ದಳಪತಿ ವಿಜಯ್
ದಳಪತಿ ವಿಜಯ್ಗೆ (Thalapathy Vijay) ದೊ ಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್ ಆಗುತ್ತಿದೆ ಎಂದಾದರೆ ಹಬ್ಬದ ವಾತಾವಾರಣ ನಿರ್ಮಾಣ ಆಗುತ್ತದೆ. ಅಭಿಮಾನಿಗಳು ಹಾಲಿನ ಅಭಿಷೇಕ್ ಮಾಡಿ ಸಂಭ್ರಮಿಸುತ್ತಾರೆ. ಇಂಥ ಅಭಿಮಾನಿಗಳಿಗೆ ಗಾಬರಿ ಆಗುವ ವಿಚಾರ ಒಂದು ಎದುರಾಗಿತ್ತು. ವಿಜಯ್ ಮನೆಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಕರೆ ಬಂದಿತ್ತು. ಇದಾದ ಬೆನ್ನಲ್ಲೇ ಪೊಲೀಸರು ಶ್ವಾನ ದಳದೊಂದಿಗೆ ಸಂಪೂರ್ಣ ಮನೆಯನ್ನು ಶೋಧ ಮಾಡಿದ್ದರು. ಈ ವೇಳೆ ಇದೊಂದು ಹುಸಿ ಬಾಂಬ್ ಕರೆ (Hoax Bomb Threat Call) ಎನ್ನುವ ವಿಚಾರ ಗೊತ್ತಾಗಿದೆ.
ಕಳೆದ ವಾರಾಂತ್ಯದಲ್ಲಿ ವಿಜಯ್ ಅವರು ಅಭಿಮಾನಿಗಳ ಜತೆ ಫೋಟೋ ಕ್ಲಿಕ್ ಮಾಡಿಕೊಳ್ಳುವುದರಲ್ಲಿ ಬ್ಯುಸಿ ಇದ್ದರು. ಈ ವೇಳೆ ಪೊಲೀಸರಿಗೆ ದೂರವಾಣಿ ಕರೆ ಒಂದು ಬಂದಿತ್ತು. ಅದರಲ್ಲಿ ಬಾಂಬ್ ದಾಳಿ ನಡೆಯಲಿದೆ ಎನ್ನುವ ಎಚ್ಚರಿಕೆ ಇತ್ತು. ದೂರವಾಣಿ ಕರೆ ಬಂದ ಬೆನ್ನಲ್ಲೆ ಚೆನ್ನೈ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವೂ ಇತ್ತು. ಮನೆ ಹಾಗೂ ಮನೆಯ ಸಮೀಪ ಶೋಧ ಕಾರ್ಯ ನಡೆಸಲಾಯಿತು. ಆದರೆ, ಏನು ದೊರೆತಿಲ್ಲ. ಆನಂತರದಲ್ಲಿ ಇದೊಂದು ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ.
ಹುಸಿ ಕರೆ ಮಾಡಿದವರನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳಿಗೆ ಇದೇ ರೀತಿಯ ಹುಸಿ ಕರೆ ಬಂದಿತ್ತು.
ವಿಜಯ್ 65ನೇ ಚಿತ್ರಕ್ಕೆ ‘ಬೀಸ್ಟ್’ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಇತ್ತೀಚೆಗೆ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಇದನ್ನೂ ಓದಿ: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಭರ್ಜರಿ ಜಯಭೇರಿ ಬಾರಿಸಿದ ದಳಪತಿ ವಿಜಯ್ ಫ್ಯಾನ್ಸ್ ಕ್ಲಬ್
ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದವರಿಗೆ ನಗದು ಬಹುಮಾನ ಘೋಷಿಸಿದ ರಾಜಕಾರಣಿ