ದರ್ಶನ್ ಹಲ್ಲೆ ಆರೋಪ; ಗಲಾಟೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಹೋಟೆಲ್ ಸೆಕ್ಯೂರಿಟಿ

ದರ್ಶನ್ ಹಲ್ಲೆ ಆರೋಪ; ಗಲಾಟೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಹೋಟೆಲ್ ಸೆಕ್ಯೂರಿಟಿ

ಮೈಸೂರು: ನಟ ದರ್ಶನ್ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್​ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸ್ಫೋಟಕ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ಹೋಟೆಲ್​ನ ಸೆಕ್ಯೂರಿಟಿ ಗಾರ್ಡ್ ಘಟನೆಗೆ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಗಂಗಾಧರ್ ಎನ್ನುವವರಿಗೆ ದರ್ಶನ್ ಹೊಡೆದಿದ್ದಾರ ಎಂದು ಸೆಕ್ಯುರಿಟಿ ಮಾತನಾಡಿದ್ದಾರೆ.

ಹೋಟೆಲ್​ನ ಸೆಕ್ಯೂರಿಟಿ ಜೊತೆಗೆ ವ್ಯಕ್ತಿಯೊಬ್ಬರು ಮಾತನಾಡಿದ್ದು.. ಇಬ್ರ ನಡುವಿನ ಸಂಭಾಷಣೆಯ ವಿವರ ಇಲ್ಲಿದೆ..

ವ್ಯಕ್ತಿ : ಯಾರು..?

ಸೆಕ್ಯೂರಿಟಿ : ಅವರೇ.. ದರ್ಶನ್​…

ವ್ಯಕ್ತಿ : ಯಾರ ಹತ್ತಿರ..?

ಸೆಕ್ಯೂರಿಟಿ : ಅದೇ, ನಮ್ಮ ಮಾಲೀಕರ ಹತ್ತಿರ

ವ್ಯಕ್ತಿ : ಅದು ಯಾವ ರೀತಿ ಕೊಡಬೇಕು, ಆ ರೀತಿ ಕೊಡಬೇಕು ಅವರು..

ಸೆಕ್ಯೂರಿಟಿ : ದುಡ್ಡು ಕಾಸು ತೊಗೊಂಡು ನಮಗೂ ಸಂಬಂಧ ಇಲ್ಲ. ಅದು..

