ದರ್ಶನ್ ಹೆಸ್ರಲ್ಲಿ ವಂಚನೆಗೆ ಯತ್ನ ಕೇಸ್: ಉಮಾಪತಿ ಯಾರೆಂದು ಗೊತ್ತಿಲ್ಲ’ ಎಂದ ಸುಮಲತಾ

ದರ್ಶನ್ ಹೆಸ್ರಲ್ಲಿ ವಂಚನೆಗೆ ಯತ್ನ ಕೇಸ್: ಉಮಾಪತಿ ಯಾರೆಂದು ಗೊತ್ತಿಲ್ಲ’ ಎಂದ ಸುಮಲತಾ

ಬೆಂಗಳೂರು: ನಿರ್ಮಾಪಕ ಉಮಾಪತಿ ಯಾರು ಎಂದೇ ನನಗೆ ಗೊತ್ತಿಲ್ಲ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ದರ್ಶನ್ ಹೆಸರಲ್ಲಿ 25 ಕೋಟಿ ಶ್ಯೂರಿಟಿ ವಂಚನೆಗೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು.. ಒಂದು ವಾರದ ಹಿಂದೆ ಈ ಮೋಸದ ಬಗ್ಗೆ ದರ್ಶನ್ ತಿಳಿಸಿದ್ರು. ಆದರೆ ಹೆಚ್ಚಿನದಾಗಿ ಏನು ಕೂಡ ಚರ್ಚಿಸಿಲ್ಲ. ನ್ಯಾಯದ ಪರವಾಗಿ ನನ್ನ ಬೆಂಬಲವಿದೆ. ಅವರಿಗೆ ವಂಚನೆಯಾಗಿದೆ ಅಂದ್ಮೇಲೆ ನ್ಯಾಯದ ಪರ ಇರಲೇಬೇಕು. ಉಮಾಪತಿ ಯಾರೋ ಅನ್ನೋದೇ ನನಗೆ ಗೊತ್ತಿಲ್ಲ. ಆದ್ರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ ಎಂದರು.

ಮಂಡ್ಯದ ಅಕ್ರಮ ಗಣಿಗಾರಿಕೆ ಪ್ರಕರಣ ದರ್ಶನ್​ಗೆ ಗೊತ್ತಿದೆಯಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ.. ನಮ್ಮ ಪ್ರಕರಣದ ವಿಚಾರದ ಬಗ್ಗೆಯೂ ಯಾವುದೇ ಚರ್ಚೆಯಾಗಿಲ್ಲ. ಸದ್ಯ ಅವರ ಬ್ಯುಸಿಯಲ್ಲಿ ಅವರಿದ್ದಾರೆ. ಈ ಘಟನೆ ನಡೆಯೋಕು ಮುಂಚೆ ಭೇಟಿಯಾಗಿದ್ದಷ್ಟೇ. ನಮ್ಮ ಪ್ರಕರಣದ ಬಗ್ಗೆ ದರ್ಶನ್ ಜೊತೆ ಮಾತಡಿಲ್ಲ ಎಂದರು.

The post ದರ್ಶನ್ ಹೆಸ್ರಲ್ಲಿ ವಂಚನೆಗೆ ಯತ್ನ ಕೇಸ್: ಉಮಾಪತಿ ಯಾರೆಂದು ಗೊತ್ತಿಲ್ಲ’ ಎಂದ ಸುಮಲತಾ appeared first on News First Kannada.

Source: newsfirstlive.com

Source link