
ಜಮೀರ್ ಅಹ್ಮದ್ ಖಾನ್
ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಜಮೀರ್ ಅಹ್ಮದ್, ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು. ನಾನು, ನೀವು, ಎಲ್ಲರೂ ಮನುಷ್ಯ ಜಾತಿ. ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ ಎಂದಿದ್ದಾರೆ.
ಬೆಂಗಳೂರು: ಭ್ರಾತೃತ್ವದ ಸಂದೇಶ ಸಾರಲು ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ದಲಿತ ಸ್ವಾಮೀಜಿಯೊಬ್ಬರಿಗೆ ಸಿಹಿ ತಿನ್ನಿಸಿ ಆಮೇಲೆ ಅದನ್ನು ಉಗುಳುವಂತೆ ಹೇಳಿ ಆ ಎಂಜಲನ್ನು ತಿಂದಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಭಾನುವಾರ ಅಂಬೇಡ್ಕರ್ ಜಯಂತಿ (Ambedkar Jayanti) ಹಾಗೂ ಈದ್ ಮಿಲನ್ ಕಾರ್ಯಕ್ರಮದಲ್ಲಿ ಜಮೀರ್ ಈ ರೀತಿ ಎಂಜಲು ತಿಂದಿದ್ದಾರೆ. ಸಮಾಜಘಾತುಕ ಅಂಶಗಳು ಸಮುದಾಯಗಳ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಜಮೀರ್ ಅಹ್ಮದ್ ಈ ಸಮಾರಂಭದಲ್ಲಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಕೈಯಲ್ಲಿ ಸಿಹಿ ತೆಗೆದುಕೊಂಡು ಪಕ್ಕದಲ್ಲಿದ್ದ ದಲಿತ ಧಾರ್ಮಿಕ ಮುಖಂಡರಿಗೆ ತಿನ್ನಿಸಿದರು. ಆಮೇಲೆ ಶಾಸಕರು ಅವರ ಕೈ ಹಿಡಿದು ಸಿಹಿ ಉಗುಳಿ ನನಗೆ ತಿನ್ನಿಸಿ ಎಂದಿದ್ದಾರೆ. ಆ ಎಂಜಲನ್ನು ಜಮೀರ್ ತಿನ್ನುತ್ತಿದ್ದಂತೆ ಸಭಿಕರು ಚಪ್ಪಾಳೆ ತಟ್ಟುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಜಮೀರ್ ಅಹ್ಮದ್, ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು. ನಾನು, ನೀವು, ಎಲ್ಲರೂ ಮನುಷ್ಯ ಜಾತಿ. ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ ಎಂದಿದ್ದಾರೆ.
ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು.
ನಾನು, ನೀವು, ಎಲ್ಲರೂ ಮನುಷ್ಯ ಜಾತಿ.
ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ.#ಸಾಮರಸ್ಯ #ಮಾನವೀಯತೆ pic.twitter.com/3qVCvA6XuO— B Z Zameer Ahmed Khan (@BZZameerAhmedK) May 22, 2022
ನಾಲ್ಕು ಬಾರಿ ಶಾಸಕರಾಗಿರುವ ಖಾನ್ ಅವರು ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.