ತಮಿಳುನಾಡಿ: ಮಾಸ್ಟರ್​ ದಿ ಬ್ಲಾಸ್ಟ್​ರ್​ ಅಂತ ಧಗ ಧಗಿಸೋ ದಳಪತಿ ವಿಜಯ್​ ಅಂದ್ರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ‘ವಾತಿ’ ಬರ್ತಿದ್ದಾರೆ ಅಂದ್ರೆ ಸಾಕು, ಕಾಳರ್​ ಮೇಲೆತ್ತಿ, ಭುಜಗಳನ್ನ ಅಲ್ಲಾಡಿಸ್ತಾ ಸ್ಟೇಪ್​ ಹಾಕೋದ್ರಲ್ಲಿ ಇದ್ದ ಮಜಾ ಅವರ ಅಭಿಮಾನಿಗಳಿಗಷ್ಟೇ ಗೊತ್ತು. ಅಷ್ಟರ ಮಟ್ಟಿಗೆ ಹೈಪ್​ ಕ್ರಿಯೇಟ್​ ಮಾಡಿತ್ತು. ಇದೀಗ, ಮತ್ತೊಂದು ಅವತಾರದಲ್ಲಿ ಬರ್ತಿದ್ದಾರೆ ದಳಪತಿ ವಿಜಯ್​

ದಳಪತಿ ಇದೀಗ ‘ಬೀಸ್ಟ್​’

ಹೌದೂ, ವಿಜಯ್​ರ 65ನೇ ಚಿತ್ರಕ್ಕೆ ‘ಬೀಸ್ಟ್’ ಅಂತ ಹೆಸರಿಡಲಾಗಿದ್ದು, ಇಂದು ಅದರ ಫಸ್ಟ್​ ಲುಕ್​ನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಟೈಟಲ್​ ಹೇಗಿದ್ಯೋ ಅಷ್ಟೇ ರಗಢ್​ ಆಗಿ ವಿಜಯ್​ರ ಲುಕ್​ ಕೂಡ ಇದೆ. ವಿಜಯ್ ಜೀನ್ಸ್​ ಹಾಕಿ, ಕೈನಲ್ಲಿ ಗನ್​ ಹಿಡಿದಿರೋ ಪೋಸ್​  ಸಾಕಷ್ಟು ಗಮನ ಸೆಳೆಯುತ್ತಿದೆ. ವಿಜಯ್​ ಚಿತ್ರಗಳಲ್ಲಿ ಆ್ಯಕ್ಷನ್​ಗಳಿಗೆನು ಕಡಿಮೆ ಇಲ್ಲ. ನಾಳೆ ಅಂದ್ರೆ ಜೂನ್​ 22ಕ್ಕೆ, ವಿಜಯ್​ರ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಿನಿಮಾದ ಫಸ್ಟ್ ಲುಕ್​ ರಿಲೀಸ್​ ಮಾಡಿದ್ದಾರೆ ಬೀಸ್ಟ್​ ಚಿತ್ರತಂಡ. ಈ ಚಿತ್ರದಲ್ಲಿ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ

The post ದಳಪತಿ ಇದೀಗ ‘ಬೀಸ್ಟ್​’. ಫಸ್ಟ್​ ಲುಕ್​ ಪೋಸ್ಟರ್​ಗೆ ಫಿದಾ ಆದ ಅಭಿಮಾನಿಗಳು appeared first on News First Kannada.

Source: newsfirstlive.com

Source link