ಸೆಕ್ಯೂರಿಟಿ : ಕರೆಕ್ಟ್​.. ಕರೆಕ್ಟ್​.. ಹೋಗಿ ರಿಸೆಪ್ಷನ್​​ನಲ್ಲಿ ಹೋಟೆಲ್​​ಗೆ ಬರಲ್ಲ ನಾನು.. ಹಾಗೇ ಹೀಗೆ.. ನಮ್ಮ ಸೆಕ್ಯೂರಿಟಿಗೆ ಬೈದವ್ನೇ.. ** ಅಲ್ಲಿಗೆ ಹೋಗಿ ಎಂಡಿ ಕರೆದುಕೊಂಡು ಬಂದವರೆ.. ಅಷ್ಟರಲ್ಲಿ 50 ಸಾವಿರ ರೂಪಾಯಿ ಅವರು ಮುಖಕ್ಕೆ ಒಗೆದಿದ್ದಾನೆ.. ಫುಲ್ ಇಲ್ಲೆಲ್ಲಾ ಬಿದ್ದಿತ್ತು 50 ಸಾವಿರ ರೂಪಾಯಿ.. ನೋಟಿನ (ಕಂತೆ) ಹೀಗೆ ಎರಚಿದ್ದಾನೆ. ಹೋಟೆಲ್​​ಗೆ ಬರೋದೆ ಬೇಡ, ನಿಮ್ಮ ಓನರ್​ಗೆ ಕೊಟ್ಟು ಬೀಡು.. ** ಮಗನೆ ಅಂತ ಬೈದವ್ನೇ.. ಅವನು ಏನ್ ಮಾಡ್ತಾನೆ.. ಆ ಮೇಲೆ ಆಯ್ಕೊಂಡು ಹೋಗಿ, ಹೌಸ್​ (ಕೀಪಿಂಗ್​​) ಬೇರೆಯವರಿದ್ರು ಪಾಪಾ.. ಅವರಿಗೆ ಹೊಡೆದಿದ್ದಾನೆ.. ತಲೆಗೆ ಹೊಡೆದಿದ್ದಾನೆ.. ಇಲ್ಲೆಯೇ ಎಸೆದುಬಿಟ್ಟು. ಓನರ್​ಗೆ ಕೊಡು ಅಂತ ಸೆಕ್ಯೂರಿಟಿ ಗಾರ್ಡ್​ ಹೊಡೆದುಬಿಟ್ಟ.. ಅವರು ಪಾಪಾ ಏನು ಮಾಡಿಲ್ಲ ಎಲ್ಲರೂ ಸುಮ್ನೆ ಆಗಿಬಿಟ್ರು.. ಆ ಮೇಲೆ ನಮ್ಮ ಎಂಡಿ ಸರ್​ ಅವರನ್ನ ಕರೆದುಕೊಂಡು ಬಂದಿದ್ದಾರೆ.. ಏನು ಹಂಗೆ ಹಿಂಗೆ ಅಂತ ಮಾತಾಡಿ ಬಿಟ್ಟು ಬಂದಿದ್ದಾರೆ.. ಹುಡುಗರು ಎಲ್ಲ ಕೆಲಸ ಬಿಟ್ಟು ಹೋಗ್ತೇನೆ ಎಂದು ಹೇಳಿದ್ರು.. ಆಮೇಲೆ ಸರ್ ಬೈದು ಹೋಟೆಲ್​ಗೆ ಬರೋದು ಬೇಡ ಅವನು ಅಂತ ಹೇಳಿದ್ರು.. ಏನೋ ತಪ್ಪಾಯ್ತು ಹೋಗ್ರಪ್ಪ ಅಂತ ಎಂಡಿ ಹೇಳವ್ರೇ.. ಆ ಮೇಲೆ ದೊಡ್ಡ ಎಂಡಿಗೆ ಗೊತ್ತಾಗಿದೆ. ಅವನು ಹಳೇ ಕೆಲಸಗಾರ.. 15 – 16 ವರ್ಷಗಳಿಂದ ಕೆಲಸ ಮಾಡ್ಕೊಂಡು ಇದ್ದ.. ಹೋಗಿ ನಮ್ ದೊಡ್ಡ ಎಂಡಿಗೆ ಹೇಳ್ಬಿಟ್ಟವರೇ, ನಂಗೆ ಹಿಂಗೆ ಹೊಡೆದಿದ್ದಾರೆ ಅಂತ.. ಹೊಡೆಸ್ಕೊಂಡವನು ಗಂಗಾಧರ್ ಅಂತ.. ಅವನಿಗೆ 50 ವರ್ಷದ ಮೇಲೆ ಆಗಿದೆ. ಅಷ್ಟರಲ್ಲಿ ದೊಡ್ಡ ಎಂಡಿ 9 ಗಂಟೆಗೆ ಬಂದ್ರು. ಅಷ್ಟೇ, ಇನ್ನೂ ಖಾಲಿ ಮಾಡಿರಲಿಲ್ಲ ರೂಂ. ಇವನು ಬರೋದು ಕಾಯ್ತಾ ಇದ್ರೂ ಅನ್ಸುತ್ತೆ. ಏ..! ಬಾರೋಲೋ ಇಲ್ಲ, ನಮ್ಮ ಕೆಲಸಗಾರರ ಮೇಲೆ ಕೈ ಮಾಡ್ತೀಯಾ ಅಂತ ಬೈದ್ರು, ಆ ಮೇಲೆ ನಮ್ ಹೋಟೆಲ್​ಗೆ ಬರೋದೇ ಬೇಡ ಅಂತ ಬೈದು ಕಳಿಸಿದ್ದಾರೆ.

The post ದರ್ಶನ್ ಹಲ್ಲೆ ಆರೋಪ; ಗಲಾಟೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಹೋಟೆಲ್ ಸೆಕ್ಯೂರಿಟಿ appeared first on News First Kannada.

Source: newsfirstlive.com

Source link