ನಿನ್ನೆ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್​​ನಲ್ಲಿ ತಮ್ಮ ವಿರುದ್ಧ ಕೇಳಿಬಂದ ಹಲವು ಆರೋಪಗಳಿಗೆ ವಿವರಣೆ ನೀಡುವ ಪ್ರಯತ್ನ ಮಾಡಿದರು. ಈ ವೇಳೆ ನಿರ್ಮಾಪಕ ಉಮಾಪತಿ ಅವರ ವಿಚಾರವನ್ನ ಪ್ರಸ್ತಾಪಿಸಿ ಅವರನ್ನ ನನಗೆ ಪರಿಚಯ ಮಾಡಿಕೊಟ್ಟಿದ್ದು ನಿರ್ದೇಶಕ ಪ್ರೇಮ್ ಎಂದು ಹೇಳಿದ್ರು.. ಅಲ್ಲದೇ ನಾನು 70 ದಿನಗಳ ಮೇಲೆ ಯಾರಿಗೂ ಶೂಟಿಂಗ್ ಡೇಟ್ಸ್ ಕೊಡಲ್ಲ ಎಂದು ಪ್ರೆಸ್​ಮೀಟ್​ನಲ್ಲಿ ಹೇಳಿದ್ದೆ.. ಪ್ರೇಮ್ ಸಿನಿಮಾಗೆ 100 ದಿನಗಳ ಕಾಲ ಕೆಲಸ ಮಾಡಿದ್ದೆ ಎಂದು ಚರ್ಚೆಯಾಯ್ತು ಎಂದು ಹೇಳಿದರು. ಈ ವೇಳೆ ಪ್ರೇಮ್ ಏನು ದೊಡ್ಡ ಪುಡಾಂಗಾ..? ಎಂದಿದ್ದರು.

ದರ್ಶನ್ ಉಲ್ಲೇಖಿಸಿದ ಪುಡಾಂಗು ಪದದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ ಎನ್ನುವುದು ಸುಳ್ಳಲ್ಲ. ಹಾಗೆ ನೋಡಿದ್ರೆ ಕನ್ನಡದಲ್ಲಿ ಪುಡಾಂಗ್ ಪದ ಅಧಿಕೃತವಾಗಿ ಬಳಕೆಯಲ್ಲಿಲ್ಲ.. ಯುವಕರು ಒಬ್ಬರನ್ನೊಬ್ಬರು ಕಾಲೆಳೆಯುವ ಪದವಾಗಿ ಈ ಪದ ಹುಟ್ಟಿಕೊಂಡಿರಬಹುದು.. ನೀನೇನು ದೊಡ್ಡ ಪುಡಾಂಗಾ..? ಎಂದು ಯುವಕರು ಬಳಸುವುದು ಚಾಲ್ತಿಯಲ್ಲಿದೆ.. ಈ ಪದದ ಅರ್ಥ ನೀನೇನು ದೊಡ್ಡ ಗಂಡಸಾ..? ಸಾಧಕನಾ..? ಪವರ್ ಫುಲ್ ವ್ಯಕ್ತಿಯಾ ಎಂಬ ಅರ್ಥವನ್ನ ಕಲ್ಪಿಸುತ್ತದೆ.

ಕೆಲವರು ಈ ಪದ ತಮಿಳಿನಿಂದ ಕನ್ನಡಕ್ಕೆ ಬಂದ ಪದವಿರಬಹುದು ಎಂದು ಹೇಳುವುದೂ ಇದೆ. ತಮಿಳಿನಿಂದ ಮಚ್ಚಾ ಎಂಬ ಪದ ಕನ್ನಡಕ್ಕೆ ಹೊಂದಿಕೊಂತೆ ಪುಡಾಂಗ್ ಪದವೂ ಸಹ ಬಳಕೆಯಾಗಿರಬಹುದು ಎಂದು ಹೇಳಲಾಗುತ್ತದೆ. ಪುಡಾಂಗು ಪದದ ರೀತಿಯೇ ಹಲವು ಪದಗಳನ್ನು ಯುವ ಸಮುದಾಯ ಆಗಾಗ್ಗೆ ಬಳಕೆ ಮಾಡುವುದನ್ನು ಕಾಣಬಹುದಾಗಿದೆ. ಚೀನಾದ ಶಾಂಘೈನಲ್ಲಿ pudong ಹೆಸರಿನ ಒಂದು ಜಿಲ್ಲೆಯೂ ಇದ್ದು ಇದು 50 ಲಕ್ಷ ಜನಸಂಖ್ಯೆಯನ್ನ ಹೊಂದಿದೆ.

The post ದರ್ಶನ್ ಹೇಳಿದ ‘ಪುಡಾಂಗು’ ಪದದ ಅರ್ಥವೇನು ಗೊತ್ತೆ..? appeared first on News First Kannada.

Source: newsfirstlive.com

Source link