ಆಧುನಿಕ ಜಗತ್ತಿನ ಅತ್ಯದ್ಭುತ ಸಂಶೋಧನೆ ಅಂದ್ರೆ ವಿಮಾನ. ಏರೋಪ್ಲೇನ್ ಕಂಡುಹಿಡಿದ ಸಾಧನೆಯ ಕ್ರೆಡಿಟ್ ರೈಟ್ ಬ್ರದರ್ಸ್‌ಗೆ ಸೇರುತ್ತೆ. ಆದ್ರೆ, ಭೂಮಂಡಲದಲ್ಲಿ ಮೊಟ್ಟ ಮೊದಲ ವಿಮಾನ ಯಾವುದು ಅನ್ನೋ ಪ್ರಶ್ನೆಗೆ ಪುಷ್ಪಕ ವಿಮಾನ ಅನ್ನೋದು ಬಹುತೇಕರ ಉತ್ತರ.. ಆದ್ರೆ, ನಿಜಕ್ಕೂ ಪುಷ್ಪಕ ವಿಮಾನ ಎಂಬುದು ಇತ್ತಾ? ಅದನ್ನ ಕಂಡು ಹಿಡಿಯೋದಕ್ಕೆ ಅಂತಾನೇ ಈಗ ಸಂಶೋಧನೆಗೇ ಕೈ ಹಾಕಲಾಗ್ತಿದೆ..
ರಾಮಾಯಣ ಪುಸ್ತಕ ಓದಿದವರಿಗೆ, ಅಜ್ಜ ಅಜ್ಜಿಯಿಂದ ರಾಮಾಯಣದ ಕಥೆ ಕೇಳಿದವರಿಗೆ ಶ್ರೀರಾಮ ಹೇಗೆ ನೆನಪಲ್ಲಿ ಇರುತ್ತಾನೋ ಅದೇ ರೀತಿ ರಾವಣ ಕೂಡ ನೆನಪಲ್ಲಿ ಅಚ್ಚಳಿಯದೇ ಉಳಿದಿರುತ್ತಾನೆ. ಶ್ರೀರಾಮ, ಲಕ್ಷ್ಮಣ, ಸೀತೆ 14 ವರ್ಷ ವನವಾಸಕ್ಕೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಸೀತೆ ಬಂಗಾರದ ಜಿಂಕೆ ನೋಡಿ ಮಾರು ಹೋಗುತ್ತಾಳೆ. ಸೀತೆಗಾಗಿ ಅದನ್ನು ಹಿಡಿಯಲು ರಾಮ ಹೋಗ್ತಾನೆ. ಹಾಗೇ ಲಕ್ಷ್ಮಣ ರಾಮನನ್ನು ಹಿಂಬಾಲಿಸ್ತಾನೆ. ಆದ್ರೆ, ಆ ಟೈಮ್ಗೆ ಸೀತೆಯೊಬ್ಬಳನ್ನೇ ಬಿಟ್ಟು ಹೋಗಲು ಲಕ್ಷ್ಮಣನ ಮನಸ್ಸು ಒಪ್ಪುವುದಿಲ್ಲ.
ಲಕ್ಷ್ಮಣ ಹೊರಡುವಾಗ ಮನೆಯ ಮುಂದೆ ರೇಖೆ ಎಳೆದು ಹೋಗ್ತಾನೆ. ಆ ರೇಖೆಯನ್ನು ದಾಟಿ ಹೋಗದಂತೆ ಸೀತೆಗೆ ಸೂಚನೆ ಕೂಡ ಕೊಡುತ್ತಾನೆ. ಆದ್ರೆ, ಸೀತೆಯನ್ನು ಅಪಹರಿಸಿಕೊಂಡು ಹೋಗಲು ಬರುವ ರಾವಣನಿಗೆ ಲಕ್ಷ್ಮಣ ರೇಖೆ ದಾಟಲು ಸಾಧ್ಯವಾಗಲ್ಲ. ಹೀಗಾಗಿ, ರಾವಣಮಾರುವೇಷದಲ್ಲಿ ಬಂದು ಸೀತೆಯನ್ನ ಕರೆಯುತ್ತಾನೆ. ಭಿಕ್ಷೆ ಹಾಕಲು ಬರುವ ಸೀತೆ ಲಕ್ಷ್ಮಣ ರೇಖೆ ದಾಟುತ್ತಾಳೆ. ಆಗಲೇ ನೋಡಿ, ರಾವಣ ಸೀತೆಯನ್ನು ಅಪಹರಿಸೋದು. ಅದೂ ಪುಷ್ಪಕ ವಿಮಾನದಲ್ಲಿ.
