ಮೈಸೂರು: ನಟ ದರ್ಶನ್ ವಿರುದ್ಧ ಆರೋಪಗಳನ್ನ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ದಲಿತ ವ್ಯಕ್ತಿ ಗಂಗಾಧರ್ ಎಂಬುವರ ವಿರುದ್ಧ ಹಲ್ಲೆ ನಡೆಸಿದ್ದರು ಎಂದಿದ್ದರು. ಈ ಹಿನ್ನೆಲೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಗಂಗಾಧರ್​..  ನಾನು ದಲಿತ ಅಲ್ಲ.. ನಮ್ಮದು ನಾಯರ್​.. ಬ್ರಾಹ್ಮಣ ಜಾತಿಗೆ ಸೇರಿದ್ದು.. ಅವತ್ತು ದರ್ಶನ್ ಸ್ವಲ್ಪ ರ್ಯಾಷ್ ಆಗಿ ಮಾತಾಡಿದ್ದು ಬಿಟ್ಟರೆ ಹಲ್ಲೆ ಮಾಡಿಲ್ಲ ಎಂದರು.. ಸರ್ವೀಸ್ ಸ್ವಲ್ಪ ಡಿಲೇ ಆಗಿದ್ದಕ್ಕೆ ಹಾಗೆ ಱಷ್ ಆಗಿ ಮಾತಾಡಿದ್ರು.. ಅವತ್ತು ಯಾರೂ ಪೊರಕೆ ತಂದಿರಲಿಲ್ಲ.. ನಾನು ಬ್ಯಾಚುಲರ್.. ನನಗೆ ಮದುವೆಯೇ ಆಗಿಲ್ಲ ಎಂದಿದ್ದಾರೆ.

ದರ್ಶನ್ ತುಂಬಾ ಕೋಪ ಮಾಡಿಕೊಂಡಿದ್ದರು..

ಇನ್ನು ವೇಟರ್ ಒಬ್ಬರು ಮಾತನಾಡಿ.. ಅವತ್ತು ಸ್ವಲ್ಪ ಸರ್ವೀಸ್ ಲೇಟ್ ಆಯ್ತು.. ಅದರಿಂದ ದರ್ಶನ್ ಸ್ವಲ್ಪ ಬೇಜಾರು ಮಾಡಿಕೊಂಡರು. ಮ್ಯಾನೇಜರ್ ಎಲ್ಲಿದ್ದಾರೆ ಎಂದು ಕೇಳಿದ್ರು. ಸರಿ ಸರ್ ಕರೀತೇನೆ ಎಂದು ಕರೆದೆ. ದರ್ಶನ್ ತುಂಬಾ ಕೋಪ ಮಾಡಿಕೊಂಡಿದ್ದರು.. ಮ್ಯಾನೇಜರ್ ಜೊತೆ ಕೂಗಾಡುತ್ತಾ ಮಾತನಾಡಿದ್ರು.. ಆಮೇಲೆ ಏನಾಯ್ತು ನನಗೆ ಗೊತ್ತಿಲ್ಲ.. ತುಂಬಾ ಕೋಪ ಮಾಡಿಕೊಂಡು ಹೊಡೆಯೋಕೆ ಬರುವಂತಿದ್ರು.. ಸರ್ ಆಗ ನನಗೆ ಸಪೋರ್ಟ್ ಮಾಡಿ ಕಳಿಸಿದರು ಎಂದು ಹೇಳಿದ್ರು.

ಇನ್ನೊಬ್ಬರು ಬಿಲ್ ಬಾಯ್ ಮಾತನಾಡಿ.. ಅವತ್ತು ಸ್ವಲ್ಪ ಸೌಂಡ್ ಆಯ್ತು.. ದರ್ಶನ್ ಸರ್ ಸ್ವಲ್ಪ ಗರಂ ಆಗಿದ್ದಾರೆ ಅಂತ ಎಂಡಿ ಸರ್​ಗೆ ಇನ್ಫಾರ್ಮ್ ಮಾಡಿಸಿದೆ ಎಂದರು.

ದರ್ಶನ್ ಇಂದ್ರಜಿತ್ ಇಬ್ಬರೂ ನನಗೆ ಪರಿಚಯ ಇರುವವರೇ..

ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಮಾತನಾಡಿ.. ದರ್ಶನ್ ಇಂದ್ರಜಿತ್ ಇಬ್ಬರೂ ನನಗೆ ಪರಿಚಯ ಇರುವವರೇ.. ನನ್ನ ಸಿನಿಮಾವನ್ನೂ ಅವರು ಡೈರೆಕ್ಷನ್ ಮಾಡಿದ್ದಾರೆ.. ಹೀಗೆ ಮೆಂಟಲಿ ಡಿಸ್ಟರ್ಬ್ ಮಾಡೋದು ಸರಿಯಲ್ಲ .. ಇಂದ್ರಜಿತ್ ಹೀಗೆ ಮಾಡಿದ್ರಿಂದ ಹೋಟೆಲ್​ ಬ್ಯುಸಿನೆಸ್​ಗೆ ತೊಂದರೆಯಾಗ್ತಿದೆ ಎಂದು ಹೇಳಿದ್ದಾರೆ.

The post ದರ್ಶನ್ ಹಲ್ಲೆ ಆರೋಪ; ಆದ ದಿನ ಹೋಟೆಲ್​ನಲ್ಲಿ ಏನೇನಾಯ್ತು..? ಸಿಬ್ಬಂದಿ ಹೇಳಿದ್ದೇನು..? appeared first on News First Kannada.

Source: newsfirstlive.com

Source link