ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

ಮೈಸೂರು: ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆಂಬ ಆರೋಪಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.. ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಸ್ವಾಮಿ ಮಾತಾಡಿದ್ದರೆನ್ನಲಾದ ಆಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದ್ದು.. ಆಡಿಯೋದಲ್ಲಿ ಘಟನೆಗೆ ಸಂಬಂಧಿಸಿದಂತೆ ಮಾತನಾಡಲಾಗಿದೆ. ಹೋಟೆಲ್‌ ಸಿಬ್ಬಂದಿಗೆ ದರ್ಶನ್ ಹಲ್ಲೆ.. ದರ್ಶನ್‌ನ ಗೆಳೆಯರ ಕುರಿತಂತೆಯೂ ಫೋನ್ ಸಂಭಾಷಣೆಯಲ್ಲಿ ಚರ್ಚೆ ನಡೆದಿದೆ.

ಆಡಿಯೋ ಸಂಭಾಷಣೆಯಲ್ಲಿ ಏನಿದೆ..?

ಸಂದೇಶ್ ಸ್ವಾಮಿ– ಫೋನ್ ಮಾಡಿರ್ಲಿಲ್ಲ.. ವಾಟ್ಸ್​ ಆ್ಯಪ್ ಬ್ಲಾಕ್ ಮಾಡಿ ಇಟ್ಟಿದ್ದೆ.

ಅನಾಮಧೇಯ– ಮಾಡಿದ್ನಾ ಈಗ..?

ಸಂದೇಶ್ ಸ್ವಾಮಿ– ಇಲ್ಲ ಇಲ್ಲ.. ನಾನೇನೆ ಫೋನ್ ಮಾಡಿ.. ನೋಡಪ್ಪ ನಿಂದು ಸಾವಿರ ಇದೆ. ನೀನು ಅವ್ನನ್ನ ಬ್ಲಾಕ್ ಮೇಲ್ ಮಾಡೋಕೆ ಹೋಗ್ತಾ ಇದ್ಯಾ ತಪ್ಪು ಇದು. ನಿಮ್ದು ಒಂದ್ ನಿಮ್ಸಕ್ಕೆ ಒಂದು ಸಾವಿರ ಬರ್ತವೆ..ಅವ್ನಿಗೇನೇನ್ ಬಯ್ದಿದ್ಯೋ.. ಅವ್ನತ್ರ ಏನೇನ್ ಮಾಡಿದ್ಯೋ.. ಪಾಪ ಅವ್ನನ್ನ ಅದೊಂದು ಹುಡ್ಗಿ ಜೊತೆ ಫ್ಲರ್ಟ್ ಮಾಡ್ಕೊಂಡಿರೋದ್ನ ಇಂಗೆಲ್ಲ ಮಾಡ್ತಿದ್.. ಆ ಹುಡ್ಗಿಗೂ ಅವಮಾನ..ತಿರುಗ್ಸಿ ಪರಗ್ಸಿ ಅವ್ಳನ್ನ ಇಟ್ಕೊಂಡು.. ನಿಮ್ಮಿಬ್ರದ್ದು ಏನಾಗಿದ್ಯೋ ನನಗೆ ಗೊತ್ತಿಲ್ಲ. ಬಟ್ ಹೇಳ್ತಾ ಇದ್ದೀನಿ.. ಅವ್ನುನು ಒಂದು ಮನೆ ಹಾಳ್ ಮಾಡಿದ್ಮೇಲೆ.. ಒಂದ್ ಮನೆ ಹಾಳಾದ್ರೆ ಅವ್ನು ಸುಮ್ನಿರ್ತಾನಾ..? ಬಿಡ್ತಾನ್ ನೋಡು ಅವನೂ ನಿಂದೂನುವೆ ಅಂದೆ.

