ದಸರಾ 2022: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ | Bengaluru airport decked up with ‘Bombe Habba’ ahead of Dussehra


ನಾಡಹಬ್ಬ ದಸರಾ ವಿಶೇಷವಾಗಿ ಬುಧವಾರ ಸೆ. 28 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ದಸರಾ 2022: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳ ಪ್ರದರ್ಶನ

ಬೆಂಗಳೂರು: ರಾಜ್ಯದಲ್ಲಿ ರಾಜ-ಮಹಾರಾಜ ಕಾಲದಿಂದನು ದಸರಾ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂಡಿಸುತ್ತಾರೆ. ಅಕ್ಕ-ಪಕ್ಕದ ಮನೆಯವರಿಗೆ ಕರೆದು ಗೊಂಬೆಗಳನ್ನು ತೋರಿಸುತ್ತಾರೆ. ಈ ರೀತಿಯಾಗಿ ಗೊಂಬೆಗಳನ್ನು ದಕ್ಷಿಣ ಭಾರತದ ರಾಜ್ಯಗಳ ಮನೆಗಳಲ್ಲಿ ಕೂಡಿಸುತ್ತಾರೆ. ಇದೇ ರೀತಿಯಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಕೂರಿಸಿದ್ದು, ಜನರ ಗೊಂಬೆಗಳತ್ತ ಆಕರ್ಶಿತರಾಗುತ್ತಿದ್ದಾರೆ.

ನಾಡಹಬ್ಬ ದಸರಾ ವಿಶೇಷವಾಗಿ ಬುಧವಾರ ಸೆ. 28 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಕುರಿತು ಟ್ವೀಟ್​ ಮಾಡಿದ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ನಾಡಹಬ್ಬ ದಸರಾ ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳು ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲು ತಯಾರಿ ಮಾಡುತ್ತಿರುವ ಸಂದರ್ಭ ಎಂದು ಶಿರ್ಶಿಕೆ ನೀಡಿ ಫೋಟೋ ಹಂಚಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರಾಮ, ಸೀತೆ, ವಿವಿಧ ಉಡುಪುಗಳಲ್ಲಿ ದುರ್ಗಾದೇವಿಯ ಗೊಂಬೆಗಳು ಮತ್ತು ರಾಮಾಯಣವನ್ನು ಸನ್ನಿವೇಶವನ್ನು ವಿವರಿಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬಿಜೆಪಿಯ ಕರ್ನಾಟಕ ರಾಜ್ಯ ಮಹಿಳಾ ಘಟಕ ತೇಜಸ್ವಿನಿ ಅನಂತ್‌ಕುಮಾರ್‌ ಟ್ವೀಟ್‌ ಮಾಡಿ “ನಾನು ಗೋರಖ್‌ಪುರದಿಂದ ಬೆಂಗಳೂರಿಗೆ ಬಂದಿಳಿದಾಗ, ದಸರಾ ಉತ್ಸವಕ್ಕಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಗೊಂಬೆಗಳನ್ನು ಜೋಡಿಸುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ದೇಶ ಬದಲಾಗುತ್ತಿದೆ. ಇದು ಹೊಸ ಭಾರತ. ಅನಂತ ಕನಸಿನ ಅದಮ್ಯ ಭಾರತ. ನವರಾತ್ರಿಯ ಶುಭಾಶಯಗಳು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.