ಬರೋಕೆ ಆಗ್ತಿಲ್ಲ ಅಂದಿದ್ದಾರೆ. ಸ್ಟಾರ್ ನಟನ ತಾಯಿಯೊಬ್ಬರು ನನಗೆ ಕಾಲ್ ಮಾಡಿದ್ರು. ನಮ್ಮ ಮನೆ ಪಕ್ಕದಲ್ಲೂ ಈತರ ಆಗಿದೆ. ಕೆಲವರು ಕಂಪ್ಲೆಂಟ್ ಕೊಟ್ರೆ ತಗೊಳಲ್ಲ ಹೆಲ್ಪ್ ಮಾಡಿ ಅಂತಾರೆ. ಮೈಸೂರಿನಲ್ಲಿ ಈ ರೀತಿ ಪದೇ ಪದೇ ಆಗ್ತಿದೆ. ಗಂಗಾಧರ್ ದಲಿತನಲ್ಲ ಬ್ರಾಹ್ಮಣ ಅಂತ ಹೇಳಿದ್ರಿ.. ಅದೇ ಹೋಟೆಲ್​ನವರೇ ಹೇಳಿರೋದು.. ದಲಿತನೋ.. ಬ್ಯಾಹ್ಮಣನೋ ಅನ್ನುವುದು ಮುಖ್ಯವಲ್ಲ.

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪ; ಆದ ದಿನ ಹೋಟೆಲ್​ನಲ್ಲಿ ಏನೇನಾಯ್ತು..? ಸಿಬ್ಬಂದಿ ಹೇಳಿದ್ದೇನು..?

ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಬಣ್ಣ ಇಲ್ಲ..
ನಾನು ಬಡವರೆಲ್ಲರೂ ದಲಿತರೇ ಅನ್ನೋ ಅರ್ಥದಲ್ಲಿ ಹೇಳಿದ್ದೆ.. ಸಮಾಜದಲ್ಲಿ ಶೋಷಿತರು, ಬಡವರು ಎಲ್ಲರೂ ದಲಿತರೇ.. ಆಡಿಯೋದಲ್ಲಿ ಹೋಟೆಲ್ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಎಲ್ಲಾ ಒಪ್ಪಿಕೊಂಡಿದ್ದಾರೆ. ಸಂದೇಶ್ ಅವರ ಜೊತೆ ಮಾತನಾಡಿರುವ ಆಡಿಯೋ ನನ್ನದೇ.. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಬಣ್ಣ ಇಲ್ಲ. ರೆಕ್ಕೆ ಪುಕ್ಕ ಇಲ್ಲ. ಇದು ನನ್ನ ಏಕಾಂಗಿ ಹೋರಾಟ.. ನನ್ನ ಜೊತೆ ಯಾರೂ ಇಲ್ಲ.

ಇನ್ನು ವಕೀಲ ಶ್ಯಾಮ್​ಸುಂದರ್​ ಮಾತನಾಡಿ.. ನನ್ನ ಸಲಹೆಯಂತೆ ಇಂದ್ರಜಿತ್ ಅವರು ಬೇರೆಯವರ ಮೂಲಕ ಆಡಿಯೋ ರಿಲೀಸ್ ಮಾಡಿದ್ದಾರೆ. ನಾನು ಮಾಧ್ಯಮಗಳ ಮೂಲಕ ದಾಖಲೆ ಮಾಡಬೇಡಿ ಎಂದು ಹೇಳಿದ್ದೆ. ತನಿಖೆ ಹಂತದಲ್ಲಿ ಯಾವುದೇ ದಾಖಲೆಗಳನ್ನ ಮಾಧ್ಯಮಗಳಿಗೆ ಕೊಡಬಾರದು ಎಂದು ಕೋರ್ಟ್ ಹೇಳಿದೆ. ನನ್ನ ಸಲಹೆಯನ್ನು ಇಂದ್ರಜಿತ್ ಲಂಕೇಶ್ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

The post ದರ್ಶನ್ ವಿರುದ್ಧ ಹಲ್ಲೆ ಆರೋಪ; ‘ಬಡವರೆಲ್ಲ ದಲಿತರು ಅಂತ ಹೇಳಿದ್ದೆ’ ಇಂದ್ರಜಿತ್ ‘U’ ಟರ್ನ್ appeared first on News First Kannada.

Source: newsfirstlive.com

Source link