ಲಾಕ್​ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಪ್ರಾಣಿಗಳನ್ನ ದತ್ತು ಪಡೆಯುವಂತೆ ನಟ ಚಾಲೆಂಜಿಂಗ್ ಸ್ಟಾರ್​​ ದರ್ಶನ್ ಮನವಿ ಮಾಡಿದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಸಹೋದ್ಯೋಗಿಗಳು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹವೊಂದನ್ನ ದತ್ತು ಪಡೆದಿದ್ದಾರೆ. ವಿಶೇಷ ಅಂದ್ರೆ ಈ ಸಿಂಹದ ಹೆಸರು ‘ದರ್ಶನ್’.

ನಿರ್ಮಾಪಕರಾದ ಶೈಲಜಾ ನಾಗ್, ಸಂಗೀತ ನಿರ್ದೇಶಕರಾದ ವಿ .ಹರಿಕೃಷ್ಣ ಹಾಗೂ D Beats ತಂಡ ದರ್ಶನ್ ಎಂಬ​ ಸಿಂಹವನ್ನ ದತ್ತು ಸ್ವೀಕರಿಸಿರುವುದಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಚಾಲೆಂಜಿಂಗ್ ಸ್ಟಾರ್​ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಲಾಕ್​ಡೌನ್​ ಸಮಯವನ್ನ ಸದ್ಯ ಮೈಸೂರಿನಲ್ಲಿ ಕಳೆಯುತ್ತಿರುವ ದರ್ಶನ್​, ನಿನ್ನೆ ಮೈಸೂರು ಮೃಗಾಲಯದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನ ಆಚರಿಸಿದ್ರು. ಇದೇ ವೇಳೆ ಲಾಕ್​ಡೌನ್​ ಬಗ್ಗೆ ಮಾತನಾಡಿರುವ ದರ್ಶನ್​, ಪ್ರಾಣಿಗಳನ್ನ ಈ ಸಮಯದಲ್ಲಿ ದತ್ತು ಪಡೆಯುವಂತೆ ಜನರಲ್ಲಿ ಮನವಿ ಮಾಡಿದ್ರು. ಕೊರೊನದಿಂದ‌ ಕಷ್ಟದಲ್ಲಿರುವ ಝೂಗಳ ನೆರವಿಗೆ ಬರುವಂತೆ ನಟ ದರ್ಶನ್​ ಕೇಳಿಕೊಂಡರು.

ಇದನ್ನೂ ಓದಿ: ಮೃಗಾಲಯದಲ್ಲಿ ಗಿಡ ನೆಟ್ಟು, ಪ್ರಾಣಿಗಳನ್ನ ದತ್ತು ಪಡೆಯುವಂತೆ ಕೈ ಮುಗಿದ ದರ್ಶನ್ 

 

The post ‘ದರ್ಶನ್’ ಹೆಸರಿನ ಸಿಂಹ ದತ್ತು ಪಡೆದವ್ರಿಗೆ ಥ್ಯಾಂಕ್ಸ್​ ಹೇಳಿದ ಚಾಲೆಂಜಿಂಗ್ ಸ್ಟಾರ್ appeared first on News First Kannada.

Source: newsfirstlive.com

Source link