ಭೂಮಂಡಲದ ಮೊಟ್ಟ ಮೊದಲ ವಿಮಾನ ಪುಷ್ಪಕ ವಿಮಾನ?
ವಿಮಾನದ ಮೊಟ್ಟ ಮೊದಲ ಪೈಲಟ್ ಲಂಕಾಧಿಪತಿ ರಾವಣ?
ಸದ್ಯ, ಹೀಗೊಂದು ಪ್ರಶ್ನೆ ಹುಟ್ಟಿದೆ. ಪುಷ್ಪಕ ವಿಮಾನದ ಬಗ್ಗೆ ಪುರಾಣದಲ್ಲಿ ಬೇರೆ ಬೇರೆ ರೀತಿಯ ಕಥೆಗಳಿವೆ.. ಆದ್ರೆ, ಶ್ರೀಲಂಕಾ ಜನರ ನಂಬಿಕೆಯ ಪ್ರಕಾರ ಭೂ ಮಂಡಲದ ಮೊಟ್ಟ ಮೊದಲ ವಿಮಾನ ಪುಷ್ಪಕ ವಿಮಾನ. ಇದರ ಮೊದಲ ಪೈಲಟ್ ದಶಕಂಠ ರಾವಣ. ಲಂಕಾ ರಾಜನಾಗಿದ್ದ ರಾವಣ ಚಿನ್ನದ ಅರಮನೆಯನ್ನೇ ಹೊಂದಿದ್ದ ವ್ಯಕ್ತಿ. ಆತ ತನ್ನ ವಾಹನವಾಗಿ ಪುಷ್ಪಕ ವಿಮಾನವನ್ನೇ ಬಳಸುತ್ತಿದ್ದ. ಅದೇ ವಾಹನದಲ್ಲಿಯೇ ಆತ ಭಾರತಕ್ಕೆ ಪ್ರಯಾಣ ಬಂದಿದ್ದ ಅನ್ನೋ ನಂಬಿಕೆಯೂ ಇದೆ. ಆದ್ರೆ, ನಿಜಕ್ಕೂ ರಾವಣನ ಬಳಿ ಪುಷ್ಪಕ ವಿಮಾನ ಇತ್ತಾ? ಅದರಲ್ಲಿ ಆತ ಸೀತೆಯನ್ನು ಅಪಹರಣ ಮಾಡಿದ್ದು ಹೌದಾ? ರಾವಣನೇ ಭೂಮಂಡಲದ ಮೊದಲ ಪೈಲೆಟಾ? ಇಂತಹ ಹತ್ತಾರು ಪ್ರಶ್ನೆಗಳಿಗೆ ವೈಜ್ಞಾನಿಕ ದಾಖಲೆಗಳು ಇಲ್ಲ. ಹಾಗಾದ್ರೆ ಸಂಶೋಧನೆ ಮಾಡಿದ್ರೆ ವೈಜ್ಞಾನಿಕ ದಾಖಲೆಗಳು ಸಿಗುತ್ತವಾ? ಅಂತಹವೊಂದು ಪ್ರಯತ್ನಕ್ಕೆ ಲಂಕಾ ಸರ್ಕಾರ ಕೈ ಹಾಕಿದೆ.
