ಹೇಳಿ-ಕೇಳಿ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಪ್ರಾಣಿಗಳಂದ್ರೆ ಪ್ರಾಣ. ಒಂದಷ್ಟು ಮೃಗಾಲಯದ ಪ್ರಾಣಿಗಳನ್ನ ದತ್ತು ಪಡೆದಿರುವ ದರ್ಶನ್​, ಕುದುರೆಗಳನ್ನೂ ಸಾಕಿದ್ದಾರೆ. ಕೆಲ ದಿನಗಳ ಹಿಂದೆ ನಟ​ ದರ್ಶನ್​ ಮೃಗಾಲಯದ ಪ್ರಾಣಿಗಳ ಬಗ್ಗೆ ಒಂದು ಮಹತ್ವದ ಸೂಚನೆಯನ್ನ ನೀಡಿ ಅಭಿಮಾನಿಗಳಲ್ಲಿ ಒಂದು ಮನವಿಯನ್ನೂ ಮಾಡಿದ್ದರು. ಲಾಕ್​ಡೌನ್​ನಿಂದ ಕರ್ನಾಟಕದ 9 ಝೂಗಳಲ್ಲೂ ಪ್ರಾಣಿಗಳಿಗೆ ಸಮಸ್ಯೆ ಉಂಟಾಗಿದ್ದು, ಪ್ರಾಣಿಗಳನ್ನ ದತ್ತು ಪಡೆಯುವ ಮೂಲಕ ನೆರವಾಗಿ ಅಂತ ದರ್ಶನ್​ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಇದೀಗ ಎರಡು ಸಾವಿರಕ್ಕೂ ಅಧಿಕ ಜನ ಮೃಗಾಲಯದ ಪ್ರಾಣಿಗಳನ್ನ ದತ್ತು ಸ್ವೀಕಾರಿಸಿದ್ದಾರೆ.

ಇದನ್ನೂ ಓದಿ: ಮೃಗಾಲಯದಲ್ಲಿ ಗಿಡ ನೆಟ್ಟು, ಪ್ರಾಣಿಗಳನ್ನ ದತ್ತು ಪಡೆಯುವಂತೆ ಕೈ ಮುಗಿದ ದರ್ಶನ್

ಹೌದು.. ಬರೋಬ್ಬರಿ ಎರಡು ಸಾವಿರಕ್ಕೂ ಅಧಿಕ ಜನ ಕೇವಲ ನಾಲ್ಕು ದಿನಗಳಲ್ಲೇ ದರ್ಶನ್​ ಕರೆಗೆ ಓಗೊಟ್ಟು ದತ್ತು ಸ್ವೀಕರಿಸಿದ್ದಾರೆ. ರಾಜ್ಯದ ಝೂಗಳಿಗೆ ನಾಲ್ಕು ದಿನಗಳಲ್ಲಿ ಬರೋಬ್ಬರಿ 70 ಲಕ್ಷ 33 ಸಾವಿರ ರೂಪಾಯಿ ಹರಿದು ಬಂದಿದೆ.
ಜೂನ್ 5ರಂದು 8.65 ಲಕ್ಷ
ಜೂನ್ 6 – 22.83 ಲಕ್ಷ
ಜೂನ್ 7 – 19.86 ಲಕ್ಷ
ಜೂನ್ 8 – 18.98 ಲಕ್ಷ

