ದಸರಾ ಉತ್ಸವ ಕೇವಲ ಮೈಸೂರಿನವರಿಗೆ ಮಾತ್ರ ಅಲ್ಲ, ದೇಶ-ವಿದೇಶಗಳಿಂದ ಜನ ಉತ್ಸವ ನೋಡಲು ಬರುತ್ತಾರೆ: ಸೋಮಶೇಖರ್ | Dasara Utsav is not confined Mysureans alone, people from across the globe come to watch it: Somashekhar, ministerಭಾರತದ ಮೂಲೆಮೂಲೆಗಳಿಂದ ಮತ್ತು ವಿದೇಶಗಳಿಂದಲೂ ಜನ ಮೈಸೂರಿಗೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರಿಗೂ ಸಮಾನವಾಗಿ ಪಾಸುಗಳನ್ನು ಹಂಚಲಾಗಿದೆ, ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಅಂತ ಖಾರವಾಗಿ ಹೇಳಿದರು.

TV9kannada Web Team


| Edited By: Arun Belly

Oct 04, 2022 | 1:08 PM
ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ (ST Somashekhar) ದಸರಾ ಉತ್ಸವ-2022 ಪಾಸುಗಳನ್ನು ತಮಗೆ ಬೇಕಾದವರಿಗೆ ಅದರಲ್ಲೂ ಬೆಂಗಳೂರಿನಲ್ಲಿರುವ ಅವರ ಮತಕ್ಷೇತ್ರ (Yashwanthpur) ಜನರಿಗೆ ಹೆಚ್ಚು ಹಂಚಿದ್ದಾರೆ ಎಂಬ ಆರೋಪ ಕೇಳಿಬರುತ್ತದೆ. ಇದಕ್ಕೆ ಮೈಸೂರಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು, ದಸರಾ ಉತ್ಸವ ಕೇವಲ ಮೈಸೂರಿನವರಿಗೆ (Mysureans) ಮಾತ್ರವೇ? ಭಾರತದ ಮೂಲೆಮೂಲೆಗಳಿಂದ ಮತ್ತು ವಿದೇಶಗಳಿಂದಲೂ ಜನ ಮೈಸೂರಿಗೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರಿಗೂ ಸಮಾನವಾಗಿ ಪಾಸುಗಳನ್ನು ಹಂಚಲಾಗಿದೆ, ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಅಂತ ಖಾರವಾಗಿ ಹೇಳಿದರು.

TV9 Kannada


Leave a Reply

Your email address will not be published.