ಶ್ರೀಲಂಕಾ ಸರ್ಕಾರದಿಂದ ಸಂಶೋಧನೆ ಆರಂಭ
ಪುಷ್ಪಕ ವಿಮಾನದ ವೈಜ್ಞಾನಿಕ ದಾಖಲೆ ಸಂಗ್ರಹ ಸಿದ್ಧ
ಆಧುನಿಕ ಜಗತ್ತಿನಲ್ಲಿ ವಿಮಾನವನ್ನು ಸಂಶೋಧಿಸಿದವರು ರೈಟ್ ಬ್ರದರ್ಸ್ ಅನ್ನೋದನ್ನ ಇತಿಹಾಸ ಹೇಳುತ್ತದೆ. ಏರೋಪ್ಲೇನ್ನ ಕಂಡು ಹಿಡಿದ ಮೇಲೆ ಅದರ ಡಿಸೈನ್ ಕೂಡ ಕಾಲಕ್ಕೆ ತಕ್ಕಂತೆ ಬದಲಾಯ್ತು. ವಿಮಾನದ ರಚನೆಯಲ್ಲೂ.. ಹೆಚ್ಚಿನ ಜನರನ್ನು ಹೊತ್ತು ಸಾಗುವ, ಮಣಭಾರದ ಲಗೇಜ್ಗಳನ್ನ ತನ್ನಲ್ಲಡಗಿಸಿಕೊಂಡು ದೇಶ ವಿದೇಶ ಸುತ್ತುವ ವಿಮಾನಗಳನ್ನ ಕಂಡು ಹಿಡಿಯಲಾಯ್ತು.. ಆನಂತರ ದೇಶದ ರಕ್ಷಣೆಗಾಗಿ ಹೋರಾಡುವ ಫೈಟರ್ ಜೆಟ್‌ಗಳು ಬೆಳಕಿಗೆ ಬಂದ್ವು. ಇಂದು ವಿಮಾನಯಾನ ಕ್ಷೇತ್ರ ಜಗತ್ತಿನಲ್ಲೇ ಅತ್ಯಾಧುನಿಕತೆಯ ವೈಭೋಗದೊಂದಿಗೆ ರಾರಾಜಿಸುತ್ತಿದೆ.. ಆದ್ರೆ, ಭೂಮಂಡಲದ ಮೊಟ್ಟ ಮೊದಲ ವಿಮಾನ ಪುಷ್ಪಕ ವಿಮಾನ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಲಂಕಾ ಸರ್ಕಾರ ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸಲು ಟೀಮ್ ರೆಡಿಮಾಡಿದೆ. ಆ ಟೀಮ್‌ನ ಕೆಲಸದ ಬಗ್ಗೆ ಹೇಳ್ತೀವಿ ಅದಕ್ಕೂ ಮುನ್ನ ನಾವು ತೋರಿಸುವ ಈ ವಿಡಿಯೋವನ್ನು ಒಮ್ಮೆ ನೋಡಿ
ಪುಷ್ಪಕ ವಿಮಾನದಲ್ಲಿ ಹಾರಾಡಿದ್ದ ‘ದಶಕಂಠ’
ಭೂಮಂಡಲದ ಮೊದಲ ಫ್ಲೈಟ್ ರಾವಣನ ‘ವಿಮಾನ’?
ಇದು, ಲಂಕಾದಲ್ಲಿರೋ ರಾವಣದ ಅರಮನೆಯ ಸ್ಥಳ ಅನ್ನೋದು ರಾಮಾಯಾಣ ನಂಬಿದವರ ವಾದ.. ಹಚ್ಚ ಹಸಿರಿನ ಪ್ರಕೃತಿಯ ನಡುವೆ ಬೃಹತ್ತಾಕಾರದ ಕಲ್ಲಿನ ಬಂಡೆ ಅದು. ಇಲ್ಲಿಯೇ ಲಂಕಾಧಿಪತಿಯ ಅರಮನೆ ಇತ್ತು. ರಾವಣ ಇಲ್ಲಿಯೇ ವಾಸ ಮಾಡುತ್ತಿದ್ದ. ವಿಶೇಷ ಅಂದ್ರೆ ಆತನ ಪುಷ್ಪಕ ವಿಮಾನ ಇಲ್ಲಿಯಿಂದಲೇ ಹಾರುವುದು, ಇಳಿಯುವುದು ಮಾಡುತ್ತಿತ್ತು ಅಂತಾ ಹೇಳಲಾಗುತ್ತದೆ. ಈ ಜಾಗದಲ್ಲಿ ಪುಷ್ಪಕ ವಿಮಾನ ನಿಲ್ಲುತ್ತಿದ್ದ ಸ್ಥಳವನ್ನೂ ಇಂದಿಗೂ ಮಾರ್ಕ್ ಮಾಡಲಾಗಿದೆ.. ಅರಮನೆ ನೋಡಲು ಹೋಗುವ ಪ್ರವಾಸಿಗರು ಆ ಸ್ಥಳವನ್ನು ನೋಡಿಯೇ ವಾಪಸ್ ಆಗ್ತಾರೆ..