ಹೀಗೆ ನಾಲ್ಕು ದಿನಗಳಲ್ಲಿ ಒಟ್ಟು 70.33 ಲಕ್ಷ ರೂಪಾಯಿ ರಾಜ್ಯದ 9 ಝೂಗಳಿಗೆ ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ನಟ ದರ್ಶನ್​ಗೆ ಧನ್ಯವಾದ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ ಅವರು ರಾಜ್ಯದ ಮೃಗಾಲಯಗಳ ಹಾಗೂ ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಆಸಕ್ತಿಯನ್ನ ಹೊಂದಿದ್ದಾರೆ. ಅವರ ಸ್ವಪ್ರಯತ್ನದಿಂದ ಅವರು ಕೊಟ್ಟ ಕರೆ.. ಪ್ರಾಣಿ ಪ್ರಿಯರೆಲ್ಲಾ ಮೃಗಾಲಯದ ಪ್ರಾಣಿಗಳನ್ನ ದತ್ತು ತೆಗೆದುಕೊಳ್ಳಬೇಕು ಅಂತ ಕೊಟ್ಟ ಕರೆಗೆ, ಕರ್ನಾಟಕದಲ್ಲಿ ಈಗ ಸುಮಾರು 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಕೊರೊನಾದ ಈ ಕಷ್ಟಕಾಲದಲ್ಲಿ ಮನುಷ್ಯರನ್ನ ರಕ್ಷಣೆ ಮಾಡುವ ಜವಾಬ್ದಾರಿಯನ್ನ ತೆಗೆದುಕೊಂಡ ಸರ್ಕಾರಕ್ಕೆ, ಅದೇ ರೀತಿ ಪ್ರಾಣಿಗಳನ್ನ ರಕ್ಷಿಸಬೇಕು ಅಂತ ಹೆಚ್ಚು ಕಾಳಜಿ ವಹಿಸುತ್ತಿರುವ ನನ್ನ ಆತ್ಮೀಯರಾದ ದರ್ಶನ್​ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಹಾಗೆಯೇ ಇದಕ್ಕೆ ಯಾರು ಸಹಾಯ ಮಾಡೋದಕ್ಕೆ ಮುಂದೆ ಬಂದಿದ್ದೀರೋ, ಅವರೆಲ್ಲರಿಗೂ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ನಮ್ಮ ಪ್ರಾಣಿಗಳ ರಕ್ಷಣೆಗೆ ನಿಮ್ಮ ಸಹಾಯ, ನಿಮ್ಮ ಧನ ಸಹಾಯದ ಅವಶ್ಯಕತೆ ಇದೆ. ಸಾಕಷ್ಟು ಧನ ಸಹಾಯ ಮಾಡಿ ಅಂತ ವಿನಂತಿ ಮಾಡಿಕೊಳ್ಳುತ್ತೇನೆ.

ಅರವಿಂದ ಲಿಂಬಾವಳಿ- ಅರಣ್ಯ ಸಚಿವ

ಎಲ್ಲವೂ ಸರಿಯಿದ್ದಾಗ ಮೃಗಾಲಯಗಳಿಗೆ ಜನ ಬಂದು ಹೋಗ್ತಿದ್ದು, ಮೃಗಾಲಯಗಳಿಗೆ ಹಣ ಸಂಗ್ರಹವಾಗ್ತಿತ್ತು. ಇದೀಗ ಕೊರೊನಾ ಬಂದು, ಲಾಕ್​ಡೌನ್​ ಆಗಿ ಯಾವುದೇ ಪ್ರಾಣಿಗಳಿಗೂ ಸರಿಯಾದ ಊಟದ ವ್ಯವಸ್ಥೆಯೂ ಆಗ್ತಿಲ್ಲ. ಈ ಬಗ್ಗೆ ಮಾತನಾಡಿದ್ದ ದರ್ಶನ್​, ಸಾಧ್ಯವಾದಲ್ಲಿ ಪ್ರಾಣಿಗಳನ್ನ ದತ್ತು ಪಡೆಯಲು ಮನವಿ ಮಾಡಿದ್ದರು.

ಇದನ್ನೂ ಓದಿ: ದರ್ಶನ್ ಮನವಿಗೆ ತಲೆ ಬಾಗಿದ ಸಾರ್ವಜನಿಕರು; ಮೃಗಾಲಯಗಳಿಗೆ ಹರಿದುಬಂತು ದೇಣಿಗೆ

The post ದರ್ಶನ್ ಹೇಳಿದ್ದೇ ತಡ ಫಿದಾ ಆದ್ರು ಫ್ಯಾನ್ಸ್; 2 ಸಾವಿರಕ್ಕೂ ಅಧಿಕ ಜನರಿಂದ ಪ್ರಾಣಿಗಳ ದತ್ತು appeared first on News First Kannada.

Source: newsfirstlive.com

Source link