ಬೆಂಗಳೂರು: ರಾಜ್ಯ ಮತ್ತೊಂದು ಮಿನಿವಾರ್ಗೆ ಸಜ್ಜಾಗ್ತಿದೆ. ಬಿಟ್ ಕಾಯಿನ್ ಬಿರುಗಾಳಿ ನಡುವೆಯೂ ಮೇಲ್ಮನೆಯ 25 ಸ್ಥಾನಗಳಿಗೆ ಚುನಾವಣೆ ಡೇಟ್ ಫಿಕ್ಸ್ ಆಗಿದೆ. ಪರಿಷತ್ ಮೇಲಾಟದಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ಬಿಜೆಪಿ-ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಆದ್ರೆ, ದಳಪತಿಗಳು ಮಾತ್ರ ಅಷ್ಟ ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಆಟ ಅಂತಾ ಚಿಕ್ಕ ಟಾರ್ಗೆಟ್ನ ಬೆನ್ನುಹತ್ತಿದೆ.
ಪರಿಷತ್ ಚುನಾವಣೆಗೆ ಜೆಡಿಎಸ್ ಸ್ಮಾಲ್ ಟಾರ್ಗೆಟ್
25ರಲ್ಲಿ 8 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಗೆ ‘ದಳ’ ನಿರ್ಧಾರ
ವಿಧಾನಪರಿಷತ್ನ 25 ಸ್ಥಾನಗಳ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರ್ತಿದೆ. ಎಲೆಕ್ಷನ್ ಡೇಟ್ ಫಿಕ್ಸ್ ಆಗ್ತಿದ್ದಂತೆ ರಾಜಕೀಯ ಚಟುವಟಿಕೆ ಜೋರಾಗಿಯೇ ನಡೀತಿದೆ. ಇವತ್ತಿನಿಂದ ಪರಿಷತ್ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ 25 ಸ್ಥಾನಗಳ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದ್ರೆ, ಇದಕ್ಕೆ ತದ್ವಿರುದ್ಧವಾಗಿ ದಳಪತಿಗಳು ಸ್ಮಾಲ್ ಟಾರ್ಗೆಟ್ನ ಗುರಿಯಾಗಿಸಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಅರ್ಥಾತ್ 25ರಲ್ಲಿ 8 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲು ದಳಪತಿಗಳು ನಿರ್ಧರಿಸಿದ್ದಾರೆ.
ಸ್ಮಾಲ್ ಟಾರ್ಗೆಟ್.. ಬಿಗ್ ಎಫೆಕ್ಟ್!
- 25 ಪರಿಷತ್ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ
- ಇವತ್ತಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭ
- ವಿಧಾನ ಪರಿಷತ್ ಚುನಾವಣೆಗೆ ದಳಪತಿಗಳ ಸಿದ್ಧತೆ
- 25ರ ಉಸಾಬರಿ ಬೇಡ, 8 ಕ್ಷೇತ್ರ ಮೇಲೆ ಹೆಚ್ಚಿನ ನಿಗಾ
- ಸ್ಮಾಲ್ ಟಾರ್ಗೆಟ್ ರೀಚ್ ಮಾಡಲು ಹೆಚ್ಡಿಕೆ ಪ್ಲಾನ್
ಕಳೆದ ವಿಧಾನಸಭಾ ಮಿನಿವಾರ್ನಲ್ಲಿ ಮುಗ್ಗರಿಸಿರೋ ಜೆಡಿಎಸ್ ಪರಿಷತ್ ಚುನಾವಣೆಯಲ್ಲಿ ಜಾಣ ನಡೆ ಅನುಸರಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಕೇವಲ ಇದಷ್ಟೇ ಅಲ್ಲ. ದಳಪತಿಗಳು ಈ ನಡೆ ಅನುಸರಿಸೋಕೆ ಇನ್ನೂ ಅನೇಕ ಕಾರಣಗಳೂ ಇವೆ.
ದಳಪತಿಗೆ 8ರ ಚಿಂತೆ!
ಕಾರಣ 1 : ಪರಿಷತ್ನ 25 ಕ್ಷೇತ್ರಗಳಿಗೆ ದಳಕ್ಕೆ ಸಿಗದ ಪ್ರಬಲ ಅಭ್ಯರ್ಥಿಗಳು
ಕಾರಣ 2 : ದಳ ಟಿಕೆಟ್ಗೆ ಆಸಕ್ತಿ ತೋರದ ಅನ್ಯ ಪಕ್ಷದ ಬಂಡಾಯಗಾರರು
ಕಾರಣ 3 : ಸಿಂದಗಿ – ಹಾನಗಲ್ ಉಪ ಚುನಾವಣೆ ಠೇವಣಿ ನಷ್ಟದ ಪಾಠ
ಕಾರಣ 4 : 25ಕ್ಕೂ ಅಭ್ಯರ್ಥಿ ಹಾಕಿದ್ರೆ ಪಕ್ಷದ ಪರ ಮತದಾರರ ನಿರುತ್ಸಾಹ
ಕಾರಣ 5 : 25 ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕರು & ಸಂಪನ್ಮೂಲದ ಕೊರತೆ
ಕಾರಣ 6 : ಎಂಟು ಜಿಲ್ಲೆಯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ರೆ ಗೆಲ್ಲುವ ಅವಕಾಶ
ಕಾರಣ 7 : 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ರೆ, ಇತರ ಕ್ಷೇತ್ರ ಕೈತಪ್ಪುವ ಭೀತಿ
ಕಾರಣ 8 : ಸೋಲುವ ಇತರ ಕ್ಷೇತ್ರದ ಮೇಲೆ ಪರಿಶ್ರಮ ಹಾಕುವುದು ವ್ಯರ್ಥ
ಒಟ್ಟಾರೆ, ವಿಧಾನಸಭೆ ಉಪಕದನದಲ್ಲಿ ಪಾಠ ಕಲಿತಿರೋ ಹೆಚ್.ಡಿ. ಕುಮಾರಸ್ವಾಮಿ ಪರಿಷತ್ ಚುನಾವಣೆಯಲ್ಲಿ ಜಾಣನಡೆಯನ್ನ ತುಳಿದಿದ್ದಾರೆ. ಈ ಮೂಲಕ 25ರ ಉಸಾಬರಿ ಬೇಡ, 8 ಕ್ಷೇತ್ರ ಮೇಲೆ ಹೆಚ್ಚಿನ ನಿಗಾವಹಿಸೋಣ, ಅದರಲ್ಲೇ ಗೆಲವು ಸಾಧಿಸೋಣ ಅಂತಾ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಆದ್ರೆ, 8 ಕ್ಷೇತ್ರಗಳಲ್ಲಾದ್ರೂ ದಳಪತಿಗಳ ತಂತ್ರ ವರ್ಕೌಟ್ ಆಗುತ್ತಾ? ಇಲ್ವಾ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.
ವಿಶೇಷ ವರದಿ: ಶಿವಪ್ರಸಾದ್, ಪೊಲಿಟಿಕಲ್ ಬ್ಯುರೋ