ಹಾಗೇ ನೋಡಿದ್ರೆ, ರಾವಣ ಕಾಲ್ಪನಿಕ ವ್ಯಕ್ತಿಯಲ್ಲ, ಆತ ನಿಜವಾಗಿಯೂ ಇದ್ದ ಅನ್ನೋದು ಲಂಕಾ ಜನರ ನಂಬಿಕೆ. ರಾಮ ಇದ್ದ ಎಂದ ಮೇಲೆ ರಾವಣನೂ ಇರಲೇಬೇಕಲ್ವಾ?.. ಹಾಗೇ ರಾವಣನ ಇರುವಿಕೆ ಬಗ್ಗೆ ಲಂಕಾ ಮತ್ತು ಭಾರತದಲ್ಲಿ ಅನೇಕ ಕುರುಹುಗಳು ಪತ್ತೆಯಾಗಿವೆ ಅನ್ನೋದನ್ನ ನಂಬಲೇಬೇಕು . ಹೀಗಾಗಿ, ಲಂಕಾ ಸರ್ಕಾರ ಎರಡು ವರ್ಷಗಳ ಹಿಂದೆಯೇ ನಾಗರಿಕ ವಿಮಾನಯಾನ ಕ್ಷೇತ್ರದ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳ ಸಮಾವೇಶವನ್ನು ಆಯೋಜಿಸಿ ರಾವಣನ ವೈಮಾನಿಕ ಸಾಹಸಗಳ ಬಗ್ಗೆ ಚರ್ಚೆ ನಡೆಸಿದ್ದರು. ಅನಂತರ ಒಂದು ತಂಡವನ್ನು ರಚನೆ ಮಾಡಿ ವೈಜ್ಞಾನಿಕ ಸಾಕ್ಷಿಗಳ ಸಂಗ್ರಹಕ್ಕೆ ಸಿದ್ಧಪಡಿಸಲಾಗಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಶೋಧನೆ ಆರಂಭವಾಗಿರಲಿಲ್ಲ.
ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ಉಲ್ಲೇಖ
ಲಂಕಾಧಿಪತಿಯ ಬಳಿ ನಿಜಕ್ಕೂ ಇತ್ತಾ ಪುಷ್ಪಕ ವಿಮಾನ?
ಈಗ ಕೊರೊನಾ ಪ್ರಕರಣಗಳೂ ಕಡಿಮೆಯಾಗಿವೆ.. ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದೆ. ಹೀಗಾಗಿ, ಮತ್ತೆ ಸಂಶೋಧನೆ ಆರಂಭವಾಗುವ ಬಗ್ಗೆ ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ಧನತುಂಗೆ ಅಭಿಪ್ರಾಯಪಟ್ಟಿದ್ದಾರೆ.
ರಾವಣನ ಬಳಿ ಪುಷ್ಪಕ ವಿಮಾನ ಇತ್ತೋ ಇಲ್ವೋ? ಅದು ನಿಜವೋ ಅಥವಾ ಕಾಲ್ಪನಿಕವೋ ಅನ್ನೋದರ ಬಗ್ಗೆ ವಾದ ಪ್ರತಿವಾದಗಳು ದಶಕಗಳಿಂದಾನೂ ನಡೀತಾನೇ ಬಂದಿವೆ. ಕೆಲವರು ನಬ್ತಾರೆ, ಇನ್ನು ಕೆಲವರು ನಂಬೋದಿಲ್ಲ. ಆದ್ರೆ, ಲಂಕಾ ಜನರಲ್ಲಿ ಮಾತ್ರ ರಾವಣ ಹಾಗೂ ಪುಷ್ಪಕ ವಿಮಾನದ ಬಗ್ಗೆ ಬಲವಾದ ನಂಬಿಕೆ ಇದೆ. ಇದೇ ಹಿನ್ನೆಲೆಯಲ್ಲಿ ವೈಜ್ಞಾನಿಕ ದಾಖಲೆ ಸಂಗ್ರಹಕ್ಕೆ ಸಂಶೋಧನಾ ತಂಡ ರಚನೆ ಮಾಡಿದೆ. ಭಾರತಕ್ಕೆ ಕೂಡ ಆಹ್ವಾನ ನೀಡಿದೆ.
ಸಾಬೀತಿಗೆ ಲಂಕಾ ಸರ್ಕಾರದಿಂದ ಸಿದ್ಧವಾಯ್ತು ಟೀಮ್
ವೈಜ್ಞಾನಿಕ ದಾಖಲೆ ಹೇಗೆ ಕಲೆ ಹಾಕಲಾಗುತ್ತೆ ಗೊತ್ತಾ?
