ಮೈಸೂರು: ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಆರೋಪಗಳನ್ನ ಮಾಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂದೇಶ್​ ಪ್ರಿನ್ಸ್​ ಹೋಟೆಲ್​ಗೆ ಪೊಲೀಸರು ಭೇಟಿ ನೀಡಿದ್ದಾರೆ.

ಇಂದು ಬೆಳಗ್ಗೆ ಸಂದೇಶ್​ ಪ್ರಿನ್ಸ್​ ಹೋಟೆಲ್​ಗೆ ಎಸಿಪಿ ಶಶಿಧರ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ, ಘಟನೆ ಕುರಿತಂತೆ ಹೋಟೆಲ್ ಮಾಲೀಕರು ಸಿಬ್ಬಂದಿ ಜೊತೆ ಮಾಹಿತಿ ಸಂಗ್ರಹ ಮಾಡಿದರು.

ಇನ್ನೂ ಇಂದ್ರಜಿತ್ ಲಂಕೇಶ್ ಅವರು ನಿನ್ನೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನ ಭೇಟಿಯಾಗಿ ದರ್ಶನ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಗೃಹ ಇಲಾಖೆಯಿಂದ ಮೈಸೂರು ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸುವಂತೆ ಆದೇಶ ಪತ್ರ ರವಾನೆಯಾಗಿತ್ತು. ಪೊಲೀಸರ ತನಿಖೆ ಬಳಿಕ ವಿವಾದಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಹೊರಬರಬೇಕಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ.. ನಂತರ ಮಹತ್ವದ ಸುದ್ದಿಗೋಷ್ಠಿ

The post ದರ್ಶನ್ ವಿರುದ್ಧ ಹಲ್ಲೆ ಆರೋಪ- ಸಂದೇಶ್ ಪ್ರಿನ್ಸ್ ಹೋಟೆಲ್​​ಗೆ ಪೊಲೀಸರ ಭೇಟಿ appeared first on News First Kannada.

Source: newsfirstlive.com

Source link