ಇದನ್ನೂ ಓದಿ: ‘ನಾನು ದಲಿತನಲ್ಲ’ ಎಂದ ಸಂದೇಶ್​ ಹೋಟೆಲ್ ಗಂಗಾಧರ್; ಇಂದ್ರಜಿತ್​ಗೆ ಮತ್ತೆ ಹಿನ್ನಡೆ

ಅನಾಮಧೇಯ– ಬಿಟ್ನಲ್ ಅವ್ನು

ಸಂದೇಶ್ ಸ್ವಾಮಿ– ಆಮೇಲೆ ಅವ್ನಿಗೆ ಹೇಳ್ದ..ತಿರ್ಗಾ ನನಗೆ ಫೋನ್ ಮಾಡ್ದ.. ನೀನ್ ಹೇಳ್ದಂಗೆ ಏನೋ ಹೇಳ್ತವ್ನೆ ಪ್ರೆಸ್ಸಲ್ಲಿ ಅಂತ. ಫೇಸ್ ಮಾಡು ಈಗ ಅಂದೆ.. ಫೇಸ್ ಮಾಡು.. ತಲೆ ಕತ್ತರಿಸಿಬಿಡ್ತೀನಿ.. ಅಂಗ್ ಕತ್ತರಿಸಿಬಿಡ್ತೀನಿ.. ಇವೆಲ್ಲಾ ಏನದು..? ಏನ್ ತಿಳ್ಕೊಂಡ್ ಬಿಟ್ಟಿದ್ಯಾ ನಿನ್ನ.. ಅಂದೆ. ಆಮೇಲ್ ಈಗ ನಾನೇನೇ ಆದ್ರೂ ಪ್ರೊಡ್ಯೂಸರ್ ಪರ.. ಇವೆಲ್ಲಾ ಬೇಕಾ..? ಬೇಕಾ ಸರ್..?

ಅನಾಮಧೇಯ; ಕರೆಕ್ಟಾಗ್ ಹೇಳುದ್ರಿ.. ಹರ್ಷ ಪಾಪಣ್ಣ ಇದ್ರಂತಲ್ಲ ಅವತ್ತು ಜಗಳ ಆಡಿದಾಗ..

ಸಂದೇಶ್ ಸ್ವಾಮಿ: ಯಾವತ್ತು..?

ಅನಾಮಧೇಯ: ಹೋಟೆಲ್​ನಲ್ಲಿ ಎಲ್ಲ ಇದ್ರಂತಲ್ಲ.. ಜಗಳ ಆಡ್ದಾಗ..?

ಸಂದೇಶ್ ಸ್ವಾಮಿ: ಅವರೆಲ್ಲಾ ನೋಡ್ತಾ ನಿಂತಿದ್ರು.. ಬೈದ್ನಲ್ಲಾ ನಾನು.. ರೀ.. ನೀವೆಲ್ಲಾ 15 ಜನ ಇದ್ದೀರಿ ಒಬ್ಬ ಕೆಲಸಗಾರನಿಗೆ ಒಡೀಬೇಕಾದ್ರೆ ನೋಡ್ತಾ ನಿಂತಿದ್ದೀರಲ್ಲ ಒಬ್ಬ ಹೋಟ್ಲು ಓನರ್ರಾಗಿ.. ನಾಚ್ಕೆ ಆಗಲ್ವ ನಿಮ್ಗೆ ಅಂತ ಬೈದ್ನಲ್ಲ ನಾನು. ಅಮೇಲೆ ಅವು ಪೋಲಿಗಳು.. ರಾಕೇಶ್ ಪಾಪಣ್ಣ ಅಂತ ಇದ್ದಾನಲ್ಲಾ.. ಅವ್ನ ಕೆಲಸ ಏನು ಗೊತ್ತಾ..? ಯಾವ ಲಿಟಿಗೇಷನ್ ಪ್ರಾಪರ್ಟಿ ಇದ್ರೂ ಕೈ ಹಾಕೋದು ಕೇಸ್ ಹಾಕೋದು.. ಬಡವ್ರದ್ದು.. ಒಂದು ರೂಪಾಯಿದು ಮೈಸೂರಲ್ಲಿ ಬೆಲೆ ಇಲ್ಲ. ಅವ್ರ ಮಗ ಇವ್ನು. ಆದ್ರೆ ನಮ್ಮತ್ರ ಏನೂ ಬಾಲ ಬಿಚ್ಚಲ್ಲ. ಬಟ್ ಓನ್ಲಿ ತಿಂಗ್ ಈಸ್ ದಿಸ್ ಈಸ್ ದ ಪ್ರಾಬ್ಲಮ್.. ಅಂತವ್ನು ಅವ್ನಿರದು. ಇನ್ನು ಹರ್ಷ ಊರ್ ತುಂಬಾ ಸಾಲ ಮಾಡ್ಕೊಂಡವ್ನೆ.. ಹೆಸರಿಗೆ ಚೆನ್ನಾಗ್ ನಡೀತಾಯ್ದೆ ಪಾಪ..ಅದ್ನೆಲ್ಲಾ ಕ್ಲಬ್ ಮೆಂಬರ್ಸ್ ಮೆಂಬರ್ ಶಿಪ್ ತಗೊಂಡು ಮಾಡ್ಕೊಂಡಿರೋದದು. ಅವನದ್ದೇನು ಸ್ವಂತ ಇಲ್ಲ. ಎಲ್ಲಾರತ್ರನೂ ಇಸ್ಕೊಂಡು ಮಾಡಿರೋದು ಬ್ಯುಸಿನೆಸ್ ಬುಡಿ.. ಅದ್ನ ನಾವ್ ತಪ್ಪು ಅಂತ ಹೇಳೋದೇ ಇಲ್ಲ. ಅವ್ನೇನು ಗೊತ್ತಾ.. ಅವ್ನೇ ಹೊಡೆದುಬಿಡೋದು ಬೇರೆ ಕಸ್ಟಮರ್​ಗೆ.. ಪವಿತ್ರ ಗೌಡ ಇವ್ರು ಒಂದು ರೂಮು ದರ್ಶನ್‌. ಇನ್ನ ಮತ್ತೊಂದು ರೂಮಲ್ಲಿ ಇನ್ನ ಅವ್ರಿಗೆ ಇವ್ನು ಊಟ ಹಾಕಿರೋದು. ಈ ಬೃಹಸ್ಪತಿಗಳಿಗೆ. ಏನ್ ದೊಡ್ಡ ಇವ್ರನ್ನ ಕರ್ಕೊಂಡು ಬರ್ತಿನೆ ಅಂದ್ರೆ, ಇವ್ರೆನೆ 15 ಜನ. ನಾನು ಬಂದು ಬೈದಿದ್ದು ಅವರಿಗೇನೆ. ಅಲ್ಲಾ ರೀ 15 ಜನ ಇಟ್ಕೊಂಡು ಒಬ್ಬನಿಗೆ ಹೊಡೀತಾ ಇದ್ರೆ ನೀನು ನೋಡ್ಬೇಕಲ್ವಾ.. ಹೋಟೆಲ್ ಮ್ಯಾನೇಜರ್ ಕಾಲು ಕಟ್ಟಿಬಿಟ್ಟ ನನಗೆ. ಅಣ್ಣಾ ಅಣ್ಣಾ ನನ್ನ ಮಿಸ್ಟೇಕ್ ಮಾಡ್ಕೋಬೇಡ ಅಣ್ಣಾ ಅಂತಾ.. ಏನೋ ಹೋಗ್ರಪ ಅಂದು ಬಿಟ್ಟು ಕಳಿಸಿದೆ ಮುಗಿದು ಹೋಯ್ತು.

ಇದನ್ನೂ ಓದಿ: ದರ್ಶನ್ ವಿರುದ್ಧ ಹಲ್ಲೆ ಆರೋಪ- ಸಂದೇಶ್ ಪ್ರಿನ್ಸ್ ಹೋಟೆಲ್​​ಗೆ ಪೊಲೀಸರ ಭೇಟಿ

ಅನಾಮಧೇಯ: ಹು

ಸಂದೇಶ್ ಸ್ವಾಮಿ: ನಿನ್ನೆ ನಾನು ಅಂದೆ ಯಾರೂ ಒಳ್ಳೇವ್ರಲ್ಲ ನಿನ್ನತ್ರ ಇರೋರು. ಬರೀ ಒಂದು ಫ್ರೆಂಡ್ ಅಲ್ಲಾ. ಈಗ ಸ್ಟೇಷನ್ ಹೋದ್ನಲ್ಲ ಪ್ರೆಸ್‌ಗೆ ತಲೆಕಡಿತಿನಿ ಬಡಿತಿನಿ ಅಂತ ಹೇಳಿದ್ನಲ್ಲಾ..ಇದೆಲ್ಲಾ ಶಾಶ್ವತ ಅಲ್ಲ ದರ್ಶನ್‌. ತಪ್ಪು ನೀನು ಹೇಳಿರೋದು. ಆಮೇಲೆ ಅವ್ರು ಒಳ್ಳೇವ್ರಲ್ಲ ನಿನ್ ಜೊತೆ ಇರೋರು. ಉಮಾಪತಿ ಬಗ್ಗೆ ನಿನಗೆ ಗೊತ್ತಿರುತ್ತೆ ಬೇರೆ ಪ್ರೊಡ್ಯೂಸರ್ ಬಗ್ಗೆ ನಾನು ಮಾತನಾಡಬಾರದು.

ಅನಾಮಧೇಯ: ಹು

ಸಂದೇಶ್ ಸ್ವಾಮಿ: ಆಮೇಲೆ ನೀನು ಬೇಗ ಸಿಗ್ತಿದಿಯಾ ಎನ್‌ಕ್ವೈರಿ ಆದ್ರೆ ನನಗೆ ಪೊಲೀಸ್ ರಿಪೋರ್ಟ್ ಬಂದಿರೋದೆ ಬೇರೆ ಇದೆ.

ಅನಾಮಧೇಯ: ಹು

ಸಂದೇಶ್ ಸ್ವಾಮಿ: ಅವ್ರು ಪೊಲೀಸ್‌ವ್ರು ಏನ್ ಹೇಳಿದ್ರು ಅಂದ್ರೆ ಕರೆಕ್ಟ್‌ ನೋಡಿ ಸರ್ ಸೆಲೆಬ್ರಿಟೀಸ್ ನಾವೇನು ಮಾಡೋಕೆ ಆಗಲ್ಲ. ಎಲ್ಲಾ ತೆಗಿತಿವಿ ನಿಮ್ ಫ್ರೆಂಡೂ ಬರಬೇಕಾಗುತ್ತೆ ಸರ್ ಅಂತಾ ಅಂದ್ರು.

ಅನಾಮಧೇಯ: ಹು

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ ಎಲ್ಲಿವರೆಗೆ ಬಂತು..?