ಭಾರತಕ್ಕೂ ಬಂತು ಶ್ರೀಲಂಕಾ ಸರ್ಕಾರದ ಆಹ್ವಾನ
ಭಾರತದ ಪುರಾಣಗಳು ಲಂಕಾ ಜನರ ನಂಬಿಕೆಯನ್ನು ಸಮರ್ಥಿಸುವುದಿಲ್ಲ. ಪುಷ್ಪಕ ವಿಮಾನ ಮೊದಲು ಇದ್ದದ್ದು ಬ್ರಹ್ಮನ ಬಳಿ. ಆನಂತರ ಅದು ವಂಶಪರಂಪರೆಯಾಗಿ ಕುಬೇರನ ಕೈಸೇರುತ್ತದೆ. ಕುಬೇರ ಕೂಡ ಲಂಕೆಯಲ್ಲಿಯೇ ಇದ್ದುಕೊಂಡು ಪುಷ್ಪಕ ವಿಮಾನ ಬಳಸುತ್ತಿರುತ್ತಾನೆ. ಅಂತಹ ಸಂದರ್ಭದಲ್ಲಿ ತನ್ನ ಮಲತಾಯಿ ಮಗನಾದ ಕುಬೇರನ ಬಳಿ ಇರೋ ಪುಷ್ಕಕ ವಿಮಾನವನ್ನು ರಾವಣ ವಶಪಡಿಸಿಕೊಳ್ಳುತ್ತಾನೆ ಅನ್ನೋದನ್ನು ಭಾರತದ ಪುರಾಣಗಳು ಹೇಳುತ್ತವೆ.
ವೈಜ್ಞಾನಿಕ ದಾಖಲೆ ಸಂಗ್ರಹ ಸಾಧ್ಯನಾ?
ಹೇಗೆ ನಡೆಯುತ್ತೆ ವೈಜ್ಞಾನಿಕ ದಾಖಲೆ ಸಂಗ್ರಹ
ಸಾಮಾನ್ಯವಾಗಿ ನಾಲ್ಕು ಯುಗಗಳು ಬರುತ್ತವೆ. ಅದರಲ್ಲಿ ಮೊದಲನೇ ಯುಗ ಸತ್ಯಯುಗ, 17 ಲಕ್ಷದ 28 ಸಾವಿರ ವರ್ಷಗಳು ಅದರ ಅವಧಿ, ಎರಡನೇಯದು ತ್ರೇತಾಯುಗ, ಅದರ ಅವಧಿ 12 ಲಕ್ಷದ 96 ಸಾವಿರ ವರ್ಷ. ಈ ಯುಗದಲ್ಲಿಯೇ ರಾಮಾಯಣದ ಕಾಲ ನಡೆದಿರುವುದು, ಶ್ರೀರಾಮ, ರಾವಣ ಅದೇ ಕಾಲದಲ್ಲಿ ವಾಸ ಮಾಡಿದವರು. ಆನಂತರ ಮೂರನೇ ಯುಗವಾಗಿ ಕಾಣಿಸಿಕೊಂಡ ದ್ವಾಪರ ಯುಗದ ಅವಧಿ 8 ಲಕ್ಷದ 64 ಸಾವಿರ ವರ್ಷ ಆಗಿತ್ತು. ನಾಲ್ಕನೇ ಯುಗವಾಗಿ ಕಲಿಯುಗ ಆರಂಭವಾಗಿದ್ದು………ಈಗ ಇರೋ ಪ್ರಶ್ನೆ ಅಂದ್ರೆ ಅಷ್ಟೊಂದು ಲಕ್ಷಾಂತರ ವರ್ಷಗಳ ಹಿಂದೆ ನಡೆದ ಘಟನೆಯ ವೈಜ್ಞಾನಿಕ ಸಾಕ್ಷಿ ಸಂಗ್ರಹಿಸಲು ಸಾಧ್ಯನಾ? ಅನ್ನೋ ಪ್ರಶ್ನೆಗೆ ಸಂಶೋಧನಾ ವರದಿಯ ನಂತರವೇ ಉತ್ತರಿಸಲು ಸಾಧ್ಯ.
ರಾವಣ ಇದ್ನೋ ಇಲ್ವೋ? ಪುಷ್ಪಕ ವಿಮಾನ ಇತ್ತೋ ಇಲ್ವೋ? ಅನ್ನೋದು ನಂತರದ ಪ್ರಶ್ನೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ಕುರುಹುಗಳು ಭಾರತ ಮತ್ತು ಲಂಕಾದಲ್ಲಿ ಸಿಕ್ಕಿವೆ. ಹೀಗಾಗಿ ಸಂಶೋಧನೆಗೆ ತಂಡ ರಚಿಸಿರೋದು ಲಂಕಾ ಸರ್ಕಾರದ ಪ್ರಶಂಸನೀಯ ಕಾರ್ಯ. ಆದ್ರೆ, ಇದರಲ್ಲಿ ಶ್ರೀಲಂಕಾ ಸರ್ಕಾರ ಯಶಸ್ವಿಯಾಗುತ್ತಾ ಅನ್ನೋದೇ ಈಗಿರೋ ಯಕ್ಷ ಪ್ರಶ್ನೆ.