ಸಂದೇಶ್ ಸ್ವಾಮಿ: ನಾವೇನ್ ಹೇಳೋಕಾಗುತ್ತೆ ಅದಕ್ಕೆ. ಅದಕ್ಕೆ ಹೇಳ್ದೇ ಆದ್ರೆ ನೀನು ಸೇರ್ಕೋತಿಯಾ ನೀನು ಇನ್ವಾಲ್ ಆಗ್ತೀಯ. ಮುಂದುವರಿಸಿಕೋ ನನಗೇನು. ಬಾ ನೀನು ತೋಟಕ್ಕೆ ಬಾ ತೋಟಕ್ಕೆ ಅಂದ. ದಯವಿಟ್ಟು ಬಿಟ್ಬಿಡು. ನಾವು ಸೀನು ಇಲ್ಲ ನಾವ್ ಬರೋದು ಇಲ್ಲ. ಅಯ್ಯೋ ಅದ್ಕೆ ನಾನು ಎಷ್ಟು ಆರಾಮಾಗಿ ಇದಿನಿ ರಿಲ್ಯಾಕ್ಸ್ ಆಗಿ. ಆಫ್ಟರ್ ಲಿವಿಂಗ್ ಇನ್. ಅವ್ನು ಫೋನ್‌ ಮಾಡಿದ್ದ ಅಂದ ತಕ್ಷಣ ಡ್ಯಾಡಿ ಕೆಂಡಾಮಡಲ ಆಗಿಬಿಟ್ರು. ಏಯ್‌ ಬಂದುಗಿಂದ್ ಬಿಟ್ಟೋರು ಮತ್ತೆ ತಿರುಗ. ದಯವಿಟ್ಟು ಬೇಡಪ್ಪ. ಅದು ಅವನಿಗೆ ಗಿಲ್ಟಿ ಇರಲಿ. ತಪ್ಪು ಮಾಡಿರೋದು ಅವನಿಗೆ ಗಿಲ್ಟಿ ಇರಲಿ. ಮತ್ತೆ ನೀನು ಏನಾದ್ರು ಕರೆದುಕೊಂಡ್ರೆ ಅದು ನಾನು ಶಾಸಕರಾಗಿ ಬೆಲೆ ಇರಲ್ಲ. ಗಾಂಧಿನಗರದಲ್ಲೂ ಬೆಲೆ ಇರಲ್ಲ. ಮೊನ್ನೆ ಮೊನ್ನೆ ಫೋನ್ ಮಾಡಿ ಹೇಳಿದ್ನಲ್ಲ. ಫೋನ್ ಮಾಡಿ ಹೇಳಿ. ಎತ್ತಿಲ್ಲ ಡಿಸಿಪಿ ಹೋಗಿದಿನಿ ಅಂತಾ ಪ್ರೂಫ್ ಬೇಡ ನೀನೆ ಸಿಗಾಕೋತ್ತೀಯ ಅಂತಾನೂ ಹೇಳಿದೆ.

ಅನಾಮಧೇಯ: ಹು

ಸಂದೇಶ್ ಸ್ವಾಮಿ: ಪೊಲೀಸ್‌ನವರು ನೀಟಾಗಿ ಏನು ಏನಕ್ಕೆ ಆಯ್ತು. ಇದು ಏನಕ್ಕೆ ಆಯ್ತು. ಅದು ಏನಕ್ಕೆ ಆಯ್ತು ಅಂತಾರೆ. ಬೇರೆ ಹೋಟೆಲ್‌ನಲ್ಲಿ ಇರು ಅದು ಪ್ರೆಸ್ ಮಾಡಿದ್ನಲ್ಲ.

ಅನಾಮಧೇಯ: ಹು

ಸಂದೇಶ್ ಸ್ವಾಮಿ: ಎಷ್ಟ್ ಜನ ಗೊತ್ತಾ. ಯಾಕ್ ನಿಮ್ ಹೋಟೆಲ್‌ನಲ್ಲಿ ಮಾಡಿಲ್ಲ ಅಂತಾ. ಟಿವಿಯವ್ರೆಲ್ಲಾ. ನಿಮ್ಮಲ್ಲಿ ಏನೋ ಆಗಿದೆಯಂತೆ ಏನು ವಿಷ್ಯ ಅಂತಾ ನಾನು ಎತ್ತೋಕೆ ಹೋಗಿಲ್ಲ ಅಷ್ಟೇ..

ಸದ್ಯ ಆಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿಖರ ತನಿಖೆಯ ನಂತರವಷ್ಟೇ ಈ ಆಡಿಯೋದ ಸತ್ಯಾಸತ್ಯತೆ ಗೊತ್ತಾಗಬೇಕಿದೆ.

The post ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..? appeared first on News First Kannada.

Source: newsfirstlive